ಸೌಂಡ್ ಸರಿಯಾಗಿ ಕೇಳಿಸಲ್ಲ ಎಂದು ಗಲಾಟೆ ಮಾಡಿದ ‘ಯುವರತ್ನ’ ಪ್ರೇಕ್ಷಕರು; ಹಣ ಮರಳಿಸಿದ ಊರ್ವಶಿ ಥಿಯೇಟರ್ ಮಾಲೀಕರು

ಸಿನಿಮಾ ಪ್ರದರ್ಶನಕ್ಕೂ ಮುನ್ನವೇ ಎಲ್ಲಾ ರೀತಿಯಲ್ಲೂ ಪರಿಶೀಲನೆ ಮಾಡಿದ್ದೆವು. ಆದರೆ ಮಧ್ಯದಲ್ಲಿ ಹೀಗಾಗಿದೆ ಎಂದು ಟಿವಿ9 ಕನ್ನಡಕ್ಕೆ ಚಿತ್ರಮಂದಿರದ ಮಾಲೀಕರು ಸ್ಪಷ್ಟನೆ ನಿಡಿದ್ದಾರೆ. ಅಲ್ಲದೇ ಅಭಿಮಾನಿಗಳಲ್ಲಿ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

ಸೌಂಡ್ ಸರಿಯಾಗಿ ಕೇಳಿಸಲ್ಲ ಎಂದು ಗಲಾಟೆ ಮಾಡಿದ ‘ಯುವರತ್ನ’ ಪ್ರೇಕ್ಷಕರು; ಹಣ ಮರಳಿಸಿದ ಊರ್ವಶಿ ಥಿಯೇಟರ್ ಮಾಲೀಕರು
ಪುನೀತ್​ ರಾಜ್​ಕುಮಾರ್​ ಯುವರತ್ನ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 01, 2021 | 10:36 PM

ಬೆಂಗಳೂರು: ಇಂದು ರಿಲೀಸ್ ಆದ ‘ಯುವರತ್ನ’ ಸಿನಿಮಾ ನೋಡುವ ವೇಳೆ ನಗರದ ಊರ್ವಶಿ ಚಿತ್ರಮಂದಿರದಲ್ಲಿ ಕೆಲ ಪ್ರೇಕ್ಷಕರು ಗಲಾಟೆ ಮಾಡಿದ ಘಟನೆ ನಡೆದಿದೆ. ಚಿತ್ರಮಂದಿರದಲ್ಲಿ ಚಿತ್ರದ ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ ಎಂದು ಕೆಲವು ಪ್ರೇಕ್ಷಕರು ಗಲಾಟೆ ಮಾಡಿದ್ದಾರೆ. ಹೀಗಾಗಿ ಸೌಂಡ್ ಕುರಿತು ತಕರಾರು ಎತ್ತಿದವರನ್ನು ಥಿಯೇಟರ್ ಸಿಬ್ಬಂದಿ ಹಣ ವಾಪಸ್​ ಕೊಟ್ಟು ಕಳಿಸುತ್ತಿದ್ದಾರೆ. ಜತೆಗೆ ಚಿತ್ರಮಂದಿರದ ಮಾಲೀಕರೇ ಸ್ವತಃ ಸ್ಪಷ್ಟನೆ  ನೀಡಿ ಸಿನಿಮಾ ಅಭಿಮಾನಿಗಳಲ್ಲಿ  ಮನವಿಯೊಂದನ್ನು ಮಾಡಿದ್ದಾರೆ.

ಲಾಕ್​ಡೌನ್​ನಿಂದಾಗಿ ವರ್ಷದಿಂದ ಚಿತ್ರಮಂದಿರ ಮುಚ್ಚಿತ್ತು. ಒಂದು ವರ್ಷದಿಂದ ಮುಚ್ಚಿದ್ದಕ್ಕೆ ತಾಂತ್ರಿಕ ತೊಂದರೆ ಆಗಿದೆ. ಅಭಿಮಾನಿಗಳು ಕೊರೊನಾ ಲಾಕ್​ಡೌನ್​ನಿಂದ ಚಿತ್ರಮಂದಿರದಲ್ಲಿ ಉಂಟಾದ ಸಮಸ್ಯೆಗೆ ಸ್ಪಂದಿಸಬೇಕು ಎಂದು ಊರ್ವಶಿ ಚಿತ್ರಮಂದಿರದ ಮಾಲೀಕರು ಮನವಿ ಮಾಡಿದ್ದಾರೆ. ಸಿನಿಮಾ ಪ್ರದರ್ಶನಕ್ಕೂ ಮುನ್ನವೇ ಎಲ್ಲಾ ರೀತಿಯಲ್ಲೂ ಪರಿಶೀಲನೆ ಮಾಡಿದ್ದೆವು. ಆದರೆ ಮಧ್ಯದಲ್ಲಿ ಹೀಗಾಗಿದೆ ಎಂದು ಟಿವಿ9 ಕನ್ನಡಕ್ಕೆ ಚಿತ್ರಮಂದಿರದ ಮಾಲೀಕರು ಸ್ಪಷ್ಟನೆ ನಿಡಿದ್ದಾರೆ. ಅಲ್ಲದೇ ಅಭಿಮಾನಿಗಳಲ್ಲಿ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

ಇಂದು (ಏಪ್ರಿಲ್ 1) ಅದ್ದೂರಿಯಾಗಿ ಎಲ್ಲಾ ಕಡೆ ಯುವರತ್ನ ರಿಲೀಸ್​ ಆಗಿದೆ.  ಹಲವು ಚಿತ್ರಮಂದಿರಗಳಲ್ಲಿ ಬೆಳಗ್ಗೆಯಿಂದಲೇ ಈ ಸಿನಿಮಾ ಧೂಳೆಬ್ಬಿಸುತ್ತಿದೆ. ಕಳೆದ 2 ವರ್ಷಗಳಿಂದ ಪುನೀತ್ ರಾಜ್​ಕುಮಾರ್​ ಅಭಿಮಾನಿಗಳಿಗೆ ಚಿತ್ರಮಂದಿರದಲ್ಲಿ ತಮ್ಮ ನೆಚ್ಚಿನ ನಟನ ದರ್ಶನ ಆಗಿಲ್ಲ. ಹಾಗಾಗಿ ಎಲ್ಲರಲ್ಲೂ ಹೆಚ್ಚಿನ ಕಾತರ ಇದೆ. ಅದಕ್ಕೆ ತಕ್ಕಂತೆಯೇ ದೊಡ್ಡಮಟ್ಟದಲ್ಲಿ ಸಿನಿಮಾ ಸೌಂಡು ಮಾಡುತ್ತಿದೆ. ಕರ್ನಾಟಕದ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯುವರತ್ನನ ಆಗಮನ ಆಗುತ್ತಿದೆ. ಕನ್ನಡದ ಜೊತೆಗೆ ತೆಲುಗಿಗೂ ಈ ಸಿನಿಮಾ ಡಬ್​ ಆಗಿದೆ. ಆಂಧ್ರ ಮತ್ತು ತೆಲಂಗಾಣದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ.

ಸ್ಟಾರ್​ ಸಿನಿಮಾಗಳನ್ನು ಮುಂಜಾನೆಯೇ ಕಣ್ತುಂಬಿಕೊಳ್ಳದಿದ್ದರೆ ಅಭಿಮಾನಿಗಳಿಗೆ ಸಮಾಧಾನವೇ ಆಗುವುದಿಲ್ಲ. ಅಪ್ಪು ಫ್ಯಾನ್ಸ್​ಗೂ ಈ ಮಾತು ಅನ್ವಯ. ಗುರುವಾರ ಬೆಳಗ್ಗೆಯೇ ಅನೇಕ ಚಿತ್ರಮಂದಿರಗಳಲ್ಲಿ ಯುವರತ್ನ ಪ್ರದರ್ಶನ ಆರಂಭ ಆಗಿದೆ. ಬೆಂಗಳೂರಿನ ಜೆಪಿ ನಗರದ ಸಿದ್ದೇಶ್ವರ, ಸಿದ್ದಲಿಂಗೇಶ್ವರ, ತಾವರೆಕರೆಯ ಬಾಲಾಜಿ ಚಿತ್ರಮಂದಿರ ಸೇರಿದಂತೆ ಅನೇಕ ಕಡೆಗಳಲ್ಲಿ ಮುಂಜಾನೆ 6 ಗಂಟೆಗೆ ಶೋ ಶುರುವಾಗಿದೆ. ಎಲ್ಲಾ ಕಡೆಗಳಲ್ಲಿ ಪುನೀತ್​ ಕಟೌಟ್​ಗಳು ರಾರಾಜಿಸುತ್ತಿವೆ.

ಬೆಂಗಳೂರಿನಲ್ಲಿ ಮೊದಲ ದಿನವೇ ಯುವರತ್ನ ಚಿತ್ರಕ್ಕೆ 650 ಶೋಗಳು ಮೀಸಲಾಗಿವೆ. ಬಹುತೇಕ ಕಡೆಗಳಲ್ಲಿ ಟಿಕೆಟ್​ಗಳು ಸೋಲ್ಡ್​ಔಟ್​ ಆಗಿವೆ. ಇನ್ನು, ವಿದೇಶದಲ್ಲೂ ಪುನೀತ್​ ಹವಾ ಜೋರಾಗಿರಲಿದೆ. ಕರ್ನಾಟಕದ ರೀತಿಯೇ ಅಮೆರಿಕಾ, ಸಿಂಗಾಪುರ, ದುಬೈ ಮುಂತಾದ ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನ ಆಗುತ್ತಿದೆ.

‘ರಾಜಕುಮಾರ’ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಮತ್ತು ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಅವರಿಗೆ ಭಾರಿ ಯಶಸ್ಸು ಸಿಕ್ಕಿತ್ತು. ಈಗ ಎರಡನೇ ಬಾರಿಗೆ ಈ ನಟ-ನಿರ್ದೇಶಕನ ಪವರ್​ಫುಲ್ ಕಾಂಬಿನೇಷನ್​ನಲ್ಲಿ ಯುವರತ್ನ ಸಿನಿಮಾ ಮೂಡಿಬಂದಿದ್ದು, ಸಹಜವಾಗಿಯೇ ಹೈಪ್​ ಸೃಷ್ಟಿಯಾಗಿದೆ. ಪುನೀತ್​ಗೆ ನಾಯಕಿಯಾಗಿ ಸಾಯೇಷಾ ನಟಿಸಿದ್ದಾರೆ.

ಪ್ರಕಾಶ್​ ರೈ, ಡಾಲಿ ಧನಂಜಯ, ಸೋನೂ ಗೌಡ, ದಿಗಂತ್​, ರಾಧಿಕಾ ಶರತ್​ ಕುಮಾರ್​, ಸಾಯಿಕುಮಾರ್​ ಮುಂತಾದ ಖ್ಯಾತ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಎಸ್​. ಥಮನ್​ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಪಾಠಶಾಲಾ..’ ಹಾಡು ಗಮನ ಸೆಳೆದಿದೆ. ಹಲವು ವರ್ಷಗಳ ಬಳಿಕ ಪುನೀತ್​ ರಾಜ್​ಕುಮಾರ್​ ಅವರು ಕಾಲೇಜು ವಿದ್ಯಾರ್ಥಿ ಆಗಿ ಕಾಣಿಸಿಕೊಂಡಿರುವುದು ವಿಶೇಷ.

ಇದನ್ನೂ ಓದಿ: ಯುವರತ್ನ ಸಿನಿಮಾ ರಿಲೀಸ್ ಟಿವಿ9 ರಾಜರತ್ನ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೇಳಿದ್ದೇನು?

Yuvarathnaa Movie Review: ಸೂಪರ್​ ಸಂದೇಶ ಸಾರುವ ಯುವರತ್ನ; ಫ್ಯಾನ್ಸ್​ ಮೆಚ್ಚಿಸುವ ಯತ್ನ!

ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ