AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!

Video: ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!

ಅಕ್ಷತಾ ವರ್ಕಾಡಿ
|

Updated on: May 30, 2026 | 4:19 PM

Share

ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಬಲಿ ಹೋರಿಯೊಂದು ತನ್ನ ಮಾಲೀಕರಿಂದ ತಪ್ಪಿಸಿಕೊಂಡು ರಸ್ತೆಯ ಪಕ್ಕದಲ್ಲಿದ್ದ ಕ್ಷೌರದ ಅಂಗಡಿಗೆ ನುಗ್ಗಿದೆ. ಅಂಗಡಿಯೊಳಗೆ ಭಯದ ವಾತಾವರಣ ಸೃಷ್ಟಿಸಿ, ಗಾಜು ಮತ್ತು ಪೀಠೋಪಕರಣಗಳನ್ನು ಮುರಿದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜನ ಪ್ರಾಣಭಯದಿಂದ ಓಡಿದ್ದಾರೆ. ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗಿದೆ.

ಟರ್ಕಿಯ ಇಸ್ತಾನ್‌ಬುಲ್ ನಗರದ ಬೀದಿಗಳಲ್ಲಿ ಹಬ್ಬದ ಹಿನ್ನೆಲೆಯಲ್ಲಿ ಬಲಿ ಕೊಡಲು ತಂದಿದ್ದ ಹೋರಿಯೊಂದು ತನ್ನ ಮಾಲೀಕನಿಂದ ತಪ್ಪಿಸಿಕೊಂಡು ಓಡಿ ಬಂದು, ನೇರವಾಗಿ ರಸ್ತೆಯ ಪಕ್ಕದಲ್ಲಿದ್ದ ಕ್ಷೌರದ ಅಂಗಡಿಯೊಂದರ (Barber Shop) ಒಳಗೆ ನುಗ್ಗಿ ತೀವ್ರ ಆತಂಕ ಹಾಗೂ ಗೊಂದಲದ ವಾತಾವರಣವನ್ನು ಸೃಷ್ಟಿಸಿದೆ. ಅಂಗಡಿಯ ಒಳಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಇದ್ದಕ್ಕಿದ್ದಂತೆ ಬೃಹತ್ ಹೋರಿ ಒಳಗೆ ನುಗ್ಗುವುದನ್ನು ಕಂಡು, ಅಲ್ಲಿದ್ದವರೆಲ್ಲರೂ ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿಹೋಗುವುದನ್ನು ಕಾಣಬಹುದು. ಅಂಗಡಿಯ ಒಳಗಿದ್ದ ಗಾಜಿನ ಬಾಗಿಲು ಮತ್ತು ಪೀಠೋಪಕರಣಗಳನ್ನು ಮುರಿದು ರಂಪಾಟ ಮಾಡಿದ ಈ ಹೋರಿಯನ್ನು ಹಿಡಿಯಲು ಮಾಲೀಕ ಹಾಗೂ ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us