Yuvarathnaa Movie Review: ಸೂಪರ್​ ಸಂದೇಶ ಸಾರುವ ಯುವರತ್ನ; ಫ್ಯಾನ್ಸ್​ ಮೆಚ್ಚಿಸುವ ಯತ್ನ!

Yuvarathnaa Kannada Movie Review: ಪಕ್ಕಾ ಪವರ್​ಸ್ಟಾರ್​ ಅಭಿಮಾನಿಗಳನ್ನು ಸೆಳೆದುಕೊಳ್ಳುವ ಪ್ರಯತ್ನವನ್ನು ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಮಾಡಿದ್ದಾರೆ. ಎರಡು ಶೇಡ್​ನ ಪಾತ್ರದಲ್ಲಿ ಪುನೀತ್​ ರಾಜ್​ಕುಮಾರ್ ಮಿಂಚಿದ್ದಾರೆ.

Yuvarathnaa Movie Review: ಸೂಪರ್​ ಸಂದೇಶ ಸಾರುವ ಯುವರತ್ನ; ಫ್ಯಾನ್ಸ್​ ಮೆಚ್ಚಿಸುವ ಯತ್ನ!
ಯುವರತ್ನ ಸಿನಿಮಾ ವಿಮರ್ಶೆ
Follow us
ಮದನ್​ ಕುಮಾರ್​
|

Updated on:Apr 01, 2021 | 12:52 PM

ಸಿನಿಮಾ: ಯುವರತ್ನ ನಿರ್ದೇಶನ: ಸಂತೋಷ್​ ಆನಂದ್​ರಾಮ್​ ನಿರ್ಮಾಣ: ವಿಜಯ್​ ಕಿರಗಂದೂರು ಪಾತ್ರವರ್ಗ: ಪುನೀತ್​ ರಾಜ್​ಕುಮಾರ್​, ಸಾಯೇಶಾ ಸೈಗಲ್​, ಪ್ರಕಾಶ್​ ರೈ, ಡಾಲಿ ಧನಂಜಯ, ಸಾಯಿಕುಮಾರ್​ ಮುಂತಾದವರು. ಸ್ಟಾರ್​: 3/5

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಮತ್ತು ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಕಾಂಬಿನೇಷನ್​ನಲ್ಲಿ ಮೂಡಿಬಂದಿದ್ದ ‘ರಾಜಕುಮಾರ’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಹಾಗಾಗಿ, ಅವರಿಬ್ಬರು ಜೊತೆಯಾಗಿ ಮಾಡಿರುವ ‘ಯುವರತ್ನ’ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿರುವುದು ಸಹಜ. ರಾಜಕುಮಾರ ಚಿತ್ರದ ರೀತಿಯೇ ಯುವರತ್ನದಲ್ಲಿಯೂ ಒಂದು ಮೆಸೇಜ್​ ನೀಡುವ ಪ್ರಯತ್ನವನ್ನು ಮಾಡಲಾಗಿದೆ. ಈ ಬಾರಿ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಸಂತೋಷ್​ ಆನಂದ್​ ರಾಮ್​ ಟಾರ್ಗೆಟ್​ ಮಾಡಿದ್ದಾರೆ.

ಯುವರತ್ನ ಕಥೆ ಏನು? ಪುನೀತ್​ ರಾಜ್​ಕುಮಾರ್​ಗೆ ಎಲ್ಲ ವರ್ಗದ ಅಭಿಮಾನಿಗಳಿದ್ದಾರೆ. ಆದರೆ ಈ ಸಿನಿಮಾದಲ್ಲಿ ಯುವಜನತೆಯನ್ನು ಗಮನದಲ್ಲಿ ಇಟ್ಟುಕೊಂಡು ಒಂದು ಕಥೆ ಹೇಳಲಾಗಿದೆ. ಅದಕ್ಕಾಗಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವುದು ಕಾಲೇಜು ಹಿನ್ನೆಲೆಯನ್ನು. ಒಂದು ಸರ್ಕಾರಿ ಕಾಲೇಜಿನಲ್ಲಿ ಅನೇಕ ಅಕ್ರಮಗಳು ನಡೆಯುತ್ತಿರುತ್ತವೆ. ಅದಕ್ಕೆ ಕಾರಣ ಆಗಿರುವುದು ಗೋಮುಖ ವ್ಯಾಘ್ರಗಳಂತಿರುವ ವಿಲನ್​ಗಳು. ಹೇಗಾದರೂ ಮಾಡಿ ಆ ಕಾಲೇಜ್​ ಮುಚ್ಚಿಸಬೇಕು ಎಂಬುದು ಖಳನಾಯಕರ ಗುರಿ. ಆದರೆ ಅದಕ್ಕೆ ಅಡ್ಡಿಯಾಗಿ ನಿಲ್ಲುವವನು ಕಥಾನಾಯಕ ಯುವರಾಜ್​. ಈ ಘರ್ಷಣೆಯಲ್ಲಿ ಡ್ರಗ್ಸ್​ ಮಾಫಿಯಾ, ಖಾಸಗಿ ಕಾಲೇಜುಗಳ ಎಜುಕೇಷನ್​ ಮಾಫಿಯಾ, ರ‍್ಯಾಗಿಂಗ್​ ಮುಂತಾದ ವಿಷಯಗಳನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಇವುಗಳನ್ನೆಲ್ಲ ಹೀರೋ ಹೇಗೆ ಮಟ್ಟಹಾಕುತ್ತಾನೆ ಎಂಬುದು ತಿಳಿದುಕೊಳ್ಳಲು ಪೂರ್ತಿ ಸಿನಿಮಾ ನೋಡಬೇಕು.

ಅಪ್ಪು ಅಭಿಮಾನಿಗಳಿಗೆ ಹಬ್ಬ ಪುನೀತ್​ ರಾಜ್​ಕುಮಾರ್​ ಸಿನಿಮಾ ಎಂದರೆ ಅಲ್ಲಿ ಡ್ಯಾನ್ಸ್​, ಫೈಟ್​, ಫ್ಯಾಮಿಲಿ ಮೆಚ್ಚುವಂತಹ ಕಥೆ, ಜೊತೆಗೊಂದು ಮೆಸೇಜ್​ ಇರಬೇಕು. ಅವುಗಳ ಸಂಪೂರ್ಣ ಪ್ಯಾಕೇಜ್​ ಈ ಚಿತ್ರದಲ್ಲಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಪಕ್ಕಾ ಪವರ್​ಸ್ಟಾರ್​ ಅಭಿಮಾನಿಗಳನ್ನು ಸೆಳೆದುಕೊಳ್ಳುವ ಪ್ರಯತ್ನವನ್ನು ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಮಾಡಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರ ರಿಯಲ್​ ಲೈಫ್​ ವ್ಯಕ್ತಿತ್ವಕ್ಕೆ ಕನೆಕ್ಟ್​ ಆಗುವಂತಹ ಅನೇಕ ಡೈಲಾಗ್​ಗಳು ಈ ಸಿನಿಮಾದಲ್ಲಿರುವುದೇ ಅದಕ್ಕೆ ಸಾಕ್ಷಿ. ಕಾಲೇಜು ವಿದ್ಯಾರ್ಥಿಯಾಗಿ ಹಾಗೂ ವಿದ್ಯಾರ್ಥಿಗಳು ಮೆಚ್ಚುವ ಪ್ರೊಫೆಸರ್​ ಆಗಿ ಎರಡೂ ಗೆಟಪ್​ನಲ್ಲಿ ಪುನೀತ್​ ಮಿಂಚಿದ್ದಾರೆ. ಮಕ್ಕಳಿಗೆ ಪಾಠ ಮಾಡಿ ವಿದ್ಯೆ ಕಲಿಸಲೂ ಸೈ, ವಿಲನ್​ಗಳ ಮೂಳೆ ಮುರಿದು ಬುದ್ಧಿ ಕಲಿಸಲೂ ಸೈ ಎಂಬಂತಹ ಪಾತ್ರದಲ್ಲಿ ಅವರು ರಾರಾಜಿಸಿದ್ದಾರೆ.

ಮುದ್ದಾಗಿ ಕಾಣಿಸಿಕೊಂಡು ಕಳೆದುಹೋದ ಸಾಯೇಶಾ! ನಟಿ ಸಾಯೇಶಾ ಸೈಗಲ್​ ಅವರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ಆದರೆ ಅವರ ಪಾತ್ರಕ್ಕೆ ಈ ಚಿತ್ರದಲ್ಲಿ ಹೇಳಿಕೊಳ್ಳುವಂತಹ ಸ್ಕೋಪ್​ ಸಿಕ್ಕಿಲ್ಲ. ಕೆಲವೇ ದೃಶ್ಯಗಳಲ್ಲಿ ಅವರಿಗೆ ಅವಕಾಶ ಸಿಕ್ಕಿದೆ. ಎಲ್ಲಾ ಫ್ರೇಮ್​ನಲ್ಲಿಯೂ ಮುದ್ದಾಗಿ ಕಾಣಿಸಿಕೊಳ್ಳುವ ಅವರು ಕಥೆ ಗಂಭೀರ ಸ್ವರೂಪ ಪಡೆದುಕೊಂಡ ಬಳಿಕ ಕಾಣೆಯಾಗಿಬಿಡುತ್ತಾರೆ.

ಖ್ಯಾತ ಕಲಾವಿದರ ದಂಡು ಈ ಸಿನಿಮಾದ ತುಂಬೆಲ್ಲ ಜನಪ್ರಿಯರ ಕಲಾವಿದರೇ ಆವರಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ, ಸರ್ಕಾರಿ ಕಾಲೇಜಿನ ಉಳಿವಿಗಾಗಿ ಹಗಲಿರುಳು ಹೋರಾಡುವ ಪ್ರಾಂಶುಪಾಲರ ಪಾತ್ರದಲ್ಲಿ ನಟಿಸಿರುವ ಪ್ರಕಾಶ್​ ರೈ ಅವರು ಹೆಚ್ಚು ಹೈಲೈಟ್​ ಆಗಿದ್ದಾರೆ. ನಟ ಧನಂಜಯ್​ ಅವರು ‘ಟಗರು’ ಸಿನಿಮಾದ ಡಾಲಿ ಪಾತ್ರದ ರೀತಿಯೇ ಇಲ್ಲೂ ಅಬ್ಬರಿಸಿದ್ದಾರೆ. ಸಾಯಿ ಕುಮಾರ್​, ಅವಿನಾಶ್​, ಸುಧಾರಾಣಿ, ಪ್ರಕಾಶ್​ ಬೆಳವಾಡಿ, ರಾಜೇಶ್​ ನಟರಂಗ ಮುಂತಾದ ಸ್ಟಾರ್​ ಕಲಾವಿದರಿಂದಾಗಿ ಯುವರತ್ನನ ಮೆರುಗು ಹೆಚ್ಚಿದೆ. ದಿಗಂತ್​, ಸೋನು ಗೌಡ, ತಾರಕ್​ ಪೊನ್ನಪ್ಪ ತಮಗೆ ಸಿಕ್ಕಿರುವ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಹೊಸತನಕ್ಕಾಗಿ ಪ್ರೇಕ್ಷಕರ ಹುಡುಕಾಟ ತಾಂತ್ರಿಕವಾಗಿ ‘ಯುವರತ್ನ’ ತುಂಬ ಶ್ರೀಮಂತವಾಗಿ ಮೂಡಿಬಂದಿದೆ. ಆ್ಯಕ್ಷನ್​ ದೃಶ್ಯಗಳನ್ನು ರೋಚಕವಾಗಿ ಕಟ್ಟಿಕೊಡಲಾಗಿದೆ. ಆದರೆ ಕಥೆ ಮತ್ತು ಅದರ ನಿರೂಪಣೆಯಲ್ಲಿ ಇನ್ನಷ್ಟು ಹೊಸತನವನ್ನು ನೀಡಲು ನಿರ್ದೇಶಕರು ಪ್ರಯತ್ನಿಸಬೇಕಿತ್ತು. ವಿದ್ಯಾರ್ಥಿಗಳಿಗೆ ಅಂಟಿಕೊಂಡ ಡ್ರಗ್ಸ್​ ನಂಟು, ಶಿಕ್ಷಣದ ಖಾಸಗೀಕರಣದಿಂದಾಗಿ ಸಮಸ್ಯೆ, ರ‍್ಯಾಗಿಂಗ್ ಪಿಡುಗು, ಮೆರಿಟ್​ಗಾಗಿ ವಿದ್ಯಾರ್ಥಿಗಳ ಮೇಲೆ ಪೋಷಕರು ಒತ್ತಡ ಹೇರುವುದು ಮುಂತಾದ ವಿಚಾರಗಳನ್ನು ಈಗಾಗಲೇ ಅನೇಕ ಸಿನಿಮಾಗಳಲ್ಲಿ ಪ್ರೇಕ್ಷಕರು ನೋಡಿದ್ದಾರೆ. ಅದೇ ವಿಚಾರವನ್ನು ಮತ್ತೆ ನೋಡುವಾಗ ಪ್ರೇಕ್ಷಕರು ಹೊಸತನವನ್ನು ನಿರೀಕ್ಷಿಸುವುದು ಸಹಜ. ಅದರ ಕಡೆಗೆ ನಿರ್ದೇಶಕರು ಹೆಚ್ಚಿನ ಗಮನ ಹರಿಸುವ ಅವಶ್ಯಕತೆ ಇತ್ತು.

‘ಪವರ್​ ಆಫ್​ ಯೂತ್​..’ ಹಾಗೂ ‘ನೀನಾದೆನಾ..’ ಹಾಡಿನ ಮೂಲಕ ಸಂಗೀತ ನಿರ್ದೇಶಕ ಎಸ್​. ಥಮನ್​ ಹೆಚ್ಚು ಸ್ಕೋರ್​ ಮಾಡಿದ್ದಾರೆ. ಹಿನ್ನೆಲೆ ಸಂಗೀತವೂ ಗಮನ ಸಳೆಯುವಂತಿದೆ. ಛಾಯಾಗ್ರಹಕ ವೆಂಕಟೇಶ್​ ಕೆಲಸ ಅಚ್ಚುಕಟ್ಟಾಗಿದೆ. ಸಂತೋಷ್​ ಆನಂದ್​ರಾಮ್​ ಬರೆದ ಸಂಭಾಷಣೆಗಳು ಅಪ್ಪು ಅಭಿಮಾನಿಗಳಿಂದ ಶಿಳ್ಳೆ, ಚೆಪ್ಪಾಳೆ ಪಡೆದುಕೊಳ್ಳುವ ಗುಣ ಹೊಂದಿವೆ.

ಇದನ್ನೂ ಓದಿ: Yuvarathnaa: ಧೂಳೆಬ್ಬಿಸಲು ಬಂದ ಯುವರತ್ನ! ಎಷ್ಟು ಚಿತ್ರಮಂದಿರಗಳಲ್ಲಿ ಪುನೀತ್​ ರಾಜ್​ಕುಮಾರ್ ಹವಾ?

Yuvarathnaa: ಆರ್ಭಟ ಶುರು ಮಾಡಿದ ಯುವರತ್ನ.. ರಾಜ್ಯಾದ್ಯಂತ ಥಿಯೇಟರ್​ ಮುಂದೆ ಅಭಿಮಾನಿಗಳ ಸಂಭ್ರಮಾಚರಣೆ!

(Yuvarathnaa Movie Review A Powerful message with pack of actions from Power star to kannada audience)

Published On - 12:49 pm, Thu, 1 April 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್