ಇಲ್ಲಿದ್ದವರೆಲ್ಲಾ​ ಬುಕ್​ ಆಗಿದಾರೆ, ನನಗೆ ಯಾರೂ ಇಲ್ಲ; ಸುದೀಪ್​ ಮುಂದೆ ಶಮಂತ್​ ಬೇಸರ

ಹುಡುಗಿಯರನ್ನು ಹೇಗೆ ಬೀಳಿಸಿಕೊಳ್ಳಬೇಕು ಎಂಬುದನ್ನು ಪ್ರಶಾಂತ್​ ಹೇಳಿಕೊಟ್ಟರು. ಏನೆಲ್ಲ ಮಾಡಿಕೊಡಬೇಕು ಎಂಬುದನ್ನೂ ಹೇಳಿದರು ಎಂದು ಪ್ರಶಾಂತ್​ ಮಾತನ್ನು ಶಮಂತ್​ ಪುನರುಚ್ಛರಿಸಿದರು.

ಇಲ್ಲಿದ್ದವರೆಲ್ಲಾ​ ಬುಕ್​ ಆಗಿದಾರೆ, ನನಗೆ ಯಾರೂ ಇಲ್ಲ; ಸುದೀಪ್​ ಮುಂದೆ ಶಮಂತ್​ ಬೇಸರ
ಬಿಗ್​ಬಾಸ್​ ಸ್ಪರ್ಧಿ ಶಮಂತ್​
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Apr 05, 2021 | 4:08 PM

ಪ್ರತೀ ವೀಕೆಂಡ್​ ವೇಳೆ ಬಿಗ್​ ಬಾಸ್​ ಮನೆಯಲ್ಲಿ  ಕಿಚ್ಚ ಸುದೀಪ್​ ಅವರು ಸ್ಪರ್ಧಿಗಳ ಜತೆ ಮಾತನಾಡುತ್ತಾರೆ. ಈ ವೇಳೆ ಸುದೀಪ್​ ಎದುರು ಅವರೆಲ್ಲ ಕಷ್ಟ-ಸುಖ ತೋಡಿಕೊಳ್ಳುತ್ತಾರೆ. ಈಗ ಶಮಂತ್​ ಕೂಡ ವೀಕೆಂಡ್​ನಲ್ಲಿ ಸುದೀಪ್​ ಎದುರು ತಮ್ಮ ಕಷ್ಟ ಹಂಚಿಕೊಂಡಿದ್ದಾರೆ. ನಮಗೆ ಯಾವ ಹುಡುಗಿಯೂ ಸಿಗುತ್ತಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಎಲ್ಲರೂ ಬುಕ್​ ಆಗಿದ್ದಾರೆ ಎಂದು ಬೇಸರ ಹೊರ ಹಾಕಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್ ಸಂಬರಗಿ ಅವರು ಹುಡುಗಿಯರ ವಿಚಾರದಲ್ಲಿ ಶಮಂತ್​ ಬ್ರೋ ಗೌಡಗೆ ಕೆಲ ಟಿಪ್ಸ್​ ನೀಡಿದ್ದರು. ಬಿಗ್​ ಬಾಸ್​ ಮನೆಯಲ್ಲಿ ಹುಡುಗಿಯರನ್ನು ಬೀಳಿಸಿಕೊಳ್ಳೋದು ಹೇಗೆ ಎಂಬ ಟೆಕ್ನಿಕ್​ ಹೇಳಿದ್ದರು. ಈ ವಿಚಾರವನ್ನು ಸುದೀಪ್​ ಕೂಡ ಪ್ರಸ್ತಾಪ ಮಾಡಿದರು. ಆಗ ಶಮಂತ್​, ಪ್ರಶಾಂತ್​ ಏನೆಲ್ಲ ಹೇಳಿದ್ದರು ಎಂಬುದನ್ನು ಸುದೀಪ್​ ಎದುರು ಹೇಳಿಕೊಂಡರು.

ಹುಡುಗಿಯರನ್ನು ಹೇಗೆ ಬೀಳಿಸಿಕೊಳ್ಳಬೇಕು ಎಂಬುದನ್ನು ಪ್ರಶಾಂತ್​ ಹೇಳಿಕೊಟ್ಟರು. ಏನೆಲ್ಲ ಮಾಡಿಕೊಡಬೇಕು ಎಂಬುದನ್ನೂ ಅವರು ಹೇಳಿದರು ಎಂದು ಪ್ರಶಾಂತ್​ ಮಾತನ್ನು ಪುನರುಚ್ಛರಿಸಿದರು. ಆಗ ಸುದೀಪ್​, ಅವರು ಹೇಳಿಕೊಟ್ಟ ಟಿಪ್ಸ್​ ಕೆಲಸ ಮಾಡ್ತಾ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಶಮಂತ್​, ಇಲ್ಲಿ ಎಲ್ಲರೂ ಬುಕ್​ ಆಗಿ ಬಿಟ್ಟಿದ್ದಾರೆ. ನಂಗೆ ಇಲ್ಲಿ ಹುಡ್ಕೊಳೋಕೆ ಯಾರು ಇಲ್ಲ ಎಂದು ನಕ್ಕರು. ಆಗ ಸುದೀಪ್​, ಬುಕ್​ ಆಗಿರೋದು ಅಂದ್ರಲ್ಲ ಅದು ಯಾವ್​ ತರ ಎಂದು ಪ್ರಶ್ನೆ ಮಾಡಿದಾಗ ಶಮಂತ್​ಗೆ ಉತ್ತರಿಸೋದೆ ಕಷ್ಟವಾಗಿ ಹೋಗಿತ್ತು. ಏನು ಹೇಳಬೇಕು ಎಂಬುದು ಗೊತ್ತಾಗದೆ ತಡವರಿಸಿದರು. ಇತ್ತೀಚೆಗೆ ಅರವಿಂದ್​-ದಿವ್ಯಾ ಉರುಡುಗ ಗರ್ಲ್​ಫ್ರೆಂಡ್​ ಎಂದು ಹೇಳಿದ್ದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಪ್ರಶಾಂತ್​ ವಿರುದ್ಧ ದಿವ್ಯಾ ಉರುಡುಗ ಜಗಳವಾಡಿದ್ದರು. ಇದನ್ನು ನೆನಪು ಮಾಡಿಕೊಂಡು ಹೆಸರು ಹೇಳೋಕೆ ಶಮಂತ್​​ ಭಯಪಟ್ಟರು.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್ ಕೇಳಿದ 10 ಜನರಲ್​ ನಾಲೆಡ್ಜ್​ ಪ್ರಶ್ನೆಗೆ ಉತ್ತರಿಸದೇ ಸೋತ ಶಮಂತ್​! ನಿಮಗೆ ಉತ್ತರ ಗೊತ್ತಾ?