ಮಾಡಿದ ತಪ್ಪನ್ನು ಜಾಸ್ತಿ ದಿನ ಮುಚ್ಚಿಡೋಕಾಗಲ್ಲ ಅಲ್ವಾ?; ಸುದೀಪ್​ ನೇರ ಪ್ರಶ್ನೆಗೆ ಶಮಂತ್​ ತಬ್ಬಿಬ್ಬು

ಈ ಬಾರಿಯ ಎಲಿಮಿನೇಷನ್ ಪ್ರಕ್ರಿಯೆಯ ಕೊನೆಯಲ್ಲಿ ಉಳಿದುಕೊಂಡಿದ್ದು ಶಮಂತ್​ ಮತ್ತು ಶಂಕರ್​ ಅಶ್ವತ್ಥ್​. ಶಮಂತ್​ ಕೊನೆಯ ಕ್ಷಣದಲ್ಲಿ ಬಚಾವ್​ ಆಗಿದ್ದು, ಶಂಕರ್​ ಅಶ್ವತ್ಥ್​ ಎಲಿಮಿನೇಟ್​ ಆಗಿದ್ದಾರೆ.

ಮಾಡಿದ ತಪ್ಪನ್ನು ಜಾಸ್ತಿ ದಿನ ಮುಚ್ಚಿಡೋಕಾಗಲ್ಲ ಅಲ್ವಾ?; ಸುದೀಪ್​ ನೇರ ಪ್ರಶ್ನೆಗೆ ಶಮಂತ್​ ತಬ್ಬಿಬ್ಬು
ಶಮಂತ್-ಕಿಚ್ಚ ಸುದೀಪ್​
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Apr 05, 2021 | 4:57 PM

ಬಿಗ್​ ಬಾಸ್​ ಮನೆಯಲ್ಲಿರುವ ಶಮಂತ್​ ಬ್ರೋ ಗೌಡ ತುಂಬಾನೇ ವೀಕ್​ ಸ್ಪರ್ಧಿ ಎಂಬುದು ಮನೆಯವರೆಲ್ಲರ ನಂಬಿಕೆ. ಇದಕ್ಕಾಗಿಯೇ ಸಮಯ ಸಿಕ್ಕಾಗೆಲ್ಲ ಮನೆಯ ಬಹುತೇಕ ಸ್ಪರ್ಧಿಗಳು ಶಮಂತ್​ ಮೈನಸ್​ ಪಾಯಿಂಟ್​ ಬಗ್ಗೆ ಹೇಳುತ್ತಲೇ ಇರುತ್ತಾರೆ. ಈಗ ಬಿಗ್​ ಬಾಸ್​ ಮನೆಯಲ್ಲಿ ಶಮಂತ್​ಗೆ ಸುದೀಪ್​ ನೇರ ಪ್ರಶ್ನೆ ಕೇಳಿದ್ದಾರೆ. ಈ ಬಾರಿಯ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕೊನೆಯಲ್ಲಿ ಉಳಿದುಕೊಂಡಿದ್ದು ಶಮಂತ್​ ಮತ್ತು ಶಂಕರ್​ ಅಶ್ವತ್ಥ್​. ಶಮಂತ್​ ಕೊನೆಯ ಕ್ಷಣದಲ್ಲಿ ಬಚಾವ್​ ಆಗಿದ್ದು, ಶಂಕರ್​ ಅಶ್ವತ್ಥ್​ ಎಲಿಮಿನೇಟ್​ ಆಗಿದ್ದಾರೆ. ವೇದಿಕೆ ಮೇಲೆ ಬಂದ ಶಂಕರ್​, ಆರನೇ ವಾರ ಎಲಿಮಿನೇಟ್​ ಆಗೋದು ಶಮಂತ್​ ಎಂದು ಭವಿಷ್ಯ ನುಡಿದರು.

ಇದಕ್ಕೂ ಮೊದಲು ಶಮಂತ್​ ಮಾಡಿದ ತಪ್ಪೊಂದು ಜಗತ್​ ಜಾಹೀರಾಗಿದೆ. ಅದು ಕಿಚ್ಚ ಸುದೀಪ್​ ಎದುರೇ ಅನ್ನೋದು ವಿಶೇಷ. ಕಿಚ್ಚ ಸುದೀಪ್​ ಮನೆಯ ಸದಸ್ಯರಿಗೆ ಪ್ರಶ್ನೆ ಒಂದನ್ನು ಕೇಳಿದ್ದರು. ಬಿಗ್​ ಬಾಸ್​ ಮನೆಯಲ್ಲಿ ವೈಷ್ಣವಿ ಚೆನ್ನಾಗಿ ಅಡುಗೆ ಮಾಡುತ್ತಾರೆ. ಇದಕ್ಕೆ ಹೌದು ಅಥವಾ ಇಲ್ಲ ಎನ್ನುವ ಉತ್ತರವನ್ನು ಸ್ಪರ್ಧಿಗಳು ನೀಡಬೇಕು.

ಬಹುತೇಕರು ಹೌದು ಎಂದು ಉತ್ತರಿಸಿದರೆ, ಕೆಲವೇ ಕೆಲವು ಮಂದಿ ಮಾತ್ರ ಇಲ್ಲ ಎನ್ನುವ ಉತ್ತರ ನೀಡಿದರು. ಶಮಂತ್​ ಅವರು ವೈಷ್ಣವಿ ಚೆನ್ನಾಗಿ ಅಡುಗೆ ಮಾಡುತ್ತಾರೆ ಎಂದು ಬಾಯ್ತುಂಬ ಹೊಗಳಿದರು. ವೈಷ್ಣವಿ ಅವರು ತುಂಬಾನೇ ಚೆನ್ನಾಗಿ ಅಡುಗೆ ಮಾಡುತ್ತಾರೆ. ಊಟ ವಿಳಂಬವಾಗುತ್ತದೆ ಎಂದಾಗ ಮಧ್ಯೆ ಹೊಟ್ಟೆ ಹಸಿಯದಂತೆ ನೋಡಿಕೊಳ್ಳಲು ಸಣ್ಣ-ಪುಟ್ಟ ಅಡುಗೆ ಮಾಡಿ ಕೊಡ್ತಾರೆ. ಮೊನ್ನೆ ಕದ್ದು ತಿಂದ.. ಎಂದು ಹೇಳುವಾಗ ಶಮಂತ್​ಗೆ ತಪ್ಪಿನ ಅರಿವಾಗಿ ಮಾತನ್ನು ನುಂಗಿದ್ದಾರೆ.

ಐದನೇ ವಾರ ಬಿಗ್​ ಬಾಸ್​ ಮನೆಯಲ್ಲಿ ಶಮಂತ್, ವೈಷ್ಣವಿ ಮೊದಲಾದವರು ನಿಪ್ಪಟ್ಟಿಗೆ ಟೊಮ್ಯಾಟೋ ಹಾಕಿಕೊಂಡು ಅದನ್ನು ಕದ್ದು ತಿಂದಿದ್ದರು. ಇದು ಮನೆಯಲ್ಲಿ ಅನೇಕರಿಗೆ ಗೊತ್ತಿಲ್ಲ. ಅದು ವೀಕೆಂಡ್​ನಲ್ಲಿ ಶಮಂತ್ ಬಾಯಿಯಿಂದಲೇ ಹೊರ ಬಿದ್ದಿದೆ. ಈ ವೇಳೆ ಸುದೀಪ್​, ‘ಮಾಡಿದ ತಪ್ಪನ್ನು ಜಾಸ್ತಿ ದಿನ ಮುಚ್ಚಿಡೋಕೆ ಆಗಲ್ಲ ಅಲ್ವಾ’ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಶಮಂತ್ ತಬ್ಬಿಬ್ಬಾಗಿದ್ದಾರೆ.

ಇದನ್ನೂ ಓದಿ: ಇಲ್ಲಿದ್ದವರೆಲ್ಲಾ​ ಬುಕ್​ ಆಗಿದಾರೆ, ನನಗೆ ಯಾರೂ ಇಲ್ಲ; ಸುದೀಪ್​ ಮುಂದೆ ಶಮಂತ್​ ಬೇಸರ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್