Sayantani Ghosh: ಬ್ರಾ ಸೈಜ್​ ಕೇಳಿದ ಅಭಿಮಾನಿಗೆ ಗ್ರಹಚಾರ ಬಿಡಿಸಿದ ಕಿರುತೆರೆ ನಟಿ

ಕಿರುತೆರೆ ನಟಿ​ ಈ ಬಗ್ಗೆ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್​ನಲ್ಲಿ ತಮಗಾದ ಕಹಿ ಅನುಭವ ಹಾಗೂ ಅದಕ್ಕೆ ನೀಡಿದ ಉತ್ತರದ ಬಗ್ಗೆ ಬರೆದುಕೊಂಡಿದ್ದಾರೆ.

Sayantani Ghosh: ಬ್ರಾ ಸೈಜ್​ ಕೇಳಿದ ಅಭಿಮಾನಿಗೆ ಗ್ರಹಚಾರ ಬಿಡಿಸಿದ ಕಿರುತೆರೆ ನಟಿ
ಸಾಯಂತನಿ ಘೋಷ್​
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Apr 09, 2021 | 5:53 PM

ಸೆಲೆಬ್ರಿಟಿಗಳು ತಾವು ಹಾಕುವ ಬಟ್ಟೆಯ ಮೂಲಕ ಸುದ್ದಿ ಆಗುತ್ತಲೇ ಇರುತ್ತಾರೆ. ಆದರೆ, ಅವರು ಹಾಕುವ ದಿರಿಸಿನ ಕಾರಣಕ್ಕಾಗಿ ಕೆಲವೊಮ್ಮೆ ಅಭಿಮಾನಿಗಳಿಂದ ಚಿತ್ರ-ವಿಚಿತ್ರ ಪ್ರಶ್ನೆಗಳನ್ನು ಎದುರಿಸಿ ಪೇಚಿಗೀಡಾಗುತ್ತಾರೆ. ಈ ರೀತಿ ಪ್ರಶ್ನೆ ಕೇಳುವವರಿಗೆ ಕೆಲವರು ಧೈರ್ಯದಿಂದ ತಿರುಗೇಟು ನೀಡಿದರೆ, ಇನ್ನೂ ಕೆಲವರು ತಮಗೇಕೆ ಎಂದು ಸುಮ್ಮನಾಗುತ್ತಾರೆ. ಈಗ ಹಿಂದಿ ಕಿರುತೆರೆ ನಟಿ ಸಾಯಂತನಿ ಘೋಷ್​ಗೂ ಇದೇ ರೀತಿಯ ವಿಚಿತ್ರ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಅವರು ತಕ್ಕ ಉತ್ತರ ನೀಡಿದ್ದಾರೆ. ಸಾಯಂತನಿ ಘೋಷ್​ ಈ ಬಗ್ಗೆ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್​ನಲ್ಲಿ ತಮಗಾದ ಕಹಿ ಅನುಭವ ಹಾಗೂ ಅದಕ್ಕೆ ನೀಡಿದ ಉತ್ತರದ ಬಗ್ಗೆ ಬರೆದುಕೊಂಡಿದ್ದಾರೆ. ನಿನ್ನೆ ಅಭಿಮಾನಿಗಳ ಜತೆ ಮಾತುಕತೆ ನಡೆಸುವಾಗ ಓರ್ವ ನನ್ನ ಬ್ರಾ ಸೈಜ್​ ಕೇಳಿದೆ. ಆತನಿಗೆ ನಾನು ಸೂಕ್ತ ಉತ್ತರ ನೀಡಿದ್ದೇನೆ. ಆದಾಗ್ಯೂ ಈ ಬಗ್ಗೆ ಸಾಕಷ್ಟು ಮಾತಾಡುವುದು ಇದೆ ಎಂದು ನನಗೆ ಅನ್ನಿಸುತ್ತಿದೆ. ಬಾಡಿ ಶೇಮಿಂಗ್​ ಮಾಡುವುದು ತಪ್ಪು. ಈ ರೀತಿಯ ಅಸಭ್ಯ ಪ್ರಶ್ನೆ ಕೇಳುವವರ ಮೆಂಟಾಲಿಟಿಯನ್ನು ಅಳತೆ ಮಾಡೋಕೆ ಪ್ರಯತ್ನ ಮಾಡಿದ್ದೇನೆ ಎಂದು ಸಾಯಂತನಿ ಹೇಳಿದ್ದಾರೆ.

ಮುಂದೆ ಬರಬಹುದಾದ ಟ್ರೋಲ್​ಗಳ ಬಗ್ಗೆಯೂ ಸಾಯಂತನಿ ಘೋಷ್ ಈಗಲೇ ಉತ್ತರಿಸಿದ್ದಾರೆ. ಮುಂದಿನ ಸಲ ಯಾರಾದರೂ ನನ್ನ ಕಪ್​ ಸೈಜ್​ ಕೇಳಿದರೆ ನಾನು ಏನು ಉತ್ತರಿಸಬೇಕು ಎಂಬುದು ನನಗೆ ಗೊತ್ತಿದೆ. ನನಗೆ ದೊಡ್ಡ ಕಪ್​ ಎಂದರೆ ಇಷ್ಟ. ಕಾಫಿ ಲವರ್ ಎಂದಮೇಲೆ ದೊಡ್ಡ ಕಪ್​ಅನ್ನೇ ಇಷ್ಟಪಡಬೇಕಲ್ಲವೆ ಎಂದು ವಿಡಂಬನಾತ್ಮಕವಾಗಿ ಸಾಯಂತನಿ ಮಾತನಾಡಿದ್ದಾರೆ.

ಸಾಯಂತನಿ ಹಿಂದಿಯಲ್ಲಿ ಮನೆಮಾತಾಗಿದ್ದಾರೆ. ಅವರು, ಸಾಕಷ್ಟು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕುಂಕುಮ್​-ಏಕ್​ ಪ್ಯಾರ್​ ಸಾ ಬಂಧನ್​, ನಾಮಕರಣ್​, ಬ್ಯಾರಿಸ್ಟರ್​ ಬಾಬು, ಸಂತೋಷಿ ಮಾ, ಮಹಾಭಾರತ್​, ನಾಗಿಣ್​ 4 ಸೇರಿ ಹಲವು ಧಾರಾವಾಹಿಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ರಾಜು ಅಂಕಲ್​, ಸೇರಿ ಸಾಕಷ್ಟು ಬೆಂಗಾಳಿ ಸಿನಿಮಾಗಳಲ್ಲೂ ಸಾಯಂತನಿ ನಟಿಸಿದ್ದಾರೆ.

ಇದನ್ನೂ ಒದಿ: ‘ಮಹಿಳೆಯರು 8ರ ಶೇಪ್​ ಕಳೆದುಕೊಳ್ಳುತ್ತಿದ್ದಾರೆ.. ಸೊಂಟವೆಲ್ಲ ದೊಡ್ಡದಾಗುತ್ತಿದೆ’-ಅಸಭ್ಯ ಕೈಸನ್ನೆಯೊಂದಿಗೆ, ವಿವಾದಾತ್ಮಕ ಹೇಳಿಕೆ ನೀಡಿದ ರಾಜಕಾರಣಿ

Published On - 4:38 pm, Fri, 9 April 21

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ