AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಶಾಂತ್​ ಸಂಬರಗಿ ವೀಕ್​ನೆಸ್​ ಮನೆಯವರಿಗೆ ಗೊತ್ತಾಗಿಹೋಯ್ತು; ಇನ್ನು ಎಲ್ಲವೂ ಸುಲಭ

ಬಿಗ್​ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳಿಗೂ ಪ್ರಶಾಂತ್​ ಮೇಲೆ ಅಸಮಾಧಾನವಿದೆ. ಹೀಗಾಗಿಯೇ, ಅವರಿಂದ ಆದಷ್ಟು ದೂರ ಇರೋಕೆ ಇಷ್ಟಪಡುತ್ತಾರೆ. ಮಾಡಿದ್ದು ತಪ್ಪು ಎಂದು ಯಾರಾದರೂ ಎತ್ತಿ ತೋರಿಸಿದರೆ, ಅವರಿಗೆ ಸಿಟ್ಟು ಬಂದು ಬಿಡುತ್ತದೆ. ಆದರೆ, ಮನೆಯಲ್ಲಿ ಅವರು ಸ್ಟ್ರಾಂಗ್​ ಸ್ಪರ್ಧಿ ಆಗಿದ್ದರಿಂದಲೇ ಪ್ರತಿ ಬಾರಿಯೂ ಎಲಿಮಿನೇಷನ್​ಗೆ ನಾಮಿನೇಟ್​ ಆದರೂ ಬಚಾವ್​ ಆಗುತ್ತಿದ್ದಾರೆ.

ಪ್ರಶಾಂತ್​ ಸಂಬರಗಿ ವೀಕ್​ನೆಸ್​ ಮನೆಯವರಿಗೆ ಗೊತ್ತಾಗಿಹೋಯ್ತು; ಇನ್ನು ಎಲ್ಲವೂ ಸುಲಭ
ಪ್ರಶಾಂತ್​ ಸಂಬರಗಿ
ರಾಜೇಶ್ ದುಗ್ಗುಮನೆ
| Edited By: |

Updated on: Apr 08, 2021 | 7:26 AM

Share

ಪ್ರಶಾಂತ್​ ಸಂಬರಗಿ ಬಿಗ್​ ಬಾಸ್​ ಮನೆ ಸೇರಿರುವ ಸ್ಟ್ರಾಂಗ್​ ಕಂಟೆಸ್ಟಂಟ್​​​​ಗಳಲ್ಲಿ ಒಬ್ಬರು. ಮಾತಿಗೆ ನಿಂತರೆ ಅವರನ್ನು ಸೋಲಿಸೋದು ಅಷ್ಟು ಸುಲಭ ಅಲ್ಲವೇ ಅಲ್ಲ. ಅವರು ಜಗಳವಾಡೋಕೆ ಇಳಿದರಂತೂ ಮುಗಿದೇ ಹೋಯಿತು. ಅವರ ಎದುರು ನಿಲ್ಲೋಕೆ ಎಲ್ಲರೂ ಭಯ ಪಡುತ್ತಾರೆ. ಆದರೆ, ಈಗ ಪ್ರಶಾಂತ್​ ಸಂಬರಗಿ ವೀಕ್​ನೆಸ್​ ಮನೆ ಮಂದಿಗೆಲ್ಲ ಗೊತ್ತಾಗಿದೆ. ಇನ್ನು ಮುಂದಿನ ಆಟಗಳೆಲ್ಲವೂ ತುಂಬಾನೇ ಸುಲಭ ಎಂದು ಮನೆ ಮಂದಿ ಖುಷಿಯಾಗಿದ್ದಾರೆ. ಬಿಗ್​ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳಿಗೂ ಪ್ರಶಾಂತ್​ ಮೇಲೆ ಅಸಮಾಧಾನವಿದೆ. ಹೀಗಾಗಿಯೇ, ಅವರಿಂದ ಆದಷ್ಟು ದೂರ ಇರೋಕೆ ಇಷ್ಟಪಡುತ್ತಾರೆ. ಮಾಡಿದ್ದು ತಪ್ಪು ಎಂದು ಯಾರಾದರೂ ಎತ್ತಿ ತೋರಿಸಿದರೆ, ಅವರಿಗೆ ಸಿಟ್ಟು ಬಂದು ಬಿಡುತ್ತದೆ. ಮನೆಯಲ್ಲಿ ಅವರು ಸ್ಟ್ರಾಂಗ್​ ಸ್ಪರ್ಧಿ ಆಗಿದ್ದರಿಂದಲೇ ಪ್ರತಿ ಬಾರಿಯೂ ಎಲಿಮಿನೇಷನ್​ಗೆ ನಾಮಿನೇಟ್​ ಆದರೂ ಬಚಾವ್​ ಆಗುತ್ತಿದ್ದಾರೆ. ಆದರೆ, ಪ್ರತಿ ವ್ಯಕ್ತಿಗೂ ಒಂದು ಮೈನಸ್​ ಪಾಯಿಂಟ್​ ಅನ್ನೋದು ಇದ್ದೇ ಇರುತ್ತದೆ. ಇದಕ್ಕೆ ಪ್ರಶಾಂತ್​ ಕೂಡ ಹೊರತಾಗಿಲ್ಲ.

ಪ್ರಶಾಂತ್​ ಸಂಬರಗಿ ಯಾವುದೇ ಟಾಸ್ಕ್​ ನೀಡಲಿ ಅದನ್ನು ಸರಿಯಾಗಿ ಆಡಿದ ಉದಾಹರಣೆ ತುಂಬಾನೇ ಕಡಿಮೆ. ಇದು ಮನೆ ಮಂದಿಗೆಲ್ಲ ಗೊತ್ತಾಗಿದೆ. ಕೆಲ ವಾರಗಳ ಹಿಂದೆ ಟಾಸ್ಕ್​ ಒಂದರಲ್ಲಿ ರಘು ಗೌಡ ತಪ್ಪು ಮಾಡಿದಾಗ ಅದನ್ನು ಹೀಯಾಳಿಸಿ ನಕ್ಕಿದ್ದರು. ಆದರೆ, ಅಲ್ಲಿ ಅವರೇ ಟಾಸ್ಕ್​ ಮಾಡುವಾಗ ಎಡವಿದ್ದರು.

ಏಪ್ರಿಲ್​​ 7 ರ ಸಂಚಿಕೆಯಲ್ಲೂ ಇದೇ ರೀತಿ ಆಗಿದೆ. ಪ್ರಶಾಂತ್​ ಗೇಮ್​ ಆಡುವಾಗ ಕಳಪೆ ಪ್ರದರ್ಶನ ನೀಡಿದ್ದಾರೆ. ಇದನ್ನು ಪ್ರಶಾಂತ್​ ಕೂಡ ಒಪ್ಪಿಕೊಂಡಿದ್ದಾರೆ. ನಾನು ಕಳಪೆಯಾಗಿ ಆಟವಾಡಿದ್ದೇನೆ. ಇದಕ್ಕೆ ಕ್ಷಮೆಯಾಚಿಸುತ್ತೇನೆ ಎಂದರು. ಮನೆ ಮಂದಿ ಕೂಡ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಪ್ರಶಾಂತ್​ ವೈಯಕ್ತಿಕವಾಗಿ ಟಾಸ್ಕ್​ ಅನ್ನು ಸರಿಯಾಗಿ ನಿಭಾಯಿಸುವುದಿಲ್ಲ. ಅವರು ಗುಂಪಿನಲ್ಲಿದ್ದಾಗ ಮಾತ್ರ ಹುಲಿ ಎಂದು ಹೀಯಾಳಿಸಿದರು.

ಇಷ್ಟು ದಿನ ಮನೆಯಲ್ಲಿರುವ ಪ್ರಶಾಂತ್​ ಅವರ ಮೈನಸ್​ ಪಾಯಿಂಟ್​ಗಳು ಏನು ಎನ್ನುವುದು ಅನೇಕರಿಗೆ ಗೊತ್ತೇ ಇರಲಿಲ್ಲ. ಈಗ ಈ ವಿಚಾರ ತಿಳಿದು ಮನೆ ಮಂದಿಗೆ ಒಂದು ಅಸ್ತ್ರ ಸಿಕ್ಕಂತಾಗಿದೆ.

ಇದನ್ನೂ ಓದಿ: Bigg Boss Kannada: ಕಳ್ಳ​ ನನ್ಮಗ ಎಂದು ಪ್ರಶಾಂತ್​ಗೆ ಬೈಯ್ದ ನಿಧಿ! ಅಚ್ಚರಿ ಹುಟ್ಟಿಸಿದ ಸಂಬರಗಿ ಪ್ರತಿಕ್ರಿಯೆ

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?