Rajinikanth: ರಜನಿಕಾಂತ್​ ಬಾನೆತ್ತರಕ್ಕೆ ಬೆಳೆದರೂ ಕರುನಾಡಿನಲ್ಲೇ ಇದೆ ಈ ಹೆಮ್ಮರದ ಬೇರು!

Dadasaheb Phalke award: ಬೆಂಗಳೂರಿನಲ್ಲಿ ಬಸ್​ ಕಂಡಕ್ಟರ್​ ಆಗಿದ್ದ ರಜನಿಕಾಂತ್​ ಇಂದು ಪ್ರತಿಷ್ಠಿತ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ಪಡೆದುಕೊಂಡಿರುವ ಸಾಧಕ. ಎಲ್ಲೆಡೆಯಿಂದಲೂ ಅವರಿಗೆ ಅಭಿನಂದನೆ ಸಲ್ಲಿಕೆ ಆಗುತ್ತಿದೆ. ಅವರ ಆರಂಭಿಕ ದಿನಗಳನ್ನು ಮೆಲುಕು ಹಾಕಲಾಗುತ್ತಿದೆ.

Rajinikanth: ರಜನಿಕಾಂತ್​ ಬಾನೆತ್ತರಕ್ಕೆ ಬೆಳೆದರೂ ಕರುನಾಡಿನಲ್ಲೇ ಇದೆ ಈ ಹೆಮ್ಮರದ ಬೇರು!
ರಜನಿಕಾಂತ್
Follow us
ಮದನ್​ ಕುಮಾರ್​
|

Updated on: Apr 01, 2021 | 2:37 PM

ರಜನಿಕಾಂತ್​ ಎಂದರೆ ಭಾರತೀಯ ಚಿತ್ರರಂಗದಲ್ಲೊಂದು ಹೆಮ್ಮರವೇ ಸರಿ. ಬಣ್ಣದ ಲೋಕದಲ್ಲಿ ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ಅವರ ಬೇರುಗಳು ಇರುವುದು ಕರುನಾಡಿನಲ್ಲಿ! ಅಂದರೆ, ರಜನಿ ಬಾಲ್ಯ, ತಾರುಣ್ಯವನ್ನು ಕಳೆದಿದ್ದು ಬೆಂಗಳೂರಿನಲ್ಲಿ. ಇಲ್ಲಿನ ಹನುಮಂತನಗರದಲ್ಲಿ ರಜನಿ ಓಡಿಡಾಕೊಂಡಿದ್ದರು. ಗವಿಪುರದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದರು. ಅವರು ಮುಂದೊಂದು ದಿನ ದೇಶವೇ ತಿರುಗಿ ನೋಡುವಂತಹ ಸೂಪರ್​ ಸ್ಟಾರ್​ ಆಗುತ್ತಾರೆ ಎಂಬುದನ್ನು ಆಗ ಯಾರೂ ಊಹಿಸಿರಲಿಲ್ಲ.

ಬಾಲ್ಯದಲ್ಲಿ ಸಿಕ್ಕಾಪಟ್ಟೆ ತುಂಟನಾಗಿದ್ದ ರಜನಿಯನ್ನು ಅವರ ಅಣ್ಣ ರಾಮಕೃಷ್ಣ ಮಠಕ್ಕೆ ಸೇರಿಸಿದರು. ಅಲ್ಲಿ ಅವರು ಧಾರ್ಮಿಕ ಆಸಕ್ತಿ ಬೆಳೆಸಿಕೊಂಡರು. ಜೊತೆಗೆ ನಾಟಕ, ಕ್ರೀಡೆ ಮುಂತಾದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಆರಂಭಿಸಿದರು. ಆಗಲೇ ಅವರೊಳಗಿನ ಕಲಾವಿದ ಜಾಗೃತನಾಗಿದ್ದ. ಆ ಸಮಯದಲ್ಲಿ ನಾಟಕವೊಂದರಲ್ಲಿ ರಜನಿ ಮಾಡಿದ್ದ ಪಾತ್ರವನ್ನು ವರಕವಿ ದ.ರಾ. ಬೇಂದ್ರ ಕೂಡ ಮೆಚ್ಚಿಕೊಂಡಿದ್ದರು. ಪಿಯುಸಿ ಓದುವಾಗಲೂ ಅನೇಕ ನಾಟಕಗಳಲ್ಲಿ ರಜನಿಕಾಂತ್​ ಅಭಿನಯಿಸುತ್ತಿದ್ದರು.

ಕಾಲೇಜು ಶಿಕ್ಷಣ ಮುಗಿಸಿದ ಬಳಿಕ ರಜನಿ ಕರುನಾಡಿನಲ್ಲಿ ಹಲವು ಉದ್ಯೋಗಗಳನ್ನು ಪ್ರಯತ್ನಿಸಿದರು. ಬಿಎಂಟಿಸಿ ಬಸ್​ನಲ್ಲಿ ಕಂಡಕ್ಟರ್​ ಆಗಿ ಕೆಲಸ ಮಾಡುವುದಕ್ಕೂ ಮುನ್ನ ಕೂಲಿಯಾಗಿಯೂ ಶ್ರಮಿಸಿದ್ದರು. ನಂತರ ಆವಲಹಳ್ಳಿ ಟು ಮೆಜೆಸ್ಟಿಕ್​- ರೂಟ್​ ನಂ.10ರಲ್ಲಿ ಕಂಡಕ್ಟರ್​ ಆಗಿ ಕೆಲಸ ಆರಂಭಿಸಿದರು. ಆಗಲೂ ನಟನೆಯ ಕಡೆಗೆ ಅವರ ತುಡಿತ ಹೆಚ್ಚಾಗಿತ್ತು. ಮದ್ರಾಸ್​ ಫಿಲ್ಮ್​ ಇನ್ಸ್​ಟಿಟ್ಯೂಟ್​ನಲ್ಲಿ ಅಭಿನಯ ಕಲಿಯಬೇಕು ಎಂಬ ಆಸೆ ಚಿಗುರಿತು. ಅದಕ್ಕೆ ಅವರ ಕುಟುಂಬದವರ ಬೆಂಬಲ ಸಿಗಲಿಲ್ಲ. ಆದರೆ ಬಿಎಂಟಿಸಿ ಸಹೋದ್ಯೋಗಿ ರಾಜ್​ ಬಹದ್ದೂರ್​ ಅವರು ಹಣ ಸಹಾಯ ಮಾಡಿ, ಹುರಿದುಂಬಿಸಿದ್ದರಿಂದ ರಜನಿ ಬದುಕಿನ ಪಥ ಬದಲಾಯಿತು. ಚೆನ್ನೈ ಕಡೆಗೆ ಅವರು ಪ್ರಯಾಣ ಬೆಳೆಸಿದರು.

ಚೆನ್ನೈಗೆ ಹೋದ ಬಳಿಕ ರಜನಿಕಾಂತ್​ ಅವರ ಜೀವನ ನಿಧಾನಕ್ಕೆ ಬದಲಾಗತೊಡಗಿತು. ಆರಂಭದ ದಿನಗಳಲ್ಲಿ ಸಿಗುತ್ತಿದೆ ಸಣ್ಣ-ಪುಟ್ಟ ಪಾತ್ರಗಳ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡರು. ನಂತರ ಹೀರೋ ಪಟ್ಟಕ್ಕೆ ಬಡ್ತಿ ಪಡೆದುಕೊಂಡರು. ಕ್ರಮೇಣ ಒಬ್ಬ ಸೂಪರ್​ ಸ್ಟಾರ್​ ಆಗಿ ಮಿಂಚಿದರು. ಇಷ್ಟೆಲ್ಲ ಆದರೂ ಕೂಡ ಅವರು ಕರುನಾಡಿನ ಕನೆಕ್ಷನ್​ ಬಿಡಲಿಲ್ಲ. ಅಂದು ತಮಗೆ ಸಹಾಯ ಮಾಡಿದ ಗೆಳೆಯ ರಾಜ್​ ಬಹದ್ದೂರ್​ ಅವರನ್ನು ತಲೈವಾ ಇಂದಿಗೂ ನೆನಪಿಟ್ಟುಕೊಂಡಿದ್ದಾರೆ. ಅವರ ಜೊತೆ ಸಂಪರ್ಕ ಹೊಂದಿದ್ದಾರೆ.

ಯಾವುದೇ ಕೆಲಸದ ಸಲುವಾಗಿ ರಜನಿಕಾಂತ್​ ಬೆಂಗಳೂರಿಗೆ ಬಂದರೆ ರಾಜ್​ ಬಹದ್ದೂರ್​ ಅವರನ್ನು ಮಾತನಾಡಿಸದೇ ಇರುವುದಿಲ್ಲ. ಅಷ್ಟರಮಟ್ಟಿಗೆ ಅವರು ಕೃತಜ್ಞತೆ ತೋರುತ್ತಾರೆ. ಅಲ್ಲದೆ, ರಜನಿಕಾಂತ್​ ಅಣ್ಣ ಸತ್ಯನಾರಾಯಣ ರಾವ್​ ಅವರು ಇಂದಿಗೂ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಸಹೋದರನನ್ನು ನೋಡಲು ರಜನಿಕಾಂತ್​ ಆಗಾಗ ಇಲ್ಲಿಗೆ ಬರುತ್ತಾರೆ. ಜೀವನದಲ್ಲಿ ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕಿಂತಲೂ ಮುನ್ನ ಅಣ್ಣನ ಜೊತೆ ಮಾತನಾಡಿಕೊಂಡು ಹೋಗುತ್ತಾರೆ.

ತಮಿಳುನಾಡಿನಲ್ಲಿ ಸೂಪರ್​ ಸ್ಟಾರ್​ ಆಗಿ ಮೆರೆದ ರಜನಿಗೆ ಕರ್ನಾಟಕದಲ್ಲೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರ ಸಿನಿಮಾ ರಿಲೀಸ್​ ಆದಾಗ ಇಲ್ಲಿನ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಾರೆ. ಆ ಕಾರಣಕ್ಕಾಗಿಯೂ ರಜನಿಗೆ ಕರುನಾಡಿನ ಜೊತೆ ಕನೆಕ್ಷನ್​ ಇದೆ. ಕನ್ನಡ ಚಿತ್ರರಂಗ ಅನೇಕರ ಜೊತೆಗೆ ಅವರು ಉತ್ತಮ ಸಂಬಂಧ ಹೊಂದಿದ್ದಾರೆ. ರಾಜ್​ಕುಮಾರ್​ ಎಂದರೆ ರಜನಿಗೆ ಪಂಚಪ್ರಾಣವಾಗಿತ್ತು. ರಜನಿಕಾಂತ್​ ಅವರು ಈವರೆಗೂ ಆಟೋಗ್ರಾಫ್​ ಪಡೆದುಕೊಂಡಿದ್ದು ಡಾ. ರಾಜ್​ಕುಮಾರ್​ ಅವರ ಬಳಿ ಮಾತ್ರ! ಅಣ್ಣಾವ್ರ ಫ್ಯಾಮಿಲಿ ಜೊತೆ ಅವರು ಅವರ ಸ್ನೇಹ ಗಟ್ಟಿಯಾಗಿದೆ.

ಕಾವೇರಿ ನೀರು ಹಂಚಿಕೆ ವಿವಾದದ ರೀತಿಯ ಸಂದಿಗ್ಧ ಸಂದರ್ಭದಲ್ಲಿ ರಜನಿಗೆ ಕನ್ನಡಿಗರಿಂದ ವಿರೋಧ ವ್ಯಕ್ತವಾಗುತ್ತದೆ ಎಂಬುದು ನಿಜವಾದರೂ ಅವರೊಬ್ಬರ ಭಾಷೆ-ರಾಜ್ಯಗಳ ಗಡಿ ಮೀರಿದ ಕಲಾವಿದನಾಗಿ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಇಂದು ದಾದಾಸಾಹೇಬ್​ ಪಾಲ್ಕೆ ಪ್ರಶಸ್ತಿ ಪಡೆದ ರಜನಿಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಸೇರಿ ಅನೇಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: Dadasaheb Phalke Award 2020: ಸೂಪರ್​ ಸ್ಟಾರ್​ ರಜಿನಿಕಾಂತ್​ಗೆ 51ನೇ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಿಸಿದ ಕೇಂದ್ರ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ