Kiccha Sudeep: ಏಪ್ರಿಲ್​ 15ಕ್ಕೆ ಕಿಚ್ಚ ಸುದೀಪ್​ ಕಡೆಯಿಂದ ಬಿಗ್​ ಸರ್ಪ್ರೈಸ್​! ಏನದು?

Vikrant Rona: ವಿಕ್ರಾಂತ್​ ರೋಣ ಚಿತ್ರವನ್ನು ಅನೂಪ್​ ಭಂಡಾರಿ ನಿರ್ದೇಶನ ಮಾಡುತ್ತಿದ್ದಾರೆ. ವಿಕ್ರಾಂತ್​ ರೋಣ ಆಗಿ ಕಿಚ್ಚ ಸುದೀಪ್​ ಕಾಣಿಸಿಕೊಂಡಿದ್ದಾರೆ.

Kiccha Sudeep: ಏಪ್ರಿಲ್​ 15ಕ್ಕೆ ಕಿಚ್ಚ ಸುದೀಪ್​ ಕಡೆಯಿಂದ ಬಿಗ್​ ಸರ್ಪ್ರೈಸ್​! ಏನದು?
ಸುದೀಪ್​
Follow us
ರಾಜೇಶ್ ದುಗ್ಗುಮನೆ
|

Updated on:Apr 10, 2021 | 5:06 PM

ದುಬೈಗೆ ತೆರಳಿ ಬುರ್ಜ್​ ಖಲೀಫಾ ಕಟ್ಟದ ಮೇಲೆ ವಿಕ್ರಾಂತ್ ರೋಣ ಸಿನಿಮಾ ಹೆಸರನ್ನು ಪ್ರದರ್ಶಿಸುವ ಮೂಲಕ ಕಿಚ್ಚ ಸುದೀಪ್​ ಆ್ಯಂಡ್​ ಟೀಂ ದೊಡ್ಡದಾಗಿ ಸಂಭ್ರಮಿಸಿತ್ತು. ಈಗ ವಿಕ್ರಾಂತ್​ ರೋಣ ಕಡೆಯಿಂದ ಸರ್​ಪ್ರೈಸ್​ ಸಿಗುತ್ತಿದೆ. ಅಂದಹಾಗೆ, ಈ ಸರ್​ಪ್ರೈಸ್​ಗಾಗಿ ನೀವು ಏಪ್ರಿಲ್​ 15ರವರೆಗೆ ಕಾಯಲೇಬೇಕು. ಸರ್​ಪ್ರೈಸ್​ ವಿಚಾರದ ಬಗ್ಗೆ ಕಿಚ್ಚ ಸುದೀಪ್​ ಇಂದು (ಏಪ್ರಿಲ್​ 10) ಟ್ವೀಟ್​ ಮಾಡಿದ್ದಾರೆ. ಏಪ್ರಿಲ್​ 15ರಂದು ಬೆಳಗ್ಗೆ 11:10ಕ್ಕೆ ಸರ್​ಪ್ರೈಸ್​ ಕಾದಿದೆ ಎಂದು ಟ್ವೀಟ್​ ಮಾಡಿದ್ದಾರೆ. ಸದ್ಯ ಈ ಟ್ವೀಟ್​ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಅಷ್ಟೇ ಅಲ್ಲ, ಈ ಸರ್​ಪ್ರೈಸ್​ ಏನು ಎನ್ನುವ ಕುತೂಹಲ ಕೂಡ ಅಭಿಮಾನಿಗಳಲ್ಲಿ ಕಾಡುತ್ತಿದೆ.

ವಿಕ್ರಾಂತ್​ ರೋಣ ಚಿತ್ರವನ್ನು ಅನೂಪ್​ ಭಂಡಾರಿ ನಿರ್ದೇಶನ ಮಾಡುತ್ತಿದ್ದಾರೆ. ವಿಕ್ರಾಂತ್​ ರೋಣ ಆಗಿ ಕಿಚ್ಚ ಸುದೀಪ್​ ಕಾಣಿಸಿಕೊಂಡಿದ್ದಾರೆ. ಈ ಮೊದಲು ಸಿನಿಮಾಗೆ ಪ್ಯಾಂಥಮ್​ ಎಂದು ಹೆಸರಿಡಲಾಗಿತ್ತು. ನಂತರ ಈ ಹೆಸರನ್ನು ವಿಕ್ರಾಂತ್​ ರೋಣ ಎಂದು ಮರು ನಾಮಕರಣ ಮಾಡಲಾಗಿತ್ತು. ಅಷ್ಟೇ ಅಲ್ಲ, ಈ ಟೈಟಲ್​ ಅನ್ನು ಬುರ್ಜ್​ ಖಲೀಫಾ ಮೇಲೆ ಅನಾವರಣ ಮಾಡಲಾಗಿತ್ತು ಅನ್ನೊದು ವಿಶೇಷ.

ಅಜನೀಶ್​ ಲೋಕನಾಥ್​ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ನಿರೂಪ್​ ಭಂಡಾರಿ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸದ್ಯ, ಈಗಾಗಲೇ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಹೀಗಾಗಿ, ಏಪ್ರಿಲ್​ 15ರಂದು ಸಿಗೋ ವಿಶೇಷ ಸರ್​ಪ್ರೈಸ್​ ಯಾವುದು ಎನ್ನುವುದರ ಮೇಲೆ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ: Lockdown: ಶೇ.50 ಆಸನ ಭರ್ತಿ ಆದೇಶಕ್ಕೆ ಸುದೀಪ್​ ಪ್ರತಿಕ್ರಿಯೆ! ಯುವರತ್ನ ಸಂಕಷ್ಟದ ಬಗ್ಗೆ ಕಿಚ್ಚ ಹೇಳಿದ್ದೇನು?

MI vs RCB: ನಮ್ಮ ಆರ್​ಸಿಬಿ ಗೆದ್ದರೆ ಕಿಚ್ಚ ಸುದೀಪ್​ ಹೀಗೆ ಮಾಡ್ತಾರಂತೆ!

Published On - 4:50 pm, Sat, 10 April 21