ಒಂದೇ ಶೋನಲ್ಲಿ ಪ್ರಥಮ್​, ಸಿಹಿಕಹಿ ಚಂದ್ರು, ಅಕುಲ್​ ಬಾಲಾಜಿ! ಕಿರುತೆರೆ ಪ್ರೇಕ್ಷಕರಿಗೆ ಮಸ್ತ್​​ ಮನರಂಜನೆ

ಪ್ರಥಮ್​, ಸಿಹಿಕಹಿ ಚಂದ್ರು ಮತ್ತು ಅಕುಲ್​ ಬಾಲಾಜಿ ತಮ್ಮದೇ ಆದಂತಹ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಈಗ ಹೊಸ ಕಾರ್ಯಕ್ರಮದ ಸಲುವಾಗಿ ಈ ಮೂವರು ಸೆಲೆಬ್ರಿಟಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಒಂದೇ ಶೋನಲ್ಲಿ ಪ್ರಥಮ್​, ಸಿಹಿಕಹಿ ಚಂದ್ರು, ಅಕುಲ್​ ಬಾಲಾಜಿ! ಕಿರುತೆರೆ ಪ್ರೇಕ್ಷಕರಿಗೆ ಮಸ್ತ್​​ ಮನರಂಜನೆ
ಸಿಹಿಕಹಿ ಚಂದ್ರು, ಪ್ರಥಮ್​, ಅಕುಲ್​ ಬಾಲಾಜಿ


ಕಿರುತೆರೆಯಲ್ಲಿ ಒಂದೆಡೆ ಧಾರಾವಾಹಿಗಳು ಸದ್ದು ಮಾಡಿದರೆ, ಇನ್ನೊಂದೆಡೆ ನಾನ್​-ಫಿಕ್ಷನ್​ ಶೋಗಳು ಗಮನ ಸೆಳೆಯುತ್ತವೆ. ಈ ಎರಡೂ ವಿಭಾಗಗಳ ನಡುವೆ ಯಾವಾಗಲೂ ಒಂದು ಬಗೆಯ ಪೈಪೋಟಿ ಇದ್ದೇ ಇರುತ್ತದೆ. ಈಗ ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಹೊಸದೊಂದು ಕಾರ್ಯಕ್ರಮ ಶುರು ಆಗುತ್ತಿದೆ. ಅದರಲ್ಲಿ ಪ್ರಥಮ್​, ಸಿಹಿಕಹಿ ಚಂದ್ರು ಮತ್ತು ಅಕುಲ್​ ಬಾಲಾಜಿ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಮೂವರಿಗೂ ಕಿರುತೆರೆ ಹೊಸದೇನಲ್ಲ. ಸಿಹಿ-ಕಹಿ ಚಂದ್ರು ಮತ್ತು ಅಕುಲ್​ ಬಾಲಾಜಿ ಅವರು ಅನೇಕ ಕಾರ್ಯಕ್ರಮಗಳ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಪ್ರಥಮ್​ ಕೂಡ ಬಿಗ್​ ಬಾಸ್​, ‘ಸಂಜು ಮತ್ತು ನಾನು’ ಮುಂತಾದ ಕಾರ್ಯಕ್ರಮಗಳ ಮೂಲಕ ಕಿರುತೆರೆ ಜೊತೆ ಒಡನಾಟ ಬೆಳೆಸಿಕೊಂಡಿದ್ದಾರೆ. ಈ ಮೂವರಿಗೆ ತಮ್ಮದೇ ಆದಂತಹ ಫ್ಯಾನ್​ ಫಾಲೋಯಿಂಗ್​ ಇದೆ. ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ಈ ಮೂವರು ಒಂದಾಗುತ್ತಿದ್ದಾರೆ.

ಸ್ಟಾರ್​ ಸುವರ್ಣ ವಾಹಿನಿಯಲ್ಲಿ ‘ಕುಕ್ಕು ವಿಥ್​ ಕಿರಿಕ್ಕು’ ಎಂಬ ಕಾರ್ಯಕ್ರಮ ಶೀಘ್ರದಲ್ಲೇ ಶುರು ಆಗಲಿದೆ. ಇದೊಂದು ಅಡುಗೆ ಕಾರ್ಯಕ್ರಮ ಆಗಿದ್ದರೂ ಕೂಡ ಇದರ ಶೈಲಿ ಸಂಪೂರ್ಣ ಭಿನ್ನವಾಗಿರಲಿದೆ. ಸೆಲೆಬ್ರಿಟಿಗಳು ಮತ್ತು ಜನಸಾಮಾನ್ಯರು ಕೂಡ ಭಾಗವಹಿಸಲಿದ್ದಾರೆ. ಬಗೆಬಗೆಯ ಅಡುಗೆ ಮಾಡುವುದರ ಜೊತೆಗೆ ಸಿಕ್ಕಾಪಟ್ಟೆ ಕಾಮಿಡಿ ಕೂಡ ಇರಲಿದೆ ಎಂಬುದು ವಿಶೇಷ.

ಸದ್ಯಕ್ಕೆ ಈ ಕಾರ್ಯಕ್ರಮದ ಪ್ರೋಮೋ ಮಾತ್ರ ರಿಲೀಸ್​ ಆಗಿದೆ. ಸಖತ್​ ಕಲರ್​ಫುಲ್​ ಆಗಿ ಮೂಡಿಬಂದಿರುವ ಈ ಪ್ರೋಮೋ ನೋಡಿದ ಬಳಿಕ ವೀಕ್ಷಕರಲ್ಲಿ ಕೌತುಕ ಹೆಚ್ಚಿದೆ. ಈಗಾಗಲೇ ಬೊಂಬಾಟ್​ ಬೋಜನ ಕಾರ್ಯಕ್ರಮದ ಮೂಲಕ ಅನೇಕ ಅಡುಗೆಗಳನ್ನು ವೀಕ್ಷಕರಿಗೆ ಪರಿಚಯಿಸಿರುವ ಸಿಹಿ ಕಹಿ ಚಂದ್ರು ಅವರು ಈಗ ‘ಕುಕ್ಕು ವಿಥ್​ ಕಿರಿಕ್ಕು’ ಕಾರ್ಯಕ್ರಮದಲ್ಲಿ ಹೊಸದೇನನ್ನು ಹೇಳಿಕೊಡಲಿದ್ದಾರೆ? ಇಂಥ ಅಡುಗೆ ಶೋನಲ್ಲಿ ಅಕುಲ್​ ಬಾಲಾಜಿ ಮತ್ತು ಪ್ರಥಮ್​ಗೆ ಏನು ಕೆಲಸ? ಈ ಎಲ್ಲ ಪ್ರಶ್ನೆಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ.

ಇದನ್ನೂ ಓದಿ: Kannada Serial: ಧಾರಾವಾಹಿ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ ಸಾಧು ಕೋಕಿಲ! ಕಾಮಿಡಿ ಕಲಾವಿದನ ಹೊಸ ಸಾಹಸ

Puneeth Rajkumar: ಯುವರತ್ನ ರಿಲೀಸ್​ಗೂ ಮುನ್ನವೇ ಧಾರಾವಾಹಿ ಕಡೆಗೆ ಗಮನ ಹರಿಸಿದ ಪುನೀತ್​ ರಾಜ್​ಕುಮಾರ್​! ಅಭಿಮಾನಿಗಳಿಗೆ ಸರ್ಪ್ರೈಸ್​

Click on your DTH Provider to Add TV9 Kannada