ಬಿಗ್​ ಬಾಸ್​ ಮನೆಯ ದೊಡ್ಡ ಹಗರಣವನ್ನು ಭೇದಿಸಿದ ಪ್ರಶಾಂತ್​ ಸಂಬರಗಿ

ಬಿಗ್​ ಬಾಸ್​ ಸದಸ್ಯರು ಮನೆಯಲ್ಲಿ ಏನೆಲ್ಲ ಮಾಡುತ್ತಾರೆ ಎಂಬುದು ವೀಕ್ಷಕರಿಗೆ ಗೊತ್ತಾಗುತ್ತದೆ. ಮನೆಯ ಸದಸ್ಯರು ಏನು ಮಾತನಾಡುತ್ತಾರೆ, ಯಾರ ಜತೆ ಇರುತ್ತಾರೆ ಎಂಬುದರ ಮೇಲೆ ಮನೆಯ ಕ್ಯಾಮೆರಾಗಳು ಕಣ್ಣಿಟ್ಟಿರುತ್ತವೆ.

ಬಿಗ್​ ಬಾಸ್​ ಮನೆಯ ದೊಡ್ಡ ಹಗರಣವನ್ನು ಭೇದಿಸಿದ ಪ್ರಶಾಂತ್​ ಸಂಬರಗಿ
ಪ್ರಶಾಂತ್​ ಸಂಬರಗಿ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Apr 10, 2021 | 7:22 AM

ಕೆಲ ಪಕ್ಷಗಳು ಅಧಿಕಾರಕ್ಕೆ ಬಂದ ನಂತರದಲ್ಲಿ ಸಾಕಷ್ಟು ಹಗರಣಗಳನ್ನು ಮಾಡುತ್ತವೆ. ಹಲವು ವರ್ಷಗಳ ನಂತರ ಅದು ಹೊರಗೆ ಬರುತ್ತವೆ. ಆದರೆ, ಬಿಗ್​ ಬಾಸ್ ಮನೆಯಲ್ಲಿ ಹಗರಣ ಮಾಡೋದು ಎಂದರೆ? ಅಂಥ ಹಗರಣವೊಂದು ಈ ಬಾರಿ ನಡೆದಿದೆ. ಪ್ರಶಾಂತ್​ ಸಂಬರಗಿ ಇದನ್ನು ಭೇದಿಸಿದ್ದಾರೆ. ಬಿಗ್​ ಬಾಸ್​ ಸದಸ್ಯರು ಮನೆಯಲ್ಲಿ ಏನೆಲ್ಲ ಮಾಡುತ್ತಾರೆ ಎಂಬುದು ವೀಕ್ಷಕರಿಗೆ ಗೊತ್ತಾಗುತ್ತದೆ. ಮನೆಯ ಸದಸ್ಯರು ಏನು ಮಾತನಾಡುತ್ತಾರೆ, ಯಾರ ಜತೆ ಇರುತ್ತಾರೆ ಎಂಬುದರ ಮೇಲೆ ಮನೆಯ ಕ್ಯಾಮೆರಾಗಳು ಕಣ್ಣಿಟ್ಟಿರುತ್ತವೆ. ಹೀಗಾಗಿ, ಯಾರೂ ಕದ್ದು-ಮುಚ್ಚಿ ಏನನ್ನೂ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಮನೆಯಲ್ಲಿ ಹಗರಣ ನಡೆಯೋದು ಅಂದರೆ?

ಈ ಬಾರಿ ಮನೆಯಲ್ಲಿ ನಡೆದಿರೋದು ಅಡುಗೆ ಮನೆಗೆ ಸಂಬಂಧಿಸಿದ ಹಗರಣ. ಈ ಹಗರಣ ನಡೆದಿರೋದು ಕಾಫಿ ವಿಭಾಗದಲ್ಲಿ. ಮನೆಯಲ್ಲಿ ಸಾಕಷ್ಟು ಮಂದಿ ಕಾಫಿ ಪ್ರಿಯರಿದ್ದಾರೆ. ಪ್ರಶಾಂತ್​, ಅರವಿಂದ್, ನಿಧಿ ಸುಬ್ಬಯ್ಯ ಆಗಾಗ ಕಾಫಿ ಹೀರುತ್ತಲೇ ಇರುತ್ತಾರೆ. ಹೀಗಾಗಿ, ಕಾಫಿ ಪೌಡರ್​ಗೆ ಎಲ್ಲಿಲ್ಲದ ಬೇಡಿಕೆ. ಹೀಗಾಗಿ, ಮನೆಯ ಸದಸ್ಯರು ಕಾಫಿ ಪೌಡರ್​ ಬಚ್ಚಿಡುತ್ತಿದ್ದಾರೆ.

ಈ ಬಾರಿ ಕ್ಯಾಪ್ಟನ್​ ಆಗಿರುವ ಪ್ರಶಾಂತ್ ಸಂಬರಗಿ ಗಮನಕ್ಕೆ ಈ ವಿಚಾರ ಬಂದಿದೆ. ಅವರು ಬಚ್ಚಿಟ್ಟಿದ್ದ ಕಾಫಿ ಪುಡಿ ಕೈಗೆತ್ತಿಕೊಂಡು ಇದೊಂದು ದೊಡ್ಡ ಹಗರಣ ಎಂದಿದ್ದಾರೆ. ಕಾಫಿ ಪೌಡರ್​​ಅನ್ನು ಹೇಗೆ ಮುಚ್ಚಿಡುತ್ತಾರೆ? ಊಟ ಮಾತ್ರ ಎಲ್ಲರಿಗೂ ಸಮವಾಗಿ ಸಿಗಬೇಕು ಎಂದು ಹೇಳಿದ್ದಾರೆ.

ಇನ್ನು ಶಮಂತ್​ ಕೂಡ ಬಿಗ್​ ಬಾಸ್​ ಮನೆಯಲ್ಲಿ ಕಾಫಿ ಪೌಡರ್​​ ಬಚ್ಚಿಟ್ಟಿದ್ದರು. ಈ ವಿಚಾರದಲ್ಲಿ ಪ್ರಶಾಂತ್​ ಸೈಲೆಂಟ್​ ಆಗಿದ್ದರು. ಹೀಗೇಕೆ ಮಾತನಾಡುತ್ತಿದ್ದಾರೆ ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಪ್ರಶಾಂತ್​ ಸಂಬರಗಿ ವೀಕ್​ನೆಸ್​ ಮನೆಯವರಿಗೆ ಗೊತ್ತಾಗಿಹೋಯ್ತು; ಇನ್ನು ಎಲ್ಲವೂ ಸುಲಭ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್