Bigg Boss Kannada Elimination: ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್​ ಆದ ನಿರ್ಮಲಾ ಚೆನ್ನಪ್ಪ; ಇಲ್ಲಿದೆ ಕಾರಣ

ನಿರ್ಮಲಾ ಮನೆಯವರ ಜತೆ ಹೆಚ್ಚು ಹೊಂದುಕೊಳ್ಳುತ್ತಿಲ್ಲ. ಅವರೇ ಬೇರೆ ರೀತಿ ಇರುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಅಷ್ಟೇ ಅಲ್ಲ, ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಮೊದಲ ವಾರದಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದ ಸ್ಪರ್ಧಿ ಎಂದರೆ ಅದು ನಿರ್ಮಲಾ ಚೆನ್ನಪ್ಪ.

Bigg Boss Kannada Elimination: ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್​ ಆದ ನಿರ್ಮಲಾ ಚೆನ್ನಪ್ಪ; ಇಲ್ಲಿದೆ ಕಾರಣ
ನಿರ್ಮಲಾ ಚೆನ್ನಪ್ಪ
Follow us
ರಾಜೇಶ್ ದುಗ್ಗುಮನೆ
|

Updated on: Mar 14, 2021 | 10:17 PM

ಬಹುಪ್ರತಿಭಾನ್ವಿತ ನಿರ್ಮಲಾ ಚೆನ್ನಪ್ಪ ಅವರು ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಗಳಲ್ಲಿ ಒಬ್ಬರಾಗಿ ಮನೆ ಸೇರಿದ್ದರು. ಆದರೆ, ಅವರು ಅಂದುಕೊಂಡ ಮಟ್ಟದಲ್ಲಿ ಆಟವಾಡಿಲ್ಲ. ಸತತ ಎರಡನೇ ವಾರವೂ ಎಲಿಮಿನೇಷನ್​ಗೆ ನಾಮಿನೇಟ್​ ಆಗಿದ್ದರು. ಕಳೆದ ವಾರ ಬಚಾವ್​ ಆಗಿದ್ದ ಅವರು, ಈ ವಾರ ಎಲಿಮಿನೇಟ್​ ಆಗಿದ್ದಾರೆ. ನಿರ್ಮಲಾ ಮನೆಯವರ ಜತೆ ಹೆಚ್ಚು ಹೊಂದುಕೊಳ್ಳುತ್ತಿಲ್ಲ. ಅವರೇ ಬೇರೆ ರೀತಿ ಇರುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಅಷ್ಟೇ ಅಲ್ಲ, ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಮೊದಲ ವಾರದಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದ ಸ್ಪರ್ಧಿ ಎಂದರೆ ಅದು ನಿರ್ಮಲಾ ಚೆನ್ನಪ್ಪ. ಎಲ್ಲ ಸದಸ್ಯರು ಒಂದು ಹಾದಿಯಲ್ಲಿ ಸಾಗಿದರೆ, ನಿರ್ಮಲಾ ಪ್ರತ್ಯೇಕ ಹಾದಿಯಲ್ಲಿ ಹೋಗುತ್ತಿದ್ದರು. ಅವರ ವರ್ತನೆ ಅನೇಕರಿಗೆ ಅಚ್ಚರಿ ಮೂಡಿಸಿತ್ತು.

ದೊಡ್ಮನೆಯೊಳಗೆ ನಿರ್ಮಲಾ ಬಗ್ಗೆ ಇರುವ ಮೊದಲ ಮತ್ತು ಮುಖ್ಯವಾದ ಕಂಪ್ಲೆಂಟ್​ ಎಂದರೆ, ಅವರು ಕ್ಯಾಮರಾ ಎದುರು ಒಬ್ಬೊಬ್ಬರೇ ಮಾತನಾಡಿಕೊಳ್ಳುತ್ತಾರೆ ಎಂಬುದು. ಹಗಲು-ರಾತ್ರಿ ಎನ್ನದೇ ಅವರು ಏನೇನೋ ಮಾತನಾಡುತ್ತ ಇರುತ್ತಿದ್ದರು. ಸೋಮವಾರ ನಾಮಿನೇಷನ್​ ಆಗುವಾಗ ಅತಿ ಹೆಚ್ಚು ಮತ ಬಿದ್ದಿದ್ದು ಕೂಡ ಇವರಿಗೇ ಆಗಿತ್ತು. ಈಗ ವೀಕ್ಷಕರು ನಿರ್ಮಲಾ ಕೈ ಹಿಡಿದಿಲ್ಲ. ಹೀಗಾಗಿ, ಅವರು ಬಿಗ್​ ಬಾಸ್ ಮನೆಯಿಂದ ಹೊರ ಹೋಗುತ್ತಿರುವ ಎರಡನೇ ಅಭ್ಯರ್ಥಿ ಇವರಾಗಿದ್ದಾರೆ.

ನಾಮಿನೇಟ್​ ಆಗಿದ್ದರು. ಆದರೆ ಶನಿವಾರದ (ಮಾ.13) ‘ವಾರದ ಕಥೆ ಕಿಚ್ಚನ ಕಥೆ’ ಎಪಿಸೋಡ್​ನಲ್ಲಿ ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಮತ್ತು ದಿವ್ಯಾ ಸುರೇಶ್​ ಸೇಫ್​ ಆಗಿದ್ದರು. ಭಾನುವಾರ ಪ್ರಶಾಂತ್​, ಗೀತಾ, ವಿಶ್ವ, ಚಂದ್ರಕಲಾ ಸೇಫ್​ ಆದರು. ಈ ಬಾರಿ ಬಿಗ್​ ಬಾಸ್​ ಮನೆಯಿಂದ ಗೀತಾ ಭಾರತಿ ಭಟ್​ ಹೋಗುತ್ತಾರೆ ಎನ್ನಲಾಗಿತ್ತು. ಆದರೆ, ಅವರು ಕೂದಲೆಳೆಯಲ್ಲಿ ಬಚಾವ್​ ಆಗಿದ್ದಾರೆ.

ವಿಚಿತ್ರವಾಗಿ ನಡೆದುಕೊಂಡಿದ್ದ ನಿರ್ಮಲಾ: ಕಳೆದವಾರ ದಿನವಿಡೀ ತುಂಬಾ ಸಿಂಪಲ್​ ಆಗಿ ಬಟ್ಟೆ ಧರಿಸಿದ್ದ ನಿರ್ಮಲಾ ಚೆನ್ನಪ್ಪ ಅವರು ಮಧ್ಯರಾತ್ರಿ ಆಗುತ್ತಿದ್ದಂತೆಯೇ ಸೀರೆ ಧರಿಸಿದ್ದರು. ಅಷ್ಟೇ ಅಲ್ಲ, ಮೇಕಪ್​ ಮಾಡಿಕೊಂಡು ಕನ್ನಡಿ ಮುಂದೆ ನಿಂತಿದ್ದರು. ಅದೂ ಸಾಲದೆಂಬಂತೆ ಮೂಲೆಯಲ್ಲಿ ಕುಳಿತು ಒಬ್ಬೊಬ್ಬರೇ ಮಾತನಾಡಿಕೊಳ್ಳುತ್ತಿದ್ದರು! ಇದನ್ನು ನೋಡಿದ ಎಲ್ಲರೂ ಅಚ್ಚರಿಗೆ ಒಳಗಾಗಿದ್ದರು. ಇದು ಸಾಕಷ್ಟು ಚರ್ಚೆ ಆಗಿತ್ತು.

ನಿರ್ಮಲಾ ಹಿನ್ನೆಲೆ: 2012 ರಲ್ಲಿ ತಲ್ಲಣ ಚಿತ್ರಕ್ಕಾಗಿ ನಿರ್ಮಲಾ ಪ್ರಶಸ್ತಿ ಗೆದ್ದಿದ್ದಾರೆ. ಮೂಲತಃ ಮಧ್ಯಮ ವರ್ಗದಿಂದ ಬಂದಿರುವ ಚೆನ್ನಪ್ಪ ತಮ್ಮ ಪದವಿ ಶಿಕ್ಷಣವನ್ನು ಮುಗಿಸಿದ್ದಾರೆ. ಕನ್ನಡ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ತಮ್ಮ ನೆಲೆಕಂಡುಕೊಂಡಿರುವ ಈ ನಟಿ, ಕನ್ನಡದ ಖ್ಯಾತ ಬರಹಗಾರ ಪೂರ್ಣ ಚಂದ್ರ ತೇಜಸ್ವಿಯವರ ಕಿರಗೂರಿನ ಗೈಯಾಳಿಗಳು ಕಾದಂಬರಿ ಆಧಾರಿತ ಚಿತ್ರಕ್ಕೆ ಡಬ್ಬಿಂಗ್​ ಕಲಾವಿದೆಯಾಗಿ ಸಹ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ:‘ಅಸಭ್ಯವಾಗಿ ಮುಟ್ಟಿದರೆ ಬಿಗ್​ ಬಾಸ್​ ಸಹಿಸಲ್ಲ’: ಸುದೀಪ್​ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ