MI vs RCB: ನಮ್ಮ ಆರ್ಸಿಬಿ ಗೆದ್ದರೆ ಕಿಚ್ಚ ಸುದೀಪ್ ಹೀಗೆ ಮಾಡ್ತಾರಂತೆ!
Kichcha Sudeep: ಐಪಿಎಲ್ 14ನೇ ಸೀಸನ್ನ ಮೊದಲ ಪಂದ್ಯ ಇಂದು ಚೆನ್ನೈನಲ್ಲಿ ನಡೆಯುತ್ತಿದೆ. ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಆರ್ಸಿಬಿ ಎದುರಿಸಲಿದೆ.
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಿಚ್ಚ ಸುದೀಪ್ ಅವರ ಫೇವರಿಟ್ ತಂಡ. ಈ ಮೊದಲು ಅನೇಕ ಬಾರಿ ಅವರು ಮೈದಾನಕ್ಕೆ ತೆರಳಿ ಟೀಂ ಅನ್ನು ಬೆಂಬಲಿಸಿದ್ದಾರೆ. ಆರ್ಸಿಬಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲ ಪ್ರತಿ ಸೀಸನ್ಅಲ್ಲೂ ಸುದೀಪ್ ಆರ್ಸಿಬಿಗೆ ಆಲ್ ದಿ ಬೆಸ್ಟ್ ಹೇಳೋಕೆ ಮರೆಯುವುದಿಲ್ಲ. ಈ ಬಾರಿ ಸುದೀಪ್ ಗುಡ್ ಲಕ್ ಹೇಳೋದು ಮಾತ್ರವಲ್ಲ ವಿಶೇಷವಾಗಿ ಆರ್ಸಿಬಿ ಬಗ್ಗೆ ಮಾತನಾಡಿದ್ದಾರೆ. ಇಂದು (ಏ.9) ಸಂಜೆ ಆರು ಗಂಟೆಗೆ ಸುದೀಪ್ ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ಪ್ರಸಾರವಾಗುವ ByjusCricketLive ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುದೀಪ್ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.
ಸಖತ್ ಮನರಂಜನೆಯ #VIVOIPL 14 ನೇ ಸೀಸನ್ ರಂಗನ್ನ ಹೆಚ್ಚಿಸೋಕೆ ಸ್ಟಾರ್ ಸ್ಫೋರ್ಟ್ಸ್ 1 ಕನ್ನಡಕ್ಕೆ ಬರ್ತಿದ್ದಾರೆ ನಿಮ್ಮ ನೆಚ್ಚಿನ ಅಭಿನಯ ಚಕ್ರವರ್ತಿ @KicchaSudeep ??
ಕೋಟಿಗೊಬ್ಬ ವಿಕ್ರಾಂತ್ ರೋಣ ಅವರ ಎಕ್ಸ್ ಕ್ಲೂಸಿವ್ ಸ್ಪೆಷಲ್ ಟಾಕ್ ⚡
?ತಪ್ಪದೇ ವೀಕ್ಷಿಸಿ #ByjusCricketLive ?️ನಾಳೆ ಸಂಜೆ 6 ಗಂಟೆಗೆ pic.twitter.com/T0eQBDrZhF
— Star Sports Kannada (@StarSportsKan) April 8, 2021
ಸ್ಟಾರ್ ಸ್ಪೋರ್ಟ್ಸ್ ಕನ್ನಡ ಇಂದು ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೊದಲ್ಲಿ ಸುದೀಪ್ ಮಾತನಾಡಿದ್ದಾರೆ. ಆರ್ಸಿಬಿ ಗೆಲ್ಲಲಿ, ಸೋಲಲಿ ನಾವು ಆ ತಂಡದ ಜತೆಗಿದ್ದೇವೆ. ಯಾವುಗಲೂ ಇರುತ್ತೇವೆ. ಆರ್ಸಿಬಿಗೆ ಇದಕ್ಕಿಂತ ಪಾಸಿಟಿವ್ ವಿಚಾರ ಮತ್ತೊಂದು ಬೇಕಿಲ್ಲ. ಆರ್ಸಿಬಿ ಸೋತರೂ ನಮ್ ಟೀಮ್, ಗೆದ್ದರೂ ನಮ್ಮ ಟೀಮ್. ಈಗ ಶರ್ಟ್ಗೆ ಕಾಲರ್ ಇಲ್ಲ. ನಮ್ಮ ಟೀಂ ಗೆದ್ದರೆ, ಕಾಲರ್ ಹಾಕಿಕೊಂಡು ಓಡಾಡುತ್ತೇವೆ ಎಂದಿದ್ದಾರೆ ಸುದೀಪ್.
ಟ್ರೋಫಿ ಗೆಲುವಿನ ಕಿಚ್ಚಿನಲ್ಲಿರುವ RCB ಬಗ್ಗೆ ನಮ್ಮ ಕಿಚ್ಚ ಏನಂದ್ರು..?
ಸೋಲೋದು… ಗೆಲ್ಲೋದು ಎಲ್ಲಾ ಆಮೇಲೆ.. ಫ್ಯಾನ್ಸ್ ನೀಡೋ ಬೆಂಬಲವೇ @RCBTweets ಪಾಸಿಟಿವ್ ಎನರ್ಜಿ.?
ನಿರೂಪಕಿ @MCReenaDsouza ಜೊತೆ, ನಮ್ಮೂರ ಟೀಮ್ ಬಗ್ಗೆ ಅಭಿನಯ ಚಕ್ರವರ್ತಿ @KicchaSudeep ಮನದಾಳದ ಮಾತು? pic.twitter.com/F8F7Nh5QOv
— Star Sports Kannada (@StarSportsKan) April 9, 2021
ಇತ್ತೀಚೆಗೆ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಆರ್ಸಿಬಿಗೆ ಶುಭಕೋರಿದ್ದರು. ಬಿಗ್ ಬಾಸ್ ಮನೆಯ ಕಡೆಯಿಂದ, ಬಿಗ್ ಬಾಸ್ ಸ್ಪರ್ಧಿಗಳ ಪರವಾಗಿ, ಬಿಗ್ ಬಾಸ್ ತಂತ್ರಜ್ಞರ ಪರವಾಗಿ ಸುದೀಪ್ ಆರ್ಸಿಬಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ ಎಂದಿದ್ದರು. ಕಿಚ್ಚ ಸುದೀಪ್ ಕ್ರಿಕೆಟ್ ಪ್ರಿಯರು. ಸ್ಯಾಂಡಲ್ವುಡ್ನಲ್ಲಿ ಕ್ರಿಕೆಟ್ ಮ್ಯಾಚ್ ನಡೆಸೋಕೆ ಇವರದೇ ನೇತೃತ್ವ. ಹೀಗಾಗಿ, ಇವರಿಗೆ ಕ್ರಿಕೆಟ್ ಮೇಲೆ ಹೆಚ್ಚು ಆಸಕ್ತಿ ಇದೆ.
ಐಪಿಎಲ್ 14ನೇ ಸೀಸನ್ನ ಮೊದಲ ಪಂದ್ಯ ಇಂದು ಚೆನ್ನೈನಲ್ಲಿ ನಡೆಯುತ್ತಿದೆ. ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಆರ್ಸಿಬಿ ಎದುರಿಸಲಿದೆ. ಈಗಾಗಲೇ ಅಭಿಮಾನಿಗಳು ಮ್ಯಾಚ್ ನೋಡೋಕೆ ಕುತೂಹಲದಿಂದ ಕಾದಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ವೇದಿಕೆ ಮೇಲೆ ಆರ್ಸಿಬಿಗೆ ಆಲ್ ದಿ ಬೆಸ್ಟ್ ಅಂದ್ರು ಸುದೀಪ್!
Published On - 3:50 pm, Fri, 9 April 21