Bigg Boss Kannada: ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ; ಯಾರದು?

ಪ್ರಶಾಂತ್​ ಸಂಬರಗಿ ಈಗಾಗಲೇ ಮನೆಯವರ ದೃಷ್ಟಿಯಲ್ಲಿ ಕೆಟ್ಟವರಾಗಿದ್ದಾರೆ. ಅದಕ್ಕೆ ಕಾರಣ ಅವರ ನಡವಳಿಕೆ. ಒಂದೊಮ್ಮೆ ಹೊಸ ಸ್ಪರ್ಧಿ ಕೂಡ ಅದೇ ರೀತಿ ನಡೆದುಕೊಂಡರೆ ಮನೆಯಲ್ಲಿ ಮತ್ತೊಂದಷ್ಟು ಜಗಳಗಳು ನಡೆಯಬಹುದು.

Bigg Boss Kannada: ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ; ಯಾರದು?
ಚಕ್ರವರ್ತಿ ಚಂದ್ರಚೂಡ
Follow us
ರಾಜೇಶ್ ದುಗ್ಗುಮನೆ
|

Updated on: Apr 01, 2021 | 3:27 PM

ಬಿಗ್​ ಬಾಸ್​ ಮನೆಯಲ್ಲಿ ಇತ್ತೀಚೆಗಷ್ಟೇ ವೈಲ್ಡ್​ ಕಾರ್ಡ್​ ಎಂಟ್ರಿ ಬಗ್ಗೆ ಚರ್ಚೆ ಆಗಿತ್ತು. ಮನೆ ಒಳಗೆ ಬಂದವರನ್ನು ಪ್ರಶಾಂತ್​ ಸಂಬರಗಿ ತಮ್ಮೆಡೆ ಸೆಳೆದುಕೊಳ್ಳುತ್ತಾರೆ ಎನ್ನುವ ಮಾತು ಕೂಡ ಕೇಳಿ ಬಂದಿತ್ತು. ಈ ವಿಚಾರ ಇಟ್ಟುಕೊಂಡು ಮನೆಯವರೆಲ್ಲ ಜೋಕ್​ ಮಾಡಿಕೊಂಡು ನಕ್ಕಿದ್ದರು. ಇದಾದ ಬೆನ್ನಲ್ಲೇ ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ ಆಗಿದೆ. ಅಷ್ಟಕ್ಕೂ ಬಿಗ್​ ಬಾಸ್​ ಮನೆಗೆ ಪ್ರವೇಶಿಸಿದವರು ಯಾರು? ಅವರ ಹಿನ್ನೆಲೆ ಏನು ಎನ್ನುವ ಬಗ್ಗೆ ಇಲ್ಲಿದೆ ಉತ್ತರ. ಬಿಗ್​ ಬಾಸ್​ ಮನೆಗೆ ಬಂದ ಹೊಸ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ ಎಂಬ ಮಾಹಿತಿ ಕೇಳಿಬಂದಿದೆ. ಪತ್ರಿಕೋದ್ಯಮದಿಂದ ತಮ್ಮ ವೃತ್ತಿ ಆರಂಭಿಸಿದ ಅವರು ನಂತರ ಕಾಲಿಟ್ಟಿದ್ದು ಚಿತ್ರರಂಗಕ್ಕೆ. ಇವರು ಸಿನಿಮಾ ನಿರ್ದೇಶನಕ್ಕೆ ಇಳಿದರು. ಈಗ ನೇರವಾಗಿ ಬಿಗ್​ ಬಾಸ್​ ಮನೆಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಈಗಾಗಲೇ ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಮಾತು ಕೇಳಿ ಎಲ್ಲರಿಗೂ ಸಾಕಾಗಿದೆ. ಅವರು ನಡೆದುಕೊಳ್ಳುವ ರೀತಿ ಸಾಕಷ್ಟು ಜನರಿಗೆ ಇಷ್ಟವಾಗುತ್ತಿಲ್ಲ. ಮಾತಿನಲ್ಲಿ ಚಕ್ರವರ್ತಿ ಚಂದ್ರಚೂಡ್​ ಕೂಡ ನಿಪುಣರು. ಅವರ ಎದುರು ಪ್ರಶಾಂತ್​ ಜಿದ್ದಿಗೆ ಬಿದ್ದರೆ ಬಿಗ್​ ಬಾಸ್​ ಮನೆಯಲ್ಲಿ ಒಂದಷ್ಟು ಮಾತಿನ ಸಮರಗಳನ್ನು ನಿರೀಕ್ಷೆ ಮಾಡಬಹುದೇನೋ.

ಇಂದು ಬಿಗ್​ ಬಾಸ್​ ಮನೆಗೆ ಹೊಸ ಎಂಟ್ರಿ ಆಗಲಿದೆ ಎನ್ನುವ ಬಗ್ಗೆ ಬಿಗ್​ ಬಾಸ್​ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಆದರೆ, ಅವರು ಯಾರು ಎನ್ನುವ ವಿಚಾರದಲ್ಲಿ ವಾಹಿನಿ ರಹಸ್ಯ ಕಾಯ್ದುಕೊಂಡಿದೆ.

ಪ್ರಶಾಂತ್​ ಸಂಬರಗಿ ಈಗಾಗಲೇ ಮನೆಯವರ ದೃಷ್ಟಿಯಲ್ಲಿ ಕೆಟ್ಟವರಾಗಿದ್ದಾರೆ. ಅದಕ್ಕೆ ಕಾರಣ ಅವರ ನಡವಳಿಕೆ. ಒಂದೊಮ್ಮೆ ಚಕ್ರವರ್ತಿ ಚಂದ್ರಚೂಡ ಕೂಡ ಅದೇ ರೀತಿ ನಡೆದುಕೊಂಡರೆ ಮನೆಯಲ್ಲಿ ಮತ್ತೊಂದಷ್ಟು ಜಗಳಗಳು, ಮಾತಿನ ಚಕಮಕಿಗಳು ಏರ್ಪಡುವ ಎಲ್ಲಾ ಸಾಧ್ಯತೆಗಳಿವೆ.

ಇದನ್ನೂ ಓದಿ: ಎಷ್ಟೇ ಹೇಳಿದರೂ ಬಿಗ್​ ಬಾಸ್​ ನಿಯಮ ಉಲ್ಲಂಘನೆ ಮಾಡಿದ ದಿವ್ಯಾ ಉರುಡುಗಗೆ ಯಾವ ಶಿಕ್ಷೆ?

(Bigg Boss Wild Card Entry chakravarthy chandrachud is a New Member for BBK8)

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್