Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಬರಗಿ ಎದುರು ಹಾಕ್ಕೊಂಡ ಮಂಜುಗೆ ಬಿಗ್​ಬಾಸ್​ ಮನೆಯಲ್ಲಿ ಇನ್ಮೇಲೆ ಕಷ್ಟಕಾಲ!

Bigg Boss Kannada : ಹೇಗಾದರೂ ಮಾಡಿ ಮಂಜು ಪಾವಗಡ ಅವರನ್ನು ಮನೆಗೆ ಕಳಿಸಬೇಕು ಎಂದು ಪ್ರಶಾಂತ್ ಸಂಬರಗಿ ಪ್ಲ್ಯಾನ್ ಮಾಡುತ್ತಾ ಬಂದಿದ್ದರು. ಅವರಿಗೆ ಚಕ್ರವರ್ತಿ ಚಂದ್ರಚೂಡ್ ಸಹ ಸಾಥ್ ನೀಡುತ್ತಿದ್ದಾರೆ. ಈಗ ಪ್ರಶಾಂತ್ ಸಂಬರಗಿ ಕ್ಯಾಪ್ಟನ್ ಆಗಿದ್ದಾರೆ.

ಸಂಬರಗಿ ಎದುರು ಹಾಕ್ಕೊಂಡ ಮಂಜುಗೆ ಬಿಗ್​ಬಾಸ್​ ಮನೆಯಲ್ಲಿ ಇನ್ಮೇಲೆ ಕಷ್ಟಕಾಲ!
ಮಂಜು ಪಾವಗಡ - ಪ್ರಶಾಂತ್​ ಸಂಬರಗಿ
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Apr 09, 2021 | 3:47 PM

ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಗಳ ನಡುವಿನ ಹಣಾಹಣಿ ಜೋರಾಗಿದೆ. ಪ್ರತಿದಿನವೂ ಮನೆಯ ಸದಸ್ಯರಿಗೆ ಬಿಗ್ ಬಾಸ್ ಹೊಸ ಹೊಸ ಟ್ವಿಸ್ಟ್ ನೀಡುತ್ತಿದ್ದಾರೆ. ಅದನ್ನೆಲ್ಲ ಎದುರಿಸಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದು ಎಲ್ಲಾ ಸ್ಪರ್ಧಿಗಳಿಗೆ ಸವಾಲಿನ ಕೆಲಸ ಆಗಿದೆ. ಅಷ್ಟೇ ಅಲ್ಲದೆ ಆಗಾಗ ಎದುರಾಗುವ ಕಿರಿಕ್​ಗಳನ್ನೂ ಬಗೆಹರಿಸಿಕೊಂಡು ಮುನ್ನುಗ್ಗಬೇಕಿದೆ. ಟಾಸ್ಕ್​​ಗಳಲ್ಲಿ ಮೇಲುಗೈ ಸಾಧಿಸುತ್ತ ಬಂದಿರುವ ಮಂಜುಗೆ ಈಗ ಒಂದು ಹೊಸ ಸಂಕಷ್ಟ ಎದುರಾಗಿದೆ.

ಮೊದಲ ವಾರದಿಂದಲೂ ಹೆಚ್ಚು ಗಮನ ಸೆಳೆದ ಸ್ಪರ್ಧಿ ಎಂದರೆ ಅದು ಮಂಜು ಪಾವಗಡ. ಅವರಿಗೆ ಸರಿಸಮನಾಗಿ ಪೈಪೋಟಿ ನೀಡಲು ಪ್ರಯತ್ನಿಸುತ್ತಿದ್ದಾರೆ ಪ್ರಶಾಂತ್ ಸಂಬರಗಿ. ಆದರೆ ಇಬ್ಬರ ಹಾದಿ ಬೇರೆ ಬೇರೆ. ಮಂಜು ಕಾಮಿಡಿ ಮೂಲಕ ಗುರುತಿಸಿಕೊಂಡರೆ, ಪ್ರಶಾಂತ್ ವಿವಾದದ ಮೂಲಕವೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಹಾಗಾಗಿ ಮಂಜು ಮತ್ತು ಪ್ರಶಾಂತ್ ನಡುವೆ ಆಗಾಗ ಕ್ಲ್ಯಾಶ್ ಆಗುತ್ತಲೇ ಇರುತ್ತದೆ.

ಹೇಗಾದರೂ ಮಾಡಿ ಮಂಜು ಪಾವಗಡ ಅವರನ್ನು ಮನೆಗೆ ಕಳಿಸಬೇಕು ಎಂದು ಪ್ರಶಾಂತ್ ಸಂಬರಗಿ ಪ್ಲ್ಯಾನ್ ಮಾಡುತ್ತಾ ಬಂದಿದ್ದರು. ಅವರಿಗೆ ಚಕ್ರವರ್ತಿ ಚಂದ್ರಚೂಡ್ ಸಹ ಸಾಥ್ ನೀಡುತ್ತಿದ್ದಾರೆ. ಈಗ ಪ್ರಶಾಂತ್ ಸಂಬರಗಿ ಕ್ಯಾಪ್ಟನ್ ಆಗಿದ್ದಾರೆ. ಹಾಗಾಗಿ ಅವರ ಕೈಯಲ್ಲಿ ಕೆಲವು ವಿಶೇಷ ಅಧಿಕಾರಗಳು ಇವೆ. ಒಂದುವೇಳೆ ಬಿಗ್ ಬಾಸ್ ಏನಾದರೂ ಅವಕಾಶ ನೀಡಿದರೆ ಮಂಜು ಅವರನ್ನು ಪ್ರಶಾಂತ್ ನೇರವಾಗಿ ನಾಮಿನೇಟ್ ಮಾಡಬಹುದು.

ಟಾಸ್ಕ್​ಗಳಲ್ಲೂ ಮಂಜುಗೆ ಕಷ್ಟ ನೀಡಬಹುದು. ಕ್ಯಾಪ್ಟನ್ ಯಾವ ಕೆಲಸ ವಹಿಸುತ್ತಾರೋ ಆ ಕೆಲಸವನ್ನು ಮನೆಯ ಸದಸ್ಯರು ಮಾಡಬೇಕು. ಮಂಜುಗೆ ಇಷ್ಟವಿಲ್ಲದ ಕೆಲಸವನ್ನೇ ಪ್ರಶಾಂತ್ ನೀಡಬಹುದು. ಹಾಗಾಗಿ ಈ ಎಲ್ಲ ಆಯಾಮಗಳಲ್ಲೂ ಮಂಜುಗೆ ಇನ್ಮುಂದೆ ಕಷ್ಟಕಾಲ ಶುರುವಾಗುವುದರಲ್ಲಿ ಅನುಮಾನವಿಲ್ಲ. ಈ ವಿಚಾರದಲ್ಲಿ ಪ್ರಶಾಂತ್​​ಗೆ ಸೂಕ್ತ ಸಲಹೆ ಕೊಡಲು ಚಕ್ರವರ್ತಿ ಚಂದ್ರಚೂಡ್ ಕೂಡ ಇದ್ದಾರೆ.

ಹಲವು ದಿನಗಳಿಂದ ಮಂಜು ವ್ಯಕ್ತಿತ್ವವನ್ನು ಅಧ್ಯಯನ ಮಾಡಿರುವ ಪ್ರಶಾಂತ್ ಮತ್ತು ಚಂದ್ರಚೂಡ್ ಈ ಬಾರ ತಮ್ಮ ಅಸಲಿ ವರಸೆ ತೋರಿಸುವ ನಿರೀಕ್ಷೆ ಇದೆ. ಅದರ ಮೊದಲ ಹಂತವಾಗಿ ಮಂಜುಗೆ ಪ್ರಶಾಂತ್ ಒಂದು ಸೂಚನೆ ನೀಡಿದ್ದಾರೆ. ಇಷ್ಟು ದಿನ ಸಲುಗೆಯಿಂದ ಪ್ರಶಾಂತ್​​ಗೆ ಮಂಜು ಮಾವ ಎನ್ನುತ್ತಿದ್ದರು. ಇನ್ಮುಂದೆ ಹಾಗೆ ಕರೆಯಬೇಡ ಎಂದು ಪ್ರಶಾಂತ್ ವಾರ್ನಿಂಗ್ ನೀಡಿದ್ದಾರೆ. ಮುಂದೆ ಏನೆಲ್ಲ ಕಾದಿದಿಯೋ ಗೊತ್ತಿಲ್ಲ.

ಇದನ್ನೂ ಓದಿ: ಮಂಜು ಬೇಡಿಕೆ ಈಡೇರಿಸಿದ ಬಿಗ್​ ಬಾಸ್​; ಒಂದೇ ದಿನ ಇಬ್ಬರು ಹೆಣ್ಮಕ್ಳು ವೈಲ್ಡ್​ ಕಾರ್ಡ್​ ಎಂಟ್ರಿ!

(Bigg Boss Kannada season 8: Clash continues between Manju Pavagada and Prashanth Sambargi in BBK8)

VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ