‘ಮಹಿಳೆಯರು 8ರ ಶೇಪ್ ಕಳೆದುಕೊಳ್ಳುತ್ತಿದ್ದಾರೆ.. ಸೊಂಟವೆಲ್ಲ ದೊಡ್ಡದಾಗುತ್ತಿದೆ’-ಅಸಭ್ಯ ಕೈಸನ್ನೆಯೊಂದಿಗೆ, ವಿವಾದಾತ್ಮಕ ಹೇಳಿಕೆ ನೀಡಿದ ರಾಜಕಾರಣಿ
ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡ ಬಿಜೆಪಿಯ ಕಲಾ ಮತ್ತು ಸಂಸ್ಕೃತಿ ಮೋರ್ಚಾದ ಅಧ್ಯಕ್ಷೆ ಗಾಯತ್ರಿ ರಘುರಾಮ್, ಇಂಥ ಹೇಳಿಕೆ ನೀಡಲು ಲಿಯೋನಿಗೆ ನಾಚಿಕೆಯಾಗಬೇಕು. ಅದಿನ್ನೆಂತಾ ಕೆಟ್ಟ ಹಾಲನ್ನು ಅವರು ಕುಡಿದಿರಬಹುದು? ಎಂದು ಕಿಡಿಕಾರಿದ್ದಾರೆ.
ಮೊನ್ನೆಮೊನ್ನೆಯಷ್ಟೇ ಮಹಿಳೆಯರು ಹರಿದ ಜೀನ್ಸ್ ಪ್ಯಾಂಟ್ ಧರಿಸುವ ಬಗ್ಗೆ ಕಾಮೆಂಟ್ ಮಾಡಿ, ದೇಶಾದ್ಯಂತ ಮಹಿಳೆಯರಿಂದ ಟೀಕೆಗೆ ಒಳಗಾಗಿದ್ದಾರೆ ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್. ಅವರ ಹೇಳಿಕೆಗೆ ಇನ್ನೂ ವಿರೋಧಗಳು ವ್ಯಕ್ತವಾಗುತ್ತಿರುವಾಗಲೇ ತಮಿಳುನಾಡಿನ ರಾಜಕಾರಣಿಯೊಬ್ಬರು ಮಹಿಳೆಯರ ಬಗ್ಗೆ ಮಾತನಾಡಿ, ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಡಿಎಂಕೆ ಅಭ್ಯರ್ಥಿ ಪ್ರಚಾರದ ವೇಳೆ ಮಾಡಿದ ಎಡವಟ್ಟಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಡಿಎಂಕೆ ಅಭ್ಯರ್ಥಿ ದಿಂಡಿಗಲ್ ಲಿಯೋನಿ ಕೊಡಬಾರದ ಹೇಳಿಕೆ ಕೊಟ್ಟು ಟೀಕೆಗೆ ಗುರಿಯಾಗಿದ್ದಾರೆ. ಮಹಿಳೆಯರನ್ನು ಹಸುಗಳಿಗೆ ಹೋಲಿಸಿದ್ದಲ್ಲದೆ, ವಿದೇಶಿ ಹಸುಗಳ ಹಾಲು ಕುಡಿದು ತಮ್ಮ ಆಕಾರವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಪ್ರಚಾರಕ್ಕೆ ತೆರಳಿದ್ದ ವೇಳೆ, ಅವರು ಅಸಭ್ಯವಾಗಿ ಕೈಸನ್ನೆ ಮಾಡುತ್ತ, ಇತ್ತೀಚೆಗೆ ಮಹಿಳೆಯರು ವಿದೇಶಿ ಹಸುಗಳ ಹಾಲುಗಳನ್ನು ಕುಡಿಯುತ್ತಿರುವ ಕಾರಣ ಅವರ ತೂಕ ಹೆಚ್ಚಾಗುತ್ತಿದೆ. ಇದೇ ಕಾರಣದಿಂದ, ತೆಳುವಾಗಿ ಇರಬೇಕಿದ್ದ ಅವರ ಸೊಂಟ ದಪ್ಪವಾಗುತ್ತದೆ. ಮೊದಲೆಲ್ಲ ಮಹಿಳೆಯರ ಆಕಾರ ಎಂಟರ ಆಕೃತಿಯಲ್ಲಿ ಇರುತ್ತಿತ್ತು. ಅಂದರೆ ಸೊಂಟ ತೆಳುವಾಗಿ ಇರುತ್ತಿತ್ತು. ಮಕ್ಕಳನ್ನು ಎತ್ತಿಕೊಂಡರೆ ಆ ಮಗು ತಾಯಿಯ ಸೊಂಟದ ಮೇಲೆ ಸರಿಯಾಗಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಈಗೀಗ ಮಹಿಳೆಯ ಸೊಂಟ ಪೀಪಾಯಿಯಂತೆ ದೊಡ್ಡದಾಗಿ ಇರುತ್ತದೆ. ಹಾಗಾಗಿ ಮಕ್ಕಳನ್ನು ಸೊಂಟದ ಮೇಲೆ ಎತ್ತಿಕೊಳ್ಳಲೂ ಅವರಿಗೆ ಆಗುವುದಿಲ್ಲ. ಈಗಿನ ಮಹಿಳೆಯರು ವಿದೇಶಿ ಹಸುಗಳ ಹಾಲು ಕುಡಿದು ತಮ್ಮ ಶೇಪ್ ಕಳೆದುಕೊಳ್ಳುತ್ತಿದ್ದಾರೆ ಎಂದು ಅಸಹ್ಯದ ಮಾತುಗಳನ್ನಾಡಿದ್ದಾರೆ.
ಪಕ್ಷದ ಇತರ ಕಾರ್ಯಕರ್ತರು ದಿಂಡಿಗಲ್ ಲಿಯೋನಿ ಅವರನ್ನು ತಡೆಯಲು ಯತ್ನಿಸಿದರೂ ಪ್ರಯೋಜನ ಆಗಲಿಲ್ಲ. ಒಂದೇ ಸಮ ಮಹಿಳೆಯರ ಬಗ್ಗೆ ಟೀಕೆ ಮಾಡುತ್ತಲೇ ಇದ್ದರು. ತುಂಬ ಆಸಕ್ತಿಯಿಂದ ಮಾತನಾಡುತ್ತಿದ್ದರು. ಆದರೆ ಲಿಯೋನಿ ಈ ಹೇಳಿಕೆ ಕೊಟ್ಟ ನಂತರ ಹಲವರು ಅವರ ವಿರುದ್ಧ ಕಿಡಿಕಾರಿದ್ದಾರೆ.
ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡ ಬಿಜೆಪಿಯ ಕಲಾ ಮತ್ತು ಸಂಸ್ಕೃತಿ ಮೋರ್ಚಾದ ಅಧ್ಯಕ್ಷೆ ಗಾಯತ್ರಿ ರಘುರಾಮ್, ಇಂಥ ಹೇಳಿಕೆ ನೀಡಲು ಲಿಯೋನಿಗೆ ನಾಚಿಕೆಯಾಗಬೇಕು. ಅದಿನ್ನೆಂತಾ ಕೆಟ್ಟ ಹಾಲನ್ನು ಅವರು ಕುಡಿದಿರಬಹುದು? ಮಹಿಳೆಯರಿಗೆ ಹೆರಿಗೆ ನಂತರ ಅವರ ದೇಹದಲ್ಲಿ ಹಾರ್ಮೋನುಗಳ ಬದಲಾವಣೆ ಆಗುತ್ತದೆ ಎಂಬ ಬಗ್ಗೆ ಲಿಯೋನಿಗೆ ಗೊತ್ತಿಲ್ಲವಾ? ಎಂದು ಆಕ್ರೋರ ಹೊರಹಾಕಿದ್ದಾರೆ. ಅಲ್ಲದೆ, ಡಿಎಂಕೆ ಪಕ್ಷದ ಸಂಸದೆ ಕನಿಮೋಳಿಯವರನ್ನು ಟ್ಯಾಗ್ ಮಾಡಿ, ಇದೇನಾ? ನಿಮ್ಮ ಪಕ್ಷದವರಿಗೆ ಮಹಿಳೆಯರ ಬಗ್ಗೆ ಇರುವ ಗೌರವ ಎಂದು ಪ್ರಶ್ನಿಸಿದ್ದಾರೆ.
.@KanimozhiDMK Madame please get rid of womanizers like Dindigul Leoni, Vairamuthu etc in your party before you talk about women’s safety.. pic.twitter.com/cVkGCQ8eGi
— Vishwatma ?? (@HLKodo) March 24, 2021
What a shame.. what milk does he drink? Does he know what happens to women’s body post pregnancy or during hormonal changes? @KanimozhiDMK what do you like to say to this kind of male chauvinist? Is this the respect your party people have on women. https://t.co/7yMf5esqX0
— Gayathri Raguramm (@BJP_Gayathri_R) March 24, 2021
ಇದನ್ನೂ ಓದಿ: ತಮಿಳುನಾಡು ಚುನಾವಣೆ ಹೊಸಿಲಲ್ಲೇ ‘ತಲೈವಿ’ ಟ್ರೇಲರ್ ಬಿಡುಗಡೆ: ಮತದಾರರಿಗೆ ನೆನಪಾಗ್ತಾರಾ ಜಯಲಲಿತಾ?