AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yuvarathnaa First Half Review: ಹೇಗಿದೆ ಯುವರತ್ನ ಫಸ್ಟ್​ ಹಾಫ್​? ಪುನೀತ್ ಎಂಟ್ರಿಗೆ ಫ್ಯಾನ್ಸ್ ಫಿದಾ!

Yuvarathnaa Kannada Movie Review: ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಯುವರತ್ನ ರಿಲೀಸ್​ ಆಗಿದೆ. ಬಹುತೇಕ ಕಡೆ ಮುಂಜಾನಯೇ ಸಿನಿಮಾ ಪ್ರದರ್ಶನ ಆರಂಭವಾಗಿದ್ದು, ಈಗಾಗಲೇ ಫಸ್ಟ್​ ಹಾಫ್​ ಹೇಗಿದೆ ಎಂಬುದು ಗೊತ್ತಾಗಿದೆ. ಇಲ್ಲಿದೆ ಸಿನಿಮಾದ ಫಸ್ಟ್ ಹಾಫ್​ ವಿಮರ್ಶೆ.

Yuvarathnaa First Half Review: ಹೇಗಿದೆ ಯುವರತ್ನ ಫಸ್ಟ್​ ಹಾಫ್​?  ಪುನೀತ್ ಎಂಟ್ರಿಗೆ ಫ್ಯಾನ್ಸ್ ಫಿದಾ!
ಪುನೀತ್​ ರಾಜಕುಮಾರ್​ ಅಭಿನಯದ ‘ಯುವರತ್ನ’
shruti hegde
|

Updated on:Apr 01, 2021 | 9:08 AM

Share

ಪವರ್ ಸ್ಟಾರ್ ಎಂದೇ ಜನಪ್ರಿಯತೆ ಪಡೆದುಕೊಂಡ ಪುನೀತ್ ರಾಜಕುಮಾರ್ ನಟಿಸಿರುವ ಬಹು ನಿರೀಕ್ಷಿತ ಸಿನಿಮಾಗೆ ಜನ ಕಾದು ಕುಳಿತಿದ್ದರು. ಇಂದು ಏಪ್ರಿಲ್ 1ನೇ ತಾರೀಕು ಚಿತ್ರ ಯುವರತ್ನ ಬಿಡುಗಡೆಗೊಂಡಿದ್ದು ಬಹು ನಿರೀಕ್ಷಿತ ಸಿನಿಮಾಕ್ಕೆ ಪ್ರೇಕ್ಷಕರು ಭಾರೀ ಸ್ವಾಗತ ಕೋರಿದ್ದಾರೆ. ಬಹು ದಿನಗಳ ನಂತರ ಕಾಲೇಜ್​ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪುನೀತ್ ಚಿತ್ರದ ಯುವರತ್ನದ ಮೊದಲಾರ್ಧದ ಕಥೆ ಹೀಗಿದೆ.

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಅವರ ಸಿನಿಮಾದಲ್ಲಿ ಡ್ಯಾನ್ಸ್​, ಸಕತ್​ ಫೈಟ್​ ಜೊತೆ ಖಡಕ್​ ಆಗಿರುವ ಡೈಲಾಗ್​ಗಳ ಜೊತೆ ಸುಂದರ ಲವ್​ ಸ್ಟೋರಿಯನ್ನು ನಿರೀಕ್ಷಿಸುತ್ತಾರೆ. ಈ ಎಲ್ಲಾ ಅಂಶಗಳನ್ನು ಸಿನಿಮಾದ ಫಸ್ಟ್​ ಹಾಫ್​ನಲ್ಲಿ ನೀಡುವುದಕ್ಕೆ ನಿರ್ದೇಶಕ ಸಂತೋಷ್​ ರಾಮ್​ ಅವರು ಪ್ರಯತ್ನಪಟ್ಟಿದ್ದಾರೆ. ಒಂದು ಗಂಭೀರದ ವಿಷಯದ ಮೂಲಕ ಯುವರತ್ನ ಸಿನಿಮಾ ಆರಂಭಗೊಳುತ್ತದೆ. ಹಾಂಗತ ಇಡೀ ಚಿತ್ರವನ್ನೂ ನಿರ್ದೇಶಕರು ಗಂಭೀರವಾಗಿಯೇ ಕಟ್ಟಿಕೊಟ್ಟಿಲ್ಲ. ಕಾಮಿಡಿ ಮೂಲಕ ಜನರನ್ನು ನಗಿಸುತ್ತಾ, ಲವ್​ ಸ್ಟೋರಿ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಾ, ಕಥೆ ಮುಂದೇನಾಗತ್ತಪ್ಪಾ? ಎಂಬ ಸಸ್ಪೆನ್ಸ್​ಅನ್ನು ಕಾಪಾಡಿಕೊಳ್ಳುತ್ತಾ ಸಿನಿಮಾ ಸಾಗುತ್ತದೆ.

ಸಕತ್​ ಫೈಟ್​ ಮೂಲಕ ಪ್ರೇಕ್ಷಕರ ಮನಗೆದ್ದ ಪುನೀತ್​

ಪುನೀತ್​ ಅವರ ಫ್ಯಾನ್ಸ್​ಗೆ ಇಷ್ಟ ಆಗುವ ರೀತಿಯಲ್ಲಿಯೇ ಅಪ್ಪು ಅವರು ಆ್ಯಕ್ಷನ್​ ಫೈಟಿಂಗ್ ದೃಶ್ಯದ ಮೂಲಕವೇ ಎಂಟ್ರಿ ಕೊಡ್ತಾರೆ. ಈಗಿನ ಕಾಲೇಜ್​ ಹುಡುಗರ ಬಹು ಮುಖ್ಯ ಸಮಸ್ಯೆಗಳನ್ನು ಇಟ್ಟುಕೊಂಡಂತಹ ಕಥೆಯನ್ನು ಯುವರತ್ನ ಸಿನಿಮಾ ಹೊಂದಿದೆ. ಚಿತ್ರದಲ್ಲಿ ತಮ್ಮ ನಟನೆಯ ಮೂಲಕ ಪ್ರಸಿದ್ಧತೆ ಪಡೆದ ನಟರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲಿ ಡಾಲಿ ಧನಂಜಯ್​ ಅವರು ಫಸ್ಟ್​ ಹಾಫ್​ನಲ್ಲಿ ಹೈಲೈಟ್​ ಆಗಿದ್ದಾರೆ. ಟಗರು ಸಿನಿಮಾದಲ್ಲಿ ಇದ್ದ ಧನಂಜಯ್​ ಅವರ ಡಾಲಿ ಕ್ಯಾರೆಕ್ಟ್​ರ್ನ​ ಮುಂದುವರೆದ ಭಾಗ ಅನ್ನೋ ರೀತಿಯಲ್ಲಿ ಅವರ ಪಾತ್ರ ಮೂಡಿಬಂದಿದೆ.

ಇನ್ನು, ಧನಂಜಯ್​ ಮತ್ತು ಪುನೀತ್​ ರಾಜ್​ಕುಮಾರ್​ ಅವರ ನಡುವಿನ ಮುಖಾಮುಖಿ ಫ್ಯಾನ್ಸ್​ಗೆ ಥ್ರಿಲ್​ ಕೊಡುತ್ತದೆ. ಸಿನಿಮಾ ರಿಲೀಸ್​ ಆಗುವುದಕ್ಕೂ ಮುಂಚೆ ಪವರ್​ ಆಫ್​ ಯೂತ್​ ಹಾಡು ಪ್ರೇಕ್ಷಕರ ಗಮನ ಸೆಳೆಯುತ್ತದೆ. ಸಿನಿಮಾದಲ್ಲಿ ಪುನೀತ್​ ಎಂಟ್ರಿ ನಂತರವೇ ಫವರ್​ಆಫ್​ ಯೂತ್​ ಹಾಡು ಪ್ರೇಕ್ಷಕರ ಗಮನ ಸೆಳೆದಿದ್ದು, ಈ ಹಾಡಿಗೆ ಶಿಳ್ಳೆಗಳ ಸೌಂಡ್​ ಸಿನಿಮಾದ​ ಮೆರುಗು ಹೆಚ್ಚಿಸಿದೆ.

ಪ್ರೇಕ್ಷಕರ ಮನ ಗೆದ್ದ ‘ನೀನಾದೆ ನಾ’

ನಟಿ ಸಾಯೇಷಾ ಮೆಡಿಕಲ್​ ಕಾಲೇಜ್​ ಶಿಕ್ಷಕರಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಈಗಾಗಲೇ ಇಷ್ಟಪಟ್ಟ ‘ನೀನಾದೆ ನಾ’ ಹಾಡು ಸಿನಿಮಾದ ಫಸ್ಟ್​ ಹಾಫ್​ನಲ್ಲಿಯೇ ಇದೆ. ಮೂರು ಜಬರ್ದಸ್ತ್​ ಆದ ಫೈಟ್​ಗಳು ಅಭಿಮಾನಿಗಳಿಗ ಸಕತ್​ ಥ್ರಿಲ್​ ತಂದು ಕೊಡುತ್ತದೆ.ಇದಲ್ಲದೇ ಧಮ್​ ಹೊಡಿತೀಯಾ? ಓಂ ಪಿಕ್ಚರ್​ ನೊಡೀದೀಯಾ? ಈ ತರಹದ ಪಂಚಿಂಗ್​ ಡೈಲಾಗ್​ಗಳು ಫಸ್ಟ್​ ಹಾಫ್​ನಲ್ಲೇ ಹೈಲೈಟ್​ ಆಗಿದೆ. ಇನ್ನಿತರ ಮುಖ್ಯ ಪಾತ್ರಗಳಾದ ನಟ ದಿಗಂತ್​, ಸಾಯಿ ಕುಮಾರ್​, ಪ್ರಕಾಶ್​ ರಾಜ್​ ಹಾಗೂ ಸೋನು ಗೌಡ ಪಾತ್ರಗಳು ಕುತೂಹಲವನ್ನು ಕಾಪಾಡಿಕೊಂಡಿದೆ.

ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ಯುವರತ್ನ ಚಿತ್ರವನ್ನು ನಿರ್ಮಿಸಿದ್ದಾರೆ. ಹಾಗೂ ಸಂತೋಷ್ ಆನಂದರಾಮ್ ಈ ಚಿತ್ರದ ನಿರ್ದೇಶಕರು. ಜೊತೆಗೆ ಕಾರ್ತಿಕ್ ಗೌಡ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಪ್ರೊಮೊದಲ್ಲೇ ಸಕತ್ ಕಿಕ್ ಕೊಟ್ಟ ಈ‌ ಚಿತ್ರಕ್ಕೆ ಎಸ್.ಥಮನ್ ಸಂಗೀತ ನೀಡಿದ್ದಾರೆ. ಚಿತ್ರದ ನಟಿಯಾಗಿ ಸಾಯೀಷಾ ಅಭಿನಯಿಸಿದ್ದು. ಸಾಯೀಷಾ ಮತ್ತು ಪುನೀತ್ ಜೋಡಿಯ ಅಭಿನಯದಲ್ಲಿ ಮೂಡಿಬಂದ ಚಿತ್ರ ಸಕತ್ ಮಿಂಚಿದೆ. ಥಿಯೇಟರ್​ನಲ್ಲಿ ಪ್ರೇಕ್ಷಕರ ಸಿಳ್ಳೆಯ ಹವಾ ಚಿತ್ರದ ಮೆರುಗೆ ಹೆಚ್ಚಿಸಿದೆ.

ಇದನ್ನೂ ಓದಿ: Yuvarathnaa: ಧೂಳೆಬ್ಬಿಸಲು ಬಂದ ಯುವರತ್ನ! ಎಷ್ಟು ಚಿತ್ರಮಂದಿರಗಳಲ್ಲಿ ಪುನೀತ್​ ರಾಜ್​ಕುಮಾರ್ ಹವಾ?

Published On - 8:52 am, Thu, 1 April 21

300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ