AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜು ಬೇಡಿಕೆ ಈಡೇರಿಸಿದ ಬಿಗ್​ ಬಾಸ್​; ಒಂದೇ ದಿನ ಇಬ್ಬರು ಹೆಣ್ಮಕ್ಳು ವೈಲ್ಡ್​ ಕಾರ್ಡ್​ ಎಂಟ್ರಿ!

ಪ್ರಿಯಾಂಕಾ ತಿಮ್ಮೇಶ್ ಕೂಡ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಭೀಮಸೇನ ನಳಮಹಾರಾಜ ಚಿತ್ರದ ನಾಯಕಿ ಇದೀಗ ಬಿಗ್​ಬಾಸ್​ ಮನೆಗೆ ಕಾಲಿಟ್ಟಿರುವುದು ಭಾರೀ ಕುತೂಹಲ ಮೂಡಿಸಿದೆ.

ಮಂಜು ಬೇಡಿಕೆ ಈಡೇರಿಸಿದ ಬಿಗ್​ ಬಾಸ್​; ಒಂದೇ ದಿನ ಇಬ್ಬರು ಹೆಣ್ಮಕ್ಳು ವೈಲ್ಡ್​ ಕಾರ್ಡ್​ ಎಂಟ್ರಿ!
ವೈಜಯಂತಿ ಅಡಿಗ-ಪ್ರಿಯಾಂಕಾ ತಿಮ್ಮೇಶ್​
ರಾಜೇಶ್ ದುಗ್ಗುಮನೆ
|

Updated on: Apr 08, 2021 | 10:43 PM

Share

ಬಿಗ್​ ಬಾಸ್​ ಏಪ್ರಿಲ್​ 8ರ ಎಪಿಸೋಡ್​ನಲ್ಲಿ ಸ್ಪರ್ಧಿಗಳಿಗೆ ಸರ್​ಪ್ರೈಸ್​ ಮೇಲೆ ಸರ್​ಪ್ರೈಸ್​ ಸಿಕ್ಕಿದೆ. ಮನೆಗೆ ಒಂದೇ ದಿನ ಎರಡೆರಡು ವೈಲ್ಡ್​ ಕಾರ್ಡ್​ ಎಂಟ್ರಿ ಸಿಕ್ಕಿದೆ. ಪ್ರಿಯಾಂಕಾ ತಿಮ್ಮೇಶ್​ ಹಾಗೂ ವೈಜಯಂತಿ ಅಡಿಗ ಬಿಗ್​ ಬಾಸ್​ ಮನೆಗೆ ಹೊಸ ಸ್ಪರ್ಧಿಯಾಗಿ ಬಂದಿದ್ದಾರೆ. ಈ ಮೂಲಕ ಮನೆಯ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಈ ವಾರ ನೂತನ ಸ್ಪರ್ಧಿಯಾಗಿ ಮೊದಲು ವೈಜಯಂತಿ ಅಡಿಗ ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದಾರೆ. ಕನ್​ಫೆಷನ್​ ರೂಂನಿಂದ ಅವರು ನೇರವಾಗಿ ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವಾಸುದೇವ ಅಡಿಗ ಅವರ ಮಗಳು ವೈಜಯಂತಿ ಅಡಿಗ. ಹೋಟೆಲ್​ ಉದ್ಯಮ ಇವರ ಮುಖ್ಯ ವೃತ್ತಿ. ಅಮ್ಮಚ್ಚಿಯೆಂಬ ನೆನಪು ಸಿನಿಮಾದಲ್ಲೂ ವೈಜಯಂತಿ ಬಣ್ಣ ಹಚ್ಚಿದ್ದಾರೆ. ಇವರನ್ನು ನೋಡಿ ಮಂಜು ತುಂಬಾನೇ ಖುಷಿ ಆಗಿದ್ದಾರೆ.

ಪ್ರಿಯಾಂಕಾ ತಿಮ್ಮೇಶ್ ಕೂಡ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಭೀಮಸೇನ ನಳಮಹಾರಾಜ ಚಿತ್ರದ ನಾಯಕಿ ಇದೀಗ ಬಿಗ್​ಬಾಸ್​ ಮನೆಗೆ ಕಾಲಿಟ್ಟಿರುವುದು ಭಾರೀ ಕುತೂಹಲ ಮೂಡಿಸಿದೆ. 2015ರಲ್ಲಿ ಗಣಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾಂಕಾ ತಿಮ್ಮೇಶ್ ಕೆಲ ಅನ್ಯ ಭಾಷೆ ಸಿನಿಮಾಗಳಲ್ಲೂ ನಟಿಸಿದ್ದಾರೆ.

ಪ್ರಿಯಾಂಕಾ ತಿಮ್ಮೇಶ್ ಮತ್ತು ಪ್ರಿಯಾಂಕಾ ಬಿಗ್​ಬಾಸ್ ಮೂಲಕ ಹೇಗೆ ಮನರಂಜಿಸಲಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಮನೆಗೆ ಯಾರಾದರೂ ಹೊಸ ಹುಡುಗಿ ಬರಲಿ ಎಂದು ಕಾಯುತ್ತಿದ್ದ ಮಂಜುಗೆ ಇದು ಖುಷಿ ಕೊಟ್ಟಿರುತ್ತದೆ ಎಂದು ಕೆಲವರು ಕಾಲೆಳೆದಿದ್ದಾರೆ.

ಅಂದಹಾಗೆ, ಕಾಣೆಯಾಗಿದ್ದ ಮಂಜು ಕನ್​ಫೆಷನ್​​ರೂಂನಲ್ಲೇ ಕುಳಿತಿದ್ದರು. ಅವರು ಹೊರ ಬಂದ ನಂತರ ಮನೆಯವರೆಲ್ಲರಿಗೂ ಪರಿಚಯಿಸಿದರು. ನಂತರ ಪ್ರಿಯಾಂಕಾ ಚಿಕನ್​ ಹಿಡಿದುಕೊಂಡೇ ಬಿಗ್​ ಬಾಸ್​ ಮನೆಗೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ಮಂಜು- ದಿವ್ಯಾ ಸುರೇಶ್‌ದು ಆಗಲ್ಲ, ಸಮಾನತೆ ಕಾಣಲ್ಲ : ಶಂಕರ್ ಅಶ್ವಥ್

BBK 8 Wild Card Entry: ಬಿಗ್​ಬಾಸ್​ಗೆ ಮತ್ತೊಂದು ವೈಲ್ಡ್​ ಕಾರ್ಡ್​ ಎಂಟ್ರಿ: ಆದ್ರೆ ಈ ನಟಿ ಮನೆಗೆ ಕಾಲಿಡುತ್ತಿದ್ದಂತೆ ಮಂಜು ನಾಪತ್ತೆ!

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More