- Kannada News Entertainment Sandalwood ಗ್ರ್ಯಾಂಡ್ ಆಗಿ ನೆರವೇರಿದ ಚಂದನ್-ಕವಿತಾ ನಿಶ್ಚಿತಾರ್ಥ; ಇಲ್ಲಿವೆ ನೋಡಿ ಫೋಟೋಗಳು
ಗ್ರ್ಯಾಂಡ್ ಆಗಿ ನೆರವೇರಿದ ಚಂದನ್-ಕವಿತಾ ನಿಶ್ಚಿತಾರ್ಥ; ಇಲ್ಲಿವೆ ನೋಡಿ ಫೋಟೋಗಳು
ಏಪ್ರಿಲ್ 1ರಂದೇ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Updated on: Apr 01, 2021 | 8:25 PM

ಅನೇಕ ವರ್ಷಗಳಿಂದ ಪ್ರೀತಿ ಮಾಡುತ್ತಾ ಇದ್ದ ಜೋಡಿ ಚಂದನ್ ಕುಮಾರ್ ಹಾಗೂ ಕವಿತಾ ಗೌಡ. ಇಬ್ಬರ ಪ್ರೀತಿ ವಿಚಾರ ಎಲ್ಲಿಯೂ ಬಹಿರಂಗಗೊಂಡಿರಲಿಲ್ಲ. ಈಗ ಇವರ ಪ್ರೀತಿಗೆ ನಿಶ್ಚಿತಾರ್ಥದ ಮುದ್ರೆ ಬಿದ್ದಿದೆ.

ಕಿರುತೆರೆ ಪ್ರೇಕ್ಷಕರ ವಲಯದಲ್ಲಿ ಸಖತ್ ಜನಪ್ರಿಯವಾಗಿದ್ದ ‘ಲಕ್ಷ್ಮೀ ಬಾರಮ್ಮ’ ಸೀರಿಯಲ್ನಲ್ಲಿ ಚಂದನ್ ಕುಮಾರ್ ಮತ್ತು ಕವಿತಾ ಜೋಡಿಯಾಗಿ ನಟಿಸಿದ್ದರು. ಆಗಿನಿಂದಲೇ ಅವರಿಬ್ಬರ ನಡುವೆ ಸ್ನೇಹ ಚಿಗುರಿತ್ತು.

ನಂತರದ ದಿನಗಳಲ್ಲಿ ಅವರಿಬ್ಬರ ಆಪ್ತತೆ ಹೆಚ್ಚಾಯಿತು. ಆದರೆ ಎಂದೂ ಕೂಡ ಅವರು ತಮ್ಮ ಪ್ರೀತಿ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಹಾಗಿದ್ದರೂ ನೆಟ್ಟಿಗರಿಗೆ ಗುಮಾನಿ ಶುರುವಾಗಿತ್ತು.

ಕವಿತಾ ಮತ್ತು ಚಂದನ್ ಕುಮಾರ್ ನೇರವಾಗಿ ಏನನ್ನೂ ಹೇಳಿಕೊಳ್ಳುತ್ತಿರಲಿಲ್ಲ. ಹಾಗಿದ್ದರೂ ಕೂಡ ಅವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅನೇಕ ಸಾಕ್ಷಿಗಳು ಸಿಗಲು ಆರಂಭಿಸಿದವು. ಇಬ್ಬರೂ ಜೊತೆಯಾಗಿ ಸುತ್ತಾಡುತ್ತಿದ್ದರು.

ಇತ್ತೀಚೆಗೆ ಹೊಸ ಪೋಸ್ಟ್ ಹಾಕಿಕೊಳ್ಳುವ ಮೂಲಕ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತೇನೆ ಎಂದಿದ್ದರು.

ಅಂತೆಯೇ ಏಪ್ರಿಲ್ 1ರಂದೇ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮದುವೆ ದಿನಾಂಕ ಇನ್ನಷ್ಟೇ ಅಧೀಕೃತಗೊಳ್ಳಬೇಕಿದೆ.



















