Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರೀನಾ ತೊಟ್ಟ ಮಾಸ್ಕ್​ ಬೆಲೆ ಇಷ್ಟೊಂದಾ? ಐಟಿ ಮಂದಿಯ ವೇತನವೂ ಇಷ್ಟಿರಲ್ಲ ಎಂದ ಫ್ಯಾನ್ಸ್​​

ಕೊರೊನಾ ವೈರಸ್​ ಎರಡನೇ ಅಲೆಯ ಅಬ್ಬರ ಹೆಚ್ಚುತ್ತಿದೆ. ಹೀಗಾಗಿ, ಎಲ್ಲಾ ಸೆಲೆಬ್ರಿಟಿಗಳು ಮಾಸ್ಕ್​ ಧರಿಸಿ, ಕೊರೊನಾ ವೈರಸ್​​ ಹರಡುವಿಕೆ ಕಡಿಮೆ ಮಾಡಲು ಕೋರುತ್ತಿದ್ದಾರೆ.

ಕರೀನಾ ತೊಟ್ಟ ಮಾಸ್ಕ್​ ಬೆಲೆ ಇಷ್ಟೊಂದಾ? ಐಟಿ ಮಂದಿಯ ವೇತನವೂ ಇಷ್ಟಿರಲ್ಲ ಎಂದ ಫ್ಯಾನ್ಸ್​​
Follow us
ರಾಜೇಶ್ ದುಗ್ಗುಮನೆ
|

Updated on: Apr 07, 2021 | 10:11 PM

ಉಡುಗೆ ವಿಚಾರದಲ್ಲಿ ಕರೀನಾ ಕಪೂರ್​ ಪದೇ ಪದೇ ಸುದ್ದಿಯಾಗುತ್ತಲೇ ಇರುತ್ತಾರೆ. ಅವರು ತೊಡುವ ದುಬಾರಿ ಬೆಲೆಯ ಸೀರೆ, ಜಿಮ್​ ಉಡುಗೆ, ಅವರ ಬಳಿ ಇರುವ ಬ್ಯಾಗ್​ ಎಲ್ಲರ ಕಣ್ಣು ಕುಕ್ಕುತ್ತದೆ. ಈಗ ಕರೀನಾ ಕಪೂರ್​ ತೊಟ್ಟ ಮಾಸ್ಕ್ ಒಂದು ಗಮನ ಸೆಳೆದಿದೆ. ಏಕೆಂದರೆ, ಈ ಮಾಸ್ಕ್​ನ ಬೆಲೆ ಅಷ್ಟಿದೆ. ಇದನ್ನು ಫ್ಯಾನ್ಸ್​ ನೋಡಿ ಅಚ್ಚರಿಗೊಂಡಿದ್ದಾರೆ. ಕೊರೊನಾ ವೈರಸ್​ ಎರಡನೇ ಅಲೆಯ ಅಬ್ಬರ ಹೆಚ್ಚುತ್ತಿದೆ. ಹೀಗಾಗಿ, ಎಲ್ಲಾ ಸೆಲೆಬ್ರಿಟಿಗಳು ಮಾಸ್ಕ್​ ಧರಿಸಿ, ಕೊರೊನಾ ವೈರಸ್​​ ಹರಡುವಿಕೆ ಕಡಿಮೆ ಮಾಡಲು ಕೋರುತ್ತಿದ್ದಾರೆ. ಇದಕ್ಕೆ ಕರೀನಾ ಕಪೂರ್​ ಕೂಡ ಹೊರತಾಗಿಲ್ಲ. ಅವರು ಮಾಸ್ಕ್​ ಧರಿಸಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮಾಸ್ಕ್​ ಧರಿಸಿಯೇ ಮನೆಯಿಂದ ಹೊರ ಹೋಗುವಂತೆ ಮನವಿ ಮಾಡಿದ್ದಾರೆ.

ಕೆಲ ಆಂಗ್ಲ ಮಾಧ್ಯಮಗಳ ಪ್ರಕಾರ ಅವರು ಧರಿಸಿದ ಮಾಸ್ಕ್​ Louis Vuitton ಕಂಪೆನಿಯದ್ದು. ಹೀಗಾಗಿ, ಮಾಸ್ಕ್​ ಮೇಲೆ ‘LV’ ಸಿಂಬೋಲ್​ ಇದೆ. ಈ ಮಾಸ್ಕ್​ನ ಬೆಲೆ 355 ಡಾಲರ್​. ಅಂದರೆ, ರೂಪಾಯಿಗೆ ಕನ್ವರ್ಟ್​ ಮಾಡಿದರೆ ಇದರ ಬೆಲೆ 25,994 ರೂಪಾಯಿ ಆಗಲಿದೆ. ಇದನ್ನೂ ನೋಡಿದ ಫ್ಯಾನ್ಸ್​ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲ ಐಟಿ ಉದ್ಯೋಗಿಗಳಿಗೂ ತಿಂಗಳ ವೇತನ ಇಷ್ಟಿರಲ್ಲ ಎಂದು ನಗೆ ಚಟಾಕಿ ಹಾರಿಸಿದ್ದಾರೆ.

ಅಂದಹಾಗೆ, ಈ ಮಾಸ್ಕ್​ ಧರಿಸಿದ್ದು ಕರೀನಾ ಕಪೂರ್​ ಮಾತ್ರವಲ್ಲ. ದೀಪಿಕಾ ಪಡುಕೋಣೆ, ರಣಬೀರ್​ ಕಪೂರ್​ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ಇದೇ ಮಾಸ್ಕ್​ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಕರೀನಾ ಕಪೂರ್​ ಈ ಮೊದಲು ಜಿಮ್​ ಸ್ಯೂಟ್​ನಲ್ಲಿ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರ ಜಿಮ್​ ಸ್ಯೂಟ್​ ಬ್ರ್ಯಾಂಡ್​ ಸಾಕಷ್ಟು ಚರ್ಚೆ ಆಗಿತ್ತು. ಇನ್ನು, ಬಾಲಿವುಡ್​ನಲ್ಲಿ ಅನೇಕರಿಗೆ ಕೊರೊನಾ ಅಂಟಿಕೊಳ್ಳುತ್ತಿದೆ. ಅಕ್ಷಯ್​ ಕುಮಾರ್​, ಆಲಿಯಾ ಭಟ್​ ಸೇರಿ ಸಾಕಷ್ಟು ಜನರಿಗೆ ಕೊರೊನಾ ವೈರಸ್​ ಅಂಟಿದೆ.

ಇದನ್ನೂ ಓದಿ: ಎರಡನೇ ಮಗು ಜನನದ ಬಳಿಕ ಮೊದಲ ಬಾರಿಗೆ ಫೋಟೋ ಹಂಚಿಕೊಂಡ ಕರೀನಾ ಕಪೂರ್; ಏನು ಹೇಳಿದ್ದಾರೆ?

ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ