Yuvarathnaa: ಆರ್ಭಟ ಶುರು ಮಾಡಿದ ಯುವರತ್ನ.. ರಾಜ್ಯಾದ್ಯಂತ ಥಿಯೇಟರ್​ ಮುಂದೆ ಅಭಿಮಾನಿಗಳ ಸಂಭ್ರಮಾಚರಣೆ!

Yuvarathnaa: ಅಭಿಮಾನಿಗಳಿಗಾಗಿಯೇ ವಿಶೇಷ ಪ್ರದರ್ಶನ ಏರ್ಪಾಡು ಮಾಡಿರುವ ಯುವರತ್ನ ಸಿನಿಮಾ ತಂಡ, ಅಭಿಮಾನಿಗಳಿಗಾಗಿ ಒಟ್ಟು 50 ಫ್ಯಾನ್ಸ್ ಶೋಗಳನ್ನ ಮೀಸಲಿರಿಸಿದೆ.

Yuvarathnaa: ಆರ್ಭಟ ಶುರು ಮಾಡಿದ ಯುವರತ್ನ.. ರಾಜ್ಯಾದ್ಯಂತ ಥಿಯೇಟರ್​ ಮುಂದೆ ಅಭಿಮಾನಿಗಳ ಸಂಭ್ರಮಾಚರಣೆ!
ಪುನೀತ್​ ರಾಜ್​ಕುಮಾರ್
Follow us
ಪೃಥ್ವಿಶಂಕರ
|

Updated on:Apr 01, 2021 | 12:37 PM

ಬೆಂಗಳೂರು: ಇಂದು ಬಹುನಿರೀಕ್ಷಿತ ಪುನೀತ್​ ರಾಜ್​ಕುಮಾರ್​ ಅಭಿನಯದ ಯುವರತ್ನ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಕಳೆದರೆಡು ವರ್ಷಗಳಿಂದ ಪವರ್​ ಸ್ಟಾರ್​ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಯುವರತ್ನ ಸಿನಿಮಾ ಇಂದು ಬೆಳಿಗ್ಗೆ 6 ಗಂಟೆಯಿಂದಲೇ ತನ್ನ ಆರ್ಭಟ ಶುರುಮಾಡಿದೆ. ಹೀಗಾಗಿ ತನ್ನ ಆರಾಧ್ಯ ದೈವವನ್ನು ಕಣ್ತುಂಬಿಕೊಳ್ಳಲು ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ಜೊತೆಗೆ ಪುನೀತ್​ ಕಟ್​ಔಟ್​ಗೆ ಹಾಲಿನ ಅಭಿಷೇಕದ ಹಾಗೂ ಥಿಯೇಟರ್​ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.

ಯುವರತ್ನ ಸಿನಿಮಾ ರಾಜಧಾನಿ ಬೆಂಗಳೂರಿನಲ್ಲೂ ಇಂದು ಬೆಳಿಗ್ಗೆಯಿಂದಲೇ ತನ್ನ ಪ್ರದರ್ಶನ ಶುರು ಮಾಡಿದೆ. ಮಧ್ಯ ರಾತ್ರಿಯಿಂದಲೇ ಪುನೀತ್​ ಸಿನಿಮಾ ನೋಡಲು ಚಿತ್ರಮಂದಿರದ ಮುಂದೆ ಕಾದು ಕುಳಿತಿದ್ದ ಅಭಿಮಾನಿಗಳು ತೆರೆಯ ಮೇಲೆ ಪವರ್​ಸ್ಟಾರ್​ ಹವಾ ಕಣ್ತುಂಬಿಗಳು ಕಾಯುತ್ತಿದ್ದರು. ಇದರ ಫಲವಾಗಿ ಬೆಂಗಳೂರಿನ ಎಲ್ಲಾ ಥಿಯೇಟರ್​ಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.

ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ. ಅಭಿಮಾನಿಗಳಿಗಾಗಿಯೇ ವಿಶೇಷ ಪ್ರದರ್ಶನ ಏರ್ಪಾಡು ಮಾಡಿರುವ ಯುವರತ್ನ ಸಿನಿಮಾ ತಂಡ, ಅಭಿಮಾನಿಗಳಿಗಾಗಿ ಒಟ್ಟು 50 ಫ್ಯಾನ್ಸ್ ಶೋಗಳನ್ನ ಮೀಸಲಿರಿಸಿದೆ. ಹೀಗಾಗಿ ಊರ್ವಶಿ, ವಿರೇಶ್ ಚಿತ್ರಮಂದಿರದಲ್ಲಿ ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಅಪ್ಪು ಅಭಿಮಾನಿಗಳ ಸಾಗರವೇ ಸೃಷ್ಟಿಯಾಗಿದೆ. ಬೆಳಗ್ಗೆ ಆರು ಗಂಟೆಗೆಯಿಂದಲೇ ಫ್ಯಾನ್ಸ್ ಶೋ ಆರಂಭವಾಗಿದ್ದು ಒಟ್ಟು 600ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಯುವರತ್ನ ರಿಲೀಸ್ ಆಗಿದೆ.

ಕರ್ನಾಟಕದಲ್ಲಿ 400, ಆಂಧ್ರ ತೆಲಂಗಾಣದಲ್ಲಿ 200 ಚಿತ್ರಮಂದಿರಗಳಲ್ಲಿ ಯುವರತ್ನ ರಿಲೀಸ್ ಆಗಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಒಟ್ಟಿಗೆ ತೆರೆಗೆ ಬಂದಿದೆ. ಲಾಕ್​ಡೌನ್ ಬಳಿಕ ರಿಲೀಸ್ ಆಗ್ತಿರೋ 3ನೇ ಬಿಗ್ ಬಜೆಟ್ ಸಿನಿಮಾ ಯುವರತ್ನವಾಗಿದೆ.

ಇದನ್ನೂ ಓದಿ: Yuvarathnaa: ಧೂಳೆಬ್ಬಿಸಲು ಬಂದ ಯುವರತ್ನ! ಎಷ್ಟು ಚಿತ್ರಮಂದಿರಗಳಲ್ಲಿ ಪುನೀತ್​ ರಾಜ್​ಕುಮಾರ್ ಹವಾ?

Published On - 7:25 am, Thu, 1 April 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ