ಸಾಯಿ ಪಲ್ಲವಿ ದುಬಾರಿ ಸೀರೆ; ಆದರೆ ವೈರಲ್​ ಆಗಿರುವ ವಿಚಾರವೇ ಬೇರೆ!

ಪ್ರಮೋಷನ್​ ವೇಳೆ ಸಾಯಿ ಪಲ್ಲವಿ ತಿಳಿ ನೀಲಿ ಬಣ್ಣದ ಸೀರೆ ತೊಟ್ಟಿದ್ದರು. ಈ ಸೀರೆಯ ಬೆಲೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಎನ್ನಲಾಗುತ್ತಿದೆ. ಈ ಸ್ಯಾರಿ ತೊಟ್ಟಿದ್ದ ಅವರು ಕ್ಯಾಮೆರಾಗಿ ಸಖತ್​ ಆಗಿ ಪೋಸ್​ ನೀಡಿದ್ದಾರೆ.

ಸಾಯಿ ಪಲ್ಲವಿ ದುಬಾರಿ ಸೀರೆ; ಆದರೆ ವೈರಲ್​ ಆಗಿರುವ ವಿಚಾರವೇ ಬೇರೆ!
ಸಾಯಿ ಪಲ್ಲವಿ
Follow us
ರಾಜೇಶ್ ದುಗ್ಗುಮನೆ
|

Updated on: Apr 05, 2021 | 5:28 PM

ಸ್ಟಾರ್​ ನಟ-ನಟಿಯರು ದುಬಾರಿ ಬೆಲೆಯ ಬಟ್ಟೆ, ಬ್ಯಾಗ್​, ವಾಚ್​ ಧರಿಸುತ್ತಾರೆ. ಕೆಲವೊಮ್ಮೆ ಇದು ಅಭಿಮಾನಿಗಳ ಕಣ್ಣಿಗೆ ಬೀಳುತ್ತದೆ. ಅಷ್ಟೇ ಅಲ್ಲ, ಆ ಬಟ್ಟೆಯ ಬೆಲೆ ಎಷ್ಟು, ಅದು ಯಾವ ಬ್ರ್ಯಾಂಡ್ ಎನ್ನುವ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಚ್ಚರಿವ್ಯಕ್ತಪಡಿಸುತ್ತಾರೆ. ಈಗ ದಕ್ಷಿಣ ಭಾರತದ ಸ್ಟಾರ್​ ನಟಿ ಸಾಯಿ ಪಲ್ಲವಿ ಇದೇ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅವರು ತೊಟ್ಟಿರುವ ಬಟ್ಟೆಯ ಬೆಲೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮುಂಬರುವ ‘ಲವ್​ ಸ್ಟೋರಿ’ ಸಿನಿಮಾ ಪ್ರಮೋಷನ್​ನಲ್ಲಿ ಸಾಯಿ ಪಲ್ಲವಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ನಾಗ ಚೈತನ್ಯ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಶೇಖರ್​ ಕಮ್ಮುಲಾ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇತ್ತೀಚೆಗೆ ಈ ಮೂವರು ರಾನಾ ದಗ್ಗುಬಾಟಿ ಚ್ಯಾಟ್ ಶೋಗೆ ಆಗಮಿಸಿದ್ದರು. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗಿತ್ತು. ಇದಾದ ಬೆನ್ನಲ್ಲೇ ಬೇರೆ ಬೇರೆ ಕಡೆ ತೆರಳಿ ತಂಡ ಪ್ರಚಾರ ಕಾರ್ಯ ನಡೆಸುತ್ತಿದೆ.

ಪ್ರಮೋಷನ್​ ವೇಳೆ ಸಾಯಿ ಪಲ್ಲವಿ ತಿಳಿ ನೀಲಿ ಬಣ್ಣದ ಸೀರೆ ತೊಟ್ಟಿದ್ದರು. ಈ ಸೀರೆಯ ಬೆಲೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಎನ್ನಲಾಗುತ್ತಿದೆ. ಈ ಸ್ಯಾರಿ ತೊಟ್ಟಿದ್ದ ಅವರು ಕ್ಯಾಮೆರಾಗಿ ಸಖತ್​ ಆಗಿ ಪೋಸ್​ ನೀಡಿದ್ದಾರೆ. ಈ ವೇಳೆ ನಾಚಿ ನೀರಾಗಿದ್ದಾರೆ. ಅವರ ಸೀರೆ ಫೋಟೋ ಹೈಲೈಟ್​ ಆಗೋ ಬದಲು ಅವರು ನಾಚಿಕೊಂಡಿದ್ದರ ಬಗ್ಗೆಯೇ ಚರ್ಚೆ ಆಗುತ್ತಿದೆ.

ಸಾಯಿ ಪಲ್ಲವಿ ಎಲ್ಲಾ ವಿಚಾರವನ್ನೂ ಸಿಂಪಲ್​ ಆಗಿಟ್ಟುಕೊಳ್ಳುತ್ತಾರೆ. ಆನ್​ ಸ್ಕ್ರೀನ್​ನಲ್ಲೂ ಅವರು ಮೇಕಪ್​ ಮಾಡಿಕೊಂಡಿದ್ದು ಕೂಡ ತುಂಬಾನೇ ಅಪರೂಪ. ಸದ್ಯ ಅವರ ನಾಚಿ ನೀರಾಗಿ ನಗುತ್ತಿರುವ ಫೋಟೋ ತುಂಬಾನೇ ಹೈಲೈಟ್​ ಆಗಿದೆ.

‘ಲವ್​ ಸ್ಟೋರಿ’ ಸಿನಿಮಾ ಏಪ್ರಿಲ್​ 16ರಂದು ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಕಾಂಬಿನೇಷನ್​ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಸಖತ್​​ ಎಗ್ಸೈಟ್​ ಆಗಿದ್ದಾರೆ. ಸದ್ಯ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿದೆ.

ಇದನ್ನೂ ಓದಿ: ಮಂಗ್ಲಿ ಹಾಡಿದ, ನಟಿ ಸಾಯಿ ಪಲ್ಲವಿ ನಟಿಸಿದ ’ಸರಂಗಾ ದರಿಯಾ’ ಹಾಡು ಮುರಿಯುತ್ತಿದೆ ದಾಖಲೆಗಳನ್ನು…!

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ