Rajinikanth: ಸೂಪರ್​ಸ್ಟಾರ್​ ರಜನಿಕಾಂತ್​ ಸ್ಯಾಂಡಲ್​ವುಡ್​ನಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದ ಆ ದಿನಗಳು!

ವಿಷ್ಣುವರ್ಧನ್​ ಜೊತೆ ನಟಿಸಿದ ‘ಸಹೋದರರ ಸವಾಲ್​’, ‘ಕಿಲಾಡಿ ಕಿಟ್ಟು’, ಅನಂತ್​ನಾಗ್​​ ಜೊತೆ ತೆರೆಹಂಚಿಕೊಂಡ ‘ಮಾತು ತಪ್ಪದ ಮಗ’ ಸಿನಿಮಾದಿಂದ ರಜನಿಕಾಂತ್​ಗೆ ಕನ್ನಡದಲ್ಲಿ ಹೆಚ್ಚು ಜನಪ್ರಿಯತೆ ಸಿಕ್ಕಿತು.

Rajinikanth: ಸೂಪರ್​ಸ್ಟಾರ್​ ರಜನಿಕಾಂತ್​ ಸ್ಯಾಂಡಲ್​ವುಡ್​ನಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದ ಆ ದಿನಗಳು!
ರಜನಿಕಾಂತ್​
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Apr 01, 2021 | 6:52 PM

ಸಿನಿಮಾ ಕ್ಷೇತ್ರದಲ್ಲಿನ ಸಾಧನೆಯಾಗಿ ಭಾರತ ಸರ್ಕಾರದಿಂದ ಏ.1ರಂದು ಸೂಪರ್​ ಸ್ಟಾರ್​ ರಜನಿಕಾಂತ್ ಅವರಿ​ಗೆ ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ ಘೋಷಣೆ ಆಗಿದೆ. ಅವರಿಗೆ ಕರುನಾಡಿನ ಅನೇಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ನಟ ಪುನೀತ್​ ರಾಜ್​ಕುಮಾರ್​ ಮುಂತಾದವರು ಶುಭಕೋರಿದ್ದಾರೆ.

ಭಾಷೆ-ರಾಜ್ಯಗಳ ಗಡಿ ಮೀರಿ ಬೆಳೆದ ಕಲಾವಿದ ರಜನಿಕಾಂತ್​. ನಾಲ್ಕೂವರೆ ದಶಕಗಳಿಂದಲೂ ಅಭಿಮಾನಿಗಳನ್ನು ಅವರು ರಂಜಿಸುತ್ತ ಬಂದಿದ್ದಾರೆ. ಸಿನಿಮಾ ಪರದೆಮೇಲೆ ಸೂಪರ್​ ಸ್ಟಾರ್​ ಆಗಿದ್ದರೂ ನಿಜಜೀವನದಲ್ಲಿ ಅವರದ್ದು ಸಿಂಪಲ್​ ವ್ಯಕ್ತಿತ್ವ. ಆ ಕಾರಣದಿಂದಲೂ ಅವರನ್ನು ಎಲ್ಲ ಭಾಷೆಯವರು ಇಷ್ಟಪಡುತ್ತಾರೆ. ಮೂಲತಃ ಕರ್ನಾಟಕದವರಾದ ರಜನಿಕಾಂತ್​ಗೆ ಸಿನಿಮಾರಂಗದಲ್ಲಿ ಹೊಸ ಜೀವನ ನೀಡಿದ್ದು ತಮಿಳುನಾಡು. ಅಲ್ಲಿನ ಜನರು ರಜನಿಯನ್ನು ಉತ್ತುಂಗಕ್ಕೆ ಏರಿಸಿದರು. ಬೇರೆ ಭಾಷೆಯ ಚಿತ್ರರಂಗದಲ್ಲೂ ತಲೈವಾ ಸಖತ್ ಬೇಡಿಕೆ ಸೃಷ್ಟಿ ಮಾಡಿಕೊಂಡರು.

ತಮಿಳು ಮಾತ್ರವಲ್ಲದೆ ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡ ಸಿನಿಮಾಗಳಲ್ಲೂ ರಜನಿ ನಟಿಸಿದ್ದಾರೆ. ಆದರೆ ಹೆಚ್ಚು ಬಣ್ಣ ಹಚ್ಚಿದ್ದು ಕಾಲಿವುಡ್​ನಲ್ಲಿ. ಆರಂಭದ ದಿನಗಳಲ್ಲಿ ಕನ್ನಡ ಚಿತ್ರರಂಗದ ಜೊತೆ ಹೆಚ್ಚು ಸಂಪರ್ಕ ಹೊಂದಿದ್ದ ರಜನಿಗೆ ಅನೇಕ ಅವಕಾಶಗಳು ಸಿಕ್ಕವು. ಚಿಕ್ಕ ಪಾತ್ರವೇ ಆದರೂ ಆ ಅವಕಾಶಗಳನ್ನು ರಜನಿ ಚೆನ್ನಾಗಿ ಬಳಸಿಕೊಂಡರು. ಕೆಲವು ಕನ್ನಡ ಸಿನಿಮಾಗಳಲ್ಲೂ ಅವರು ಕಾಣಿಸಿಕೊಂಡರು.

ಪುಟ್ಟಣ್ಣ ಕಣಗಾಲ್​ ನಿರ್ದೇಶನದ ‘ಕಥಾ ಸಂಗಮ’ ರಜನಿ ನಟಿಸಿದ ಮೊದಲ ಕನ್ನಡ ಸಿನಿಮಾ. ಅದು 1976ರ ಸಮಯ. ತಮಿಳು ಚಿತ್ರರಂಗದಲ್ಲೂ ಅವರು ಇನ್ನೂ ನೆಲೆ ನಿಂತಿರಲಿಲ್ಲ. ಸ್ಯಾಂಡಲ್​ವುಡ್​ನಿಂದಲೂ ಅವರಿಗೆ ಸಣ್ಣ-ಪುಟ್ಟ ಅವಕಾಶಗಳು ಸಿಗುತ್ತಿದ್ದವು. ಬಾಳು ಜೇನು, ಒಂದು ಪ್ರೇಮದ ಕಥೆ, ಗಲಾಟೆ ಸಂಸಾರ ಮುಂತಾದ ಸಿನಿಮಾಗಳಲ್ಲಿ ನಟಿಸಿದರು.

ವಿಷ್ಣುವರ್ಧನ್​ ಜೊತೆ ನಟಿಸಿದ ‘ಸಹೋದರರ ಸವಾಲ್​’, ‘ಕಿಲಾಡಿ ಕಿಟ್ಟು’, ಅನಂತ್​ನಾಗ್​​ ಜೊತೆ ತೆರೆಹಂಚಿಕೊಂಡ ‘ಮಾತು ತಪ್ಪದ ಮಗ’ ಸಿನಿಮಾದಿಂದ ರಜನಿಕಾಂತ್​ಗೆ ಕನ್ನಡದಲ್ಲಿ ಹೆಚ್ಚು ಜನಪ್ರಿಯತೆ ಸಿಕ್ಕಿತು. ಆದರೆ ಅದಕ್ಕೂ ಮಿಗಿಲಾಗಿ ಅವರು ಕಾಲಿವುಡ್​ನಲ್ಲಿ ಮಿಂಚಲು ಆರಂಭಿಸಿದ್ದರು. ಮೊದಲು ಸಾಲು ಸಾಲು ನೆಗೆಟಿವ್​ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರಿಗೆ ನಂತರ ಹೀರೋ ಪಾತ್ರಗಳು ಒಲಿದುಬರಲು ಆರಂಭಿಸಿದವು. ತಮಿಳು ಚಿತ್ರರಂಗ ಅವರನ್ನು ಕೈ ಹಿಡಿಯಿತು. ಪರಿಣಾಮ, ಸ್ಯಾಂಡಲ್​ವುಡ್​ ಕಡೆಗೆ ಅವರ ಗಮನ ಕಡಿಮೆ ಆಯಿತು. ಕನ್ನಡದಲ್ಲಿ ರಜನಿಕಾಂತ್ ನಟಿಸಿದ ಕೊನೇ ಸಿನಿಮಾ 1981ರಲ್ಲಿ ತೆರೆಕಂಡ ‘ಘರ್ಜನೆ’.

ಆ ಬಳಿಕ ರಜನಿಕಾಂತ್​ ಕನ್ನಡ ಸಿನಿಮಾಗಳಲ್ಲಿ ನಟಿಸಲಿಲ್ಲವಾದರೂ ಸ್ಯಾಂಡಲ್​ವುಡ್​ ಕಲಾವಿದರ ಜೊತೆ ಅವರು ಇಂದಿಗೂ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ರಾಜ್​ಕುಮಾರ್​ ಬಗ್ಗೆ ಅವರಿಗೆ ತುಂಬ ಅಭಿಮಾನವಿತ್ತು. ಈವರೆಗೂ ರಜನಿ ಅವರು ಆಟೋಗ್ರಾಫ್​ ಪಡೆದುಕೊಂಡಿರುವುದು ಅಣ್ಣಾವ್ರ ಬಳಿ ಮಾತ್ರ. ಡಾ. ರಾಜ್​ ರೀತಿಯೇ ರಜನಿಕಾಂತ್ ಕೂಡ ಸರಳತೆಯನ್ನು ಮೌಗೂಡಿಸಿಕೊಂಡರು. ವಿಷ್ಣುವರ್ಧನ್​, ಅಂಬರೀಷ್​ ಮುಂತಾದ ಕಲಾವಿದರ ಜೊತೆಗೆ ಅವರಿಗೆ ಉತ್ತರ ಸ್ನೇಹವಿತ್ತು.

ಇದನ್ನೂ ಓದಿ: Rajinikanth: ರಜನಿಕಾಂತ್​ ಬಾನೆತ್ತರಕ್ಕೆ ಬೆಳೆದರೂ ಕರುನಾಡಿನಲ್ಲೇ ಇದೆ ಈ ಹೆಮ್ಮರದ ಬೇರು!

ರಾಜಕಾರಣದಿಂದ ದೂರ ಹೋಗಬೇಡಿ, ನಿರ್ಧಾರ ಬದಲಿಸಿ: ನಟ ರಜನಿಕಾಂತ್​ಗೆ ಅಭಿಮಾನಿಗಳ ಮನವಿ

(Dadasaheb Phalke awardee Rajinikanth Acted in Kannada movies during early stage of his career)

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ