ಬಿಗ್​ ಬಾಸ್​ ಮನೆಯಲ್ಲಿ ಕಿತ್ತಾಟ; ರಾಜೀವ್​ ಕೊಟ್ಟ ಏಟಿಗೆ ಮಂಜು ಹಲ್ಲೇ ಉದುರೋಯ್ತು!

ಮಂಜು ಮತ್ತು ರಾಜೀವ್​ ನಡುವೆ ಆದ ಒಂದು ಡಿಕ್ಕಿಯಿಂದ ಮಂಜು ಅವರ ಹಲ್ಲೇ ಮುರಿದು ಹೋಗಿದೆ. ಈ ವಿಚಾರ ಈಗ ಸಾಕಷ್ಟು ಚರ್ಚೆ ಆಗುತ್ತಿದೆ.

ಬಿಗ್​ ಬಾಸ್​ ಮನೆಯಲ್ಲಿ ಕಿತ್ತಾಟ; ರಾಜೀವ್​ ಕೊಟ್ಟ ಏಟಿಗೆ ಮಂಜು ಹಲ್ಲೇ ಉದುರೋಯ್ತು!
ಮಂಜು ಪಾವಗಡ-ರಾಜೀವ್​
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Mar 31, 2021 | 8:01 AM

ಬಿಗ್​ ಬಾಸ್​ ಮನೆಯಲ್ಲಿ ಸದಾ ಆ್ಯಕ್ಟಿವ್​ ಆಗಿರುವ ಮಂಜು ಹಲ್ಲು ಕಳೆದುಕೊಂಡಿದ್ದಾರೆ! ಬಿಗ್​ ಬಾಸ್​ ಮನೆಯಲ್ಲಿ ನೀಡಿದ ಟಾಸ್ಕ್​ ಒಂದನ್ನು ಆಡುವಾಗ ರಾಜೀವ್​ ಕೈ ತಾಗಿ ಮಂಜು ಅವರ ಹಲ್ಲೇ ಮುರಿದು ಹೋಗಿದೆ. ಸದ್ಯ ಹಲ್ಲು ಕಳೆದುಕೊಂಡ ಮಂಜು ಅವರು ತುಂಬಾನೇ ಬೇಸರಗೊಂಡಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಎರಡು ಟೀಂಗಳನ್ನು ಮಾಡಲಾಗಿದೆ. ಒಂದು ಟೀಂಗೆ ದಿವ್ಯಾ ಕ್ಯಾಪ್ಟನ್​ ಆದರೆ, ಮತ್ತೊಂದು ತಂಡಕ್ಕೆ ಶುಭಾ ಪೂಂಜಾ ಕ್ಯಾಪ್ಟನ್​. ಇಟ್ಟಿಗೆ ಸಂಗ್ರಹಿಸಿ ಗೋಪುರ ಕಟ್ಟಿ ಅದನ್ನು ಕಾಯ್ದುಕೊಳ್ಳಬೇಕು. ಸಾಮಾನ್ಯ ಬಣ್ಣದ ಇಟ್ಟಿಗೆಗೆ 1 ಅಂಕ, ಕಲರ್​ ಫುಲ್​ ಇಟ್ಟಿಗೆಗೆ 3 ಅಂಕ.

ಈ ಗೇಮ್​ ಅನ್ನು ಎರಡೂ ತಂಡದ ಆಟಗಾರರು ಉತ್ಸಾಹದಿಂದ ಆಡುತ್ತಿದ್ದರು. ವೈರಸ್​-ಮನುಷ್ಯ ಟಾಸ್ಕ್​ನಲ್ಲಿ ಎರಡೂ ತಂಡದವರು ಕಿತ್ತಾಡಿಕೊಂಡು ಇಡೀ ಟಾಸ್ಕ್​ ರದ್ದಾಗಿತ್ತು. ಇದು ಈಗ ಮತ್ತೆ ಪುನರಾವರ್ತನೆ ಆಗದಂತೆ ನೋಡಿಕೊಳ್ಳಲು ಎರಡೂ ತಂಡದವರು ಪಣ ತೊಟ್ಟಿದ್ದರು. ಅಷ್ಟೇ ಅಲ್ಲ, ಪರಸ್ಪರ ಕಿತ್ತಾಡಿಕೊಳ್ಳದಂತೆ ಸೂಚನೆ ನೀಡಲಾಗಿತ್ತು.

ಆದರೆ, ಮಂಜು ಮತ್ತು ರಾಜೀವ್​ ನಡುವೆ ಆದ ಒಂದು ಡಿಕ್ಕಿಯಿಂದ ಮಂಜು ಅವರ ಹಲ್ಲೇ ಮುರಿದು ಹೋಗಿದೆ. ಮಂಜು ಅವರು ರಾಜೀವ್​ ಹಿಂದೆ ನಿಂತಿದ್ದರು. ರಾಜೀವ್​ ಹಿಂದೆ ತಿರುಗಲು ಕೈ ಬೀಸಿದ್ದಾರೆ. ಆಗ ಕೈ ಮಂಜು ಬಾಯಿಗೆ ಹೊಡೆದಿದೆ. ಆಗ ಮಂಜು ಹಲ್ಲು ಮುರಿದು ರಾಜೀವ್ ಕೈಗೆ ನಾಟಿದೆ. ಇಬ್ಬರೂ ನೋವಿನಿಂದ ಒದ್ದಾಡಿದ್ದಾರೆ. ಮಂಜು ಬಾಯಿಯಿಂದ ಹಲ್ಲು ಉದುರುತ್ತಿದ್ದಂತೆಯೇ ರಕ್ತ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ, ಒಮ್ಮೆ ಅವರಿಗೆ ತಲೆ ಸುತ್ತಿದೆ. ನಂತರ ವಾಷ್​ ರೂಂಗೆ ತೆರಳಿ ಬಾಯಿ ತೊಳೆದುಕೊಂಡಿದ್ದಾರೆ.

ಇದು ಇಬ್ಬರಿಗೂ ಗೊತ್ತಾಗದೆ ಆದ ಘಟನೆ. ಹೀಗಾಗಿ, ಇಬ್ಬರೂ ಪರಸ್ಪರ ಕ್ಷಮೆ ಕೇಳಿದ್ದಾರೆ. ಅಷ್ಟೇ ಅಲ್ಲ, ತಮಗೆ ಆದ ನೋವಿನ ಘಟನೆಯ ಬಗ್ಗೆ ಪರಸ್ಪರ ವಿವರಿಸಿದ್ದಾರೆ.

ಇದನ್ನೂ ಓದಿ: ‘ನನ್ನ ಜೀವನದಲ್ಲಿ ದಿವ್ಯಾಗೆ ಶಾಶ್ವತ ಸ್ಥಾನ; ಮೊದಲು ಇವರೇ, ಕೊನೆಯೂ ಇವರೇ’! ಮಂಜು ಲವ್​ ಇನ್ನಷ್ಟು ಸೀರಿಯಸ್​

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?