Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖುಷಿ ಯಾರಿಗೆ ಬೇಡ? ಸ್ಯಾಂಡಲ್​ವುಡ್​ಗೆ ನಾಯಕಿಯಾಗಿ ಎಂಟ್ರಿಕೊಟ್ಟ ಸಿಗರೇಟ್ ಜಾಗೃತಿ​ ಜಾಹೀರಾತಿನ ಬಾಲನಟಿ

ಜಾಹೀರಾತಿನಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡವರು ಸಿಮ್ರಾನ್ ನಾಟೇಕರ್. ಕೇಂದ್ರ ಸರ್ಕಾರದಿಂದ ಪ್ರಕಟವಾಗುವ ಈ ಜಾಹಿರಾತಿನಲ್ಲಿ ಅಭಿನಯಿಸಿ, ಚಿಕ್ಕ ವಯಸ್ಸಿನಲ್ಲಿ ಎಲ್ಲರಿಗೂ ಚಿರಪರಿತರಾಗಿದ್ದರು.

ಖುಷಿ ಯಾರಿಗೆ ಬೇಡ? ಸ್ಯಾಂಡಲ್​ವುಡ್​ಗೆ ನಾಯಕಿಯಾಗಿ ಎಂಟ್ರಿಕೊಟ್ಟ ಸಿಗರೇಟ್ ಜಾಗೃತಿ​ ಜಾಹೀರಾತಿನ ಬಾಲನಟಿ
ಸಿಮ್ರಾನ್​
Follow us
ರಾಜೇಶ್ ದುಗ್ಗುಮನೆ
|

Updated on: Apr 01, 2021 | 7:45 PM

ಯಾವುದೇ ಚಿತ್ರ ಮಂದಿರಕ್ಕೆ ಹೋದರೂ ಸಿನಿಮಾ ಪರದೆಮೇಲೆ ಬರುವುದಕ್ಕೂ ಮೊದಲು ಖುಷಿ ಯಾರಿಗೆ ಬೇಡ…? ಎಂದು ಜಾಹೀರಾತೊಂದು ಆರಂಭಗೊಳ್ಳುತ್ತದೆ. ಇದು ಸಿಗರೇಟ್​ ಬಗ್ಗೆ ಜಾಗೃತಿ ಮೂಡಿಸುವ ಜಾಹೀರಾತು. ಈ ಜಾಹೀರಾತಿನಲ್ಲಿದ್ದ ಸಣ್ಣ ಬಾಲಕಿ ಈಗ ಕನ್ನಡದ ಬರ್ಕ್ಲಿ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಜಾಹೀರಾತಿನಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡವರು ಸಿಮ್ರಾನ್ ನಾಟೇಕರ್. ಕೇಂದ್ರ ಸರ್ಕಾರದಿಂದ ಪ್ರಕಟವಾಗುವ ಈ ಜಾಹಿರಾತಿನಲ್ಲಿ ಅಭಿನಯಿಸಿ, ಚಿಕ್ಕ ವಯಸ್ಸಿನಲ್ಲಿ ಎಲ್ಲರಿಗೂ ಚಿರಪರಿತರಾಗಿದ್ದರು. ಈಗ ಅವರು ಕನ್ನಡಕ್ಕೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.

ಮೂಲತಃ ಮುಂಬೈನವರಾದ ಸಿಮ್ರಾನ್ ಸಾಕಷ್ಟು ಜಾಹಿರಾತುಗಳಲ್ಲಿ ಅಭಿನಯಿಸಿದ್ದಾರೆ. ಈಗ ಅವರನ್ನು ಕನ್ನಡಕ್ಕೆ ತರುವ ಪ್ರಯತ್ನ ನಡೆದಿದೆ. ಸಂತೋಷ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆನೇಕಲ್ ಬಾಲರಾಜ್ ಅವರು ನಿರ್ಮಿಸುತ್ತಿರುವ ಬರ್ಕ್ಲಿ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ಬಿರುಸಿನಿಂದ ಸಾಗಿದೆ.

ಈ ಹಿಂದೆ ಕರಿಯ, ಗಣಪ, ಕರಿಯ ೨, ಅದ್ದೂರಿ ಚಿತ್ರಗಳನ್ನು ನಿರ್ಮಿಸಿರುವ ಅನುಭವ ಆನೇಕಲ್ ಬಾಲರಾಜ್ ಅವರಿಗಿದೆ. ಈಗ ಅವರು ಬರ್ಕ್ಲಿ ಚಿತ್ರವನ್ನು ನಿರ್ಮಾಣ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ವಸಿಷ್ಠ ಸಿಂಹ ಅಭಿನಯದ ಕಾಲಚಕ್ರ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿರುವ ಸುಮಂತ್ ಕ್ರಾಂತಿ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರೋದು ವಿಶೇಷ. ಗಣಪ, ಕರಿಯ 2 ಚಿತ್ರಗಳಲ್ಲಿ ನಟಿಸಿ ಖ್ಯಾತಿಗಳಿಸಿರುವ ಸಂತೋಷ್ ಬಾಲರಾಜ್ ಈ ಚಿತ್ರಕ್ಕೆ ಹೀರೋ. ಚರಣರಾಜ್, ಖ್ಯಾತ ನಟಿ ಶೃತಿ, ಬಲ ರಾಜವಾಡಿ , ಬುಲೆಟ್ ಪ್ರಕಾಶ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.

ಕೃಷ್ಣಕುಮಾರ್, ಎನ್.ಎಂ.ಸೂರಿ ಛಾಯಾಗ್ರಹಣ, ಅಮಿತ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಬಹದ್ದೂರ್ ಚೇತನ್ ಕುಮಾರ್, ಅಭಿ ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಜ್ಯೂಡ ಸ್ಯಾಂಡಿ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: Yuvarathnaa: ಆರ್ಭಟ ಶುರು ಮಾಡಿದ ಯುವರತ್ನ.. ರಾಜ್ಯಾದ್ಯಂತ ಥಿಯೇಟರ್​ ಮುಂದೆ ಅಭಿಮಾನಿಗಳ ಸಂಭ್ರಮಾಚರಣೆ!

(Cigarette advertisement Simran Natekar To act in Kannada Movie Barkli )