ಕ್ಯಾರವಾನ್ನಲ್ಲಿ ಸುದೀಪ್-ಪ್ರಥಮ್ ನಡುವೆ ನಡೆದಿದ್ದೇನು?
ಏ.10ರಿಂದ ಕುಕ್ಕೂ ವಿತ್ ಕಿರಿಕ್ಕು ಕಾರ್ಯಕ್ರಮ ಸ್ಟಾರ್ ಸುವರ್ಣದಲ್ಲಿ ಆರಂಭಗೊಳ್ಳುತ್ತಿದ್ದು, ರಾತ್ರಿ 8:30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ.
ನಟ ಪ್ರಥಮ್ ಕನ್ನಡ ಬಿಗ್ ಬಾಸ್ ಸೀಸನ್ 4ರ ವಿನ್ನರ್ ಆಗಿದ್ದರು. ಅವರು ಮನೆಗೆ ಕಾಲಿಟ್ಟು ಸಖತ್ ಎಂಟರ್ಟೇನ್ಮೆಂಟ್ ನೀಡಿದ್ದರು. ಅಷ್ಟೇ ಅಲ್ಲ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಅವರನ್ನು ತುಂಬಾನೇ ಗೋಳು ಹೊಯ್ದುಕೊಂಡಿದ್ದರು. ಈಗ ಕಿಚ್ಚ ಸುದೀಪ್ ಕುಕ್ಕು ವಿತ್ ಕಿರಿಕ್ಕು ರಿಯಾಲಿಟಿ ಶೋಗೆ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಇದಕ್ಕೂ ಮೊದಲು ಸುದೀಪ್ ಹಾಗೂ ಪ್ರಥಮ್ ನಡುವೆ ರಹಸ್ಯ ಮಾತುಕತೆ ಒಂದು ನಡೆದಿದೆಯಂತೆ!
ಈ ಸಿಕ್ರೆಟ್ ಮಾತುಕತೆ ಬಗ್ಗೆ ಪ್ರಥಮ್ ಮಾಹಿತಿ ಹಂಚಿಕೊಂಡಿದ್ದಾರೆ. ಕುಕ್ಕು ವಿತ್ ಕಿರಿಕ್ಕು ಕಾರ್ಯಕ್ರಮಕ್ಕೂ ಮೊದಲು ನಾನು ಸುದೀಪ್ ಇದ್ದ ಕ್ಯಾರವಾನ್ಗೆ ತೆರಳಿದ್ದೆ. ಈ ವೇಳೆ ಅವರು, ವೇದಿಕೆ ಮೇಲೆ ಸಿಗಬಹುದಿತ್ತಲ್ಲ ಎಂದಿದ್ದರು. ಶೋನಲ್ಲಿ ಸ್ಟಾರ್ಗಳು ಸಿಗ್ತಾರೆ. ಆ್ಯಂಕರ್ ಸುದೀಪ್ ಅವರನ್ನು 114 ದಿನ ನಾನು ಬಿಗ್ ಬಾಸ್ ವೇದಿಕೆ ಮೇಲೆ ನೋಡಿದ್ದೇನೆ. ಕ್ಯಾರವಾನ್ನಲ್ಲಿ ಸಿಗೋದು ಸೃಜನಶೀಲ ಸುದೀಪ್ ಎಂದು ಉತ್ತರಿಸಿದೆ. ಅಷ್ಟೇ ಅಲ್ಲ, ನನ್ನ ನಿರ್ದೇಶನದ ನಟ ಭಯಂಕರ ಸಿನಿಮಾದ ಟ್ರೇಲರ್ ತೋರಿಸಿದೆ. ಟ್ರೇಲರ್ ನೋಡಿ ಸುದೀಪ್ ತುಂಬಾನೇ ಖುಷಿ ಪಟ್ಟರು ಎಂದಿದ್ದಾರೆ ಪ್ರಥಮ್. ಇದೇ ಹತ್ತರಿಂದ ಕುಕ್ಕೂ ವಿತ್ ಕಿರಿಕ್ಕು ಕಾರ್ಯಕ್ರಮ ಸ್ಟಾರ್ ಸುವರ್ಣದಲ್ಲಿ ಆರಂಭಗೊಳ್ಳುತ್ತಿದ್ದು, ರಾತ್ರಿ 8:30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಸೆಲೆಬ್ರಿಟಿಗಳು ನಡೆಸಿಕೊಡುವುದು ಮಾತ್ರವಲ್ಲ, ಸಾಕಷ್ಟು ಸೆಲೆಬ್ರಿಟಿಗಳು ಪಾಲ್ಗೊಳ್ಳುತ್ತಿದ್ದಾರೆ.
ಈ ಕಾರ್ಯಕ್ರಮದ ಗ್ರ್ಯಾಂಡ್ ಓಪನಿಂಗ್ಗೆ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ. ಈ ವೇಳೆ ಅವರು ಬಿಗ್ ಬಾಸ್ ನಾಲ್ಕನೇ ಸೀಸನ್ ಅನುಭವ ಹಂಚಿಕೊಂಡಿದ್ದಾರೆ. ಪ್ರಥಮ್ ಒಂದು ಸೀಸನ್ ನಮ್ಮ ಜತೆಗೆ ಇದ್ರು. ಅವರಿಂದ ತಪ್ಪಿಸಿಕೊಂಡು ಬರೋವರೆಗೆ ಸಾಕು ಸಾಕಾಯಿತು. ಇನ್ನೇನು ಶೋ ಮುಗಿಯುತ್ತದೆ ಎನ್ನುವಾಗ ಅವರು ಕೈ ಎತ್ತುತ್ತಿದ್ದರು. ಆಗ ಮಾತನಾಡೋಕೆ ಆರಂಭಿಸಿದರೆ ನಿಲ್ಲಿಸ್ತಾನೇ ಇರಲಿಲ್ಲ ಎಂದು ಪ್ರಥಮ್ ಗುಣಗಾನ ಮಾಡಿದ್ದಾರೆ.
View this post on Instagram
‘ಕುಕ್ಕು ವಿಥ್ ಕಿರಿಕ್ಕು’ ಅಡುಗೆ ಕಾರ್ಯಕ್ರಮ. ಈ ಕಾರ್ಯಕ್ರಮದ ಶೈಲಿ ಸಂಪೂರ್ಣ ಭಿನ್ನವಾಗಿರಲಿದೆ. ಸೆಲೆಬ್ರಿಟಿಗಳು ಮತ್ತು ಜನಸಾಮಾನ್ಯರು ಕೂಡ ಭಾಗವಹಿಸಲಿದ್ದಾರೆ. ಬಗೆಬಗೆಯ ಅಡುಗೆ ಮಾಡುವುದರ ಜೊತೆಗೆ ಸಿಕ್ಕಾಪಟ್ಟೆ ಕಾಮಿಡಿ ಕೂಡ ಈ ಕಾರ್ಯಕ್ರಮದಲ್ಲಿ ಇರಲಿದೆ ಎಂಬುದು ವಿಶೇಷ.
ಈ ಕಾರ್ಯಕ್ರಮದಲ್ಲಿ ಸುದೀಪ್ ಮಾತ್ರವಲ್ಲದೆ, ಅಕುಲ್ ಬಾಲಾಜಿ, ಬೊಂಬಾಟ್ ಬೋಜನ ಕಾರ್ಯಕ್ರಮದ ಮೂಲಕ ಅನೇಕ ಅಡುಗೆಗಳನ್ನು ವೀಕ್ಷಕರಿಗೆ ಪರಿಚಯಿಸಿರುವ ಸಿಹಿ ಕಹಿ ಚಂದ್ರು ಕೂಡ ಇರಲಿದ್ದಾರೆ.
ಒಂದೇ ಶೋನಲ್ಲಿ ಪ್ರಥಮ್, ಸಿಹಿಕಹಿ ಚಂದ್ರು, ಅಕುಲ್ ಬಾಲಾಜಿ! ಕಿರುತೆರೆ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ