ಸಂಬರಗಿ ನಡೆಸಿದ ದೊಡ್ಡ ಕುತಂತ್ರ ವಿಫಲ​; ಮನೆಯವರ ಎದುರು ಹೀರೋ ಆದ ರಘು!

ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ಒಟ್ಟಾಗಿ ಇರುವುದನ್ನು ನೋಡಿದ ಅನೇಕರು ಮನೆಯಲ್ಲಿ ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲಿ ಮೊದಲಿರೋದು ಪ್ರಶಾಂತ್ ಸಂಬರಗಿ.

ಸಂಬರಗಿ ನಡೆಸಿದ ದೊಡ್ಡ ಕುತಂತ್ರ ವಿಫಲ​; ಮನೆಯವರ ಎದುರು ಹೀರೋ ಆದ ರಘು!
ರಘು ಗೌಡ-ಪ್ರಶಾಂತ್ ಸಂಬರಗಿ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Apr 10, 2021 | 4:23 PM

ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್​ ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಕುತಂತ್ರಗಳನ್ನು ಹೆಣೆಯುತ್ತಿದ್ದಾರೆ. ಸ್ಟ್ರಾಂಗ್​ ಸ್ಪರ್ಧಿಗಳನ್ನು ಸೋಲಿಸೋಕೆ ಒಂದಾದಮೇಲೆ ಒಂದರಂತೆ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಆದರೆ, ಈ ರೀತಿ ಕುತಂತ್ರಗಳ ಬಗ್ಗೆ ಮನೆಯವರಿಗೆ ವಾಸನೆ ಸಿಕ್ಕಿದೆ. ಹೀಗಾಗಿ, ಎಲ್ಲಾ ಸ್ಪರ್ಧಿಗಳೂ ಎಚ್ಚೆತ್ತುಕೊಂಡಿದ್ದಾರೆ. ರಘು ಕೂಡ ಈ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆ. ಇದರಿಂದಲೇ, ಪ್ರಶಾಂತ್​ ಸಂಬರಗಿ ಮಾಡಿದ ದೊಡ್ಡ ಕುತಂತ್ರವೊಂದು ವಿಫಲವಾಗಿದೆ. ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ಒಟ್ಟಾಗಿ ಇರುವುದನ್ನು ನೋಡಿದ ಅನೇಕರು ಮನೆಯಲ್ಲಿ ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲಿ ಮೊದಲಿರೋದು ಪ್ರಶಾಂತ್ ಸಂಬರಗಿ. ಹೀಗಾಗಿ, ದಿವ್ಯಾ ಅವರನ್ನು ಮನೆಯಿಂದ ಹೊರಕ್ಕೆ ಕಳುಹಿಸಿ, ಮಂಜು ಅವರನ್ನು ವೀಕ್​ ಮಾಡಬೇಕು ಎನ್ನುವುದು ಸಂಬರಗಿ ಆಲೋಚನೆ. ಹೀಗಾಗಿ, ಈ ವಾರದ ಕಳಪೆ ಪ್ರದರ್ಶನವನ್ನು ದಿವ್ಯಾಗೆ ನೀಡಬೇಕು ಎಂದು ತಂತ್ರ ರೂಪಿಸಿದ್ದರು. ಸದಾ ಅವರ ಹಿಂದೆ ತಿರುಗುತ್ತಿರುವ ಶಮಂತ್​ ಅವರನ್ನು ಇದಕ್ಕಾಗಿ ಮುಂದೆ ಬಿಟ್ಟಿದ್ದರು.

ಶಮಂತ್ ಮೊದಲು ವಿಶ್ವ ಬಳಿ ಹೋಗಿ ದಿವ್ಯಾ ಅವರನ್ನು ಕಳಪೆ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದರು. ಇದಾದ ನಂತರ ಶಮಂತ್​ ತೆರಳಿದ್ದು ರಘು ಗೌಡ ಬಳಿ. ದಿವ್ಯಾ ನನಗೆ ಅವಮಾನ ಮಾಡಿದ್ದಾಳೆ. ಅವಳ ವಿರುದ್ಧ ದ್ವೇಷ ತೀರಿಸಿಕೊಳ್ಳಲೇಬೇಕು. ಹೀಗಾಗಿ, ನಾನು ಈ ವಾರ ಅವಳಿಗೆ ಕಳಪೆ ಪಟ್ಟ ಕಟ್ಟುತ್ತಿದ್ದೇನೆ. ನೀನು ಕೂಡ ಅವಳಿಗೆ ಕಳಪೆ ಪಟ್ಟ ಕಟ್ಟು ಎಂದು ಮನವಿ ಮಾಡಿದ್ದಾರೆ. ಇದಕ್ಕೆ ರಘು ನಗುತ್ತಲೇ ಓಕೆ ಎಂದಿದ್ದಾರೆ.

ರಘು ಅವರ ಮನವೊಲಿಸಿದ್ದೇನೆ ಎಂದು ಶಮಂತ್​ ಖುಷಿಯಾಗಿದ್ದರು. ಆದರೆ, ಅಚ್ಚರಿ ಎಂಬಂತೆ ರಘು ಹೆಸರು ತೆಗೆದುಕೊಂಡಿದ್ದು ಚಕ್ರವರ್ತಿ ಚಂದ್ರಚೂಡ್​ ಅವರದ್ದು. ದಿವ್ಯಾಗೆ ಒಂದೆರಡು ವೋಟ್​ ಹೆಚ್ಚು ಬಿದ್ದಿದ್ದರೂ ಅವರು ಕಳಪೆ ಪಟ್ಟ ಕಟ್ಟಿಕೊಂಡು ಜೈಲಿಗೆ ಹೋಗುತ್ತಿದ್ದರು. ಇದನ್ನು ರಘು ಗೌಡ ತಡೆದಿದ್ದಾರೆ. ಈ ಮೂಲಕ ಪ್ರಶಾಂತ್​ ತಂತ್ರವನ್ನು ರಘು ವಿಫಲ ಮಾಡಿದ್ದಾರೆ.

ಇದನ್ನೂ ಓದಿ: ಸಂಬರಗಿ ಎದುರು ಹಾಕ್ಕೊಂಡ ಮಂಜುಗೆ ಬಿಗ್​ಬಾಸ್​ ಮನೆಯಲ್ಲಿ ಇನ್ಮೇಲೆ ಕಷ್ಟಕಾಲ!

ಬಿಗ್​ ಬಾಸ್​ ಮನೆಯ ದೊಡ್ಡ ಹಗರಣವನ್ನು ಭೇದಿಸಿದ ಪ್ರಶಾಂತ್​ ಸಂಬರಗಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್