ಪೊಲೀಸ್ ಶ್ವಾನಗಳಿಗೆ ಹೆದರಿ, ಕದ್ದ ಹಣವನ್ನು ಇನ್​​ಸ್ಟಾಲ್​​ಮೆಂಟ್​​ನಲ್ಲಿ ಹಿಂದಿರುಗಿಸಿದ ಕಳ್ಳ; ಅವನ್ಯಾರೆಂಬುದು ಮಾತ್ರ ಗೊತ್ತಾಗಿಲ್ಲ

ತನಿಖೆಯ ಮೊದಲ ಹಂತವಾಗಿ ಅಪರಾಧ ವಿಭಾಗದ ಪೊಲೀಸರು, ಶ್ವಾನದಳದೊಂದಿಗೆ ರೈತನ ಮನೆಯ ಬಳಿ ತೆರಳಿದ್ದರು. ಈ ಎಲ್ಲ ಚಟುವಟಿಕೆಗಳ ಮೇಲೆ ಕಳ್ಳ ಕಣ್ಣಿಟ್ಟಿದ್ದ. ಯಾವಾಗ ಶ್ವಾನದಳ ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿತೋ, ಆತ ಅಕ್ಷರಶಃ ಹೆದರಿದ್ದ.

ಪೊಲೀಸ್ ಶ್ವಾನಗಳಿಗೆ ಹೆದರಿ, ಕದ್ದ ಹಣವನ್ನು ಇನ್​​ಸ್ಟಾಲ್​​ಮೆಂಟ್​​ನಲ್ಲಿ ಹಿಂದಿರುಗಿಸಿದ ಕಳ್ಳ; ಅವನ್ಯಾರೆಂಬುದು ಮಾತ್ರ ಗೊತ್ತಾಗಿಲ್ಲ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:Mar 24, 2021 | 7:17 PM

ಹೈದರಾಬಾದ್​: ವಾಸನೆಯಿಂದಲೇ ಅಪರಾಧಿಗಳನ್ನು ಪತ್ತೆಹಚ್ಚುವ ಸ್ನಿಫರ್ ಶ್ವಾನಗಳಿಂದ ಅದೆಷ್ಟೋ ಅಪರಾಧ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಹಲವು ತಳಿಯ ನಾಯಿಗಳನ್ನು ಸ್ನಿಫರ್ ಶ್ವಾನಗಳ ವಿಭಾಗಕ್ಕೆ ಸೇರಿಸಲಾಗಿದ್ದು, ಸೈನ್ಯ ಹಾಗೂ ಪೊಲೀಸ್​ ಇಲಾಖೆಯಲ್ಲಿ ಹೆಚ್ಚು ಬಳಕೆಯಾಗುತ್ತವೆ. ಇದೀಗ ಇಂಥ ಪೊಲೀಸ್ ಸ್ನಿಫರ್​ ನಾಯಿಗಳಿಗೆ ಹೆದರಿ ಕಳ್ಳನೊಬ್ಬ ತಾನು ಕದ್ದ ಹಣವನ್ನು ಸದ್ದಿಲ್ಲದೆ ಮರಳಿಸಿದ್ದಾನೆ.

ಈ ಘಟನೆ ನಡೆದದ್ದು ಹೈದರಾಬಾದ್​​ನ ಖಮ್ಮಮ್​ ಜಿಲ್ಲೆಯ ದುಬ್ಬತಾಂಡಾ ಗ್ರಾಮದಲ್ಲಿ. ಕಳ್ಳನೊಬ್ಬ ರೈತ ಗುಗುಲೋತ್ ಲಚ್ಚರಾಮ್ ಮನೆಯಿಂದ 1ಲಕ್ಷ ರೂಪಾಯಿಯನ್ನು ಕಳವು ಮಾಡಿದ್ದ. ಗುಗಲೋತ್​ ಅವರು, ತಮ್ಮ ಮನೆಯಿಂದ ಮಾರ್ಚ್​ 17ರಂದು, 1.7ಲಕ್ಷ ರೂ. ಕಳವಾಗಿದೆ ಎಂದು ದೂರು ನೀಡಿದ್ದರು. ಪೊಲೀಸರು ಮಾ.20ರಿಂದ ತನಿಖೆಯನ್ನೂ ಪ್ರಾರಂಭಿಸಿದ್ದರು.

ಅದರ ಮೊದಲ ಹಂತವಾಗಿ ಅಪರಾಧ ವಿಭಾಗದ ಪೊಲೀಸರು, ಶ್ವಾನದಳದೊಂದಿಗೆ ರೈತನ ಮನೆಯ ಬಳಿ ತೆರಳಿದ್ದರು. ಈ ಎಲ್ಲ ಚಟುವಟಿಕೆಗಳ ಮೇಲೆ ಕಳ್ಳ ಕಣ್ಣಿಟ್ಟಿದ್ದ. ಯಾವಾಗ ಶ್ವಾನದಳ ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿತೋ, ಆತ ಅಕ್ಷರಶಃ ಹೆದರಿದ್ದ. ಮಾರ್ಚ್​ 21ರಂದು, ಅಂದರೆ ಪೊಲೀಸರು ತನಿಖೆ ಶುರು ಮಾಡಿದ ಮರುದಿನವೇ ರೈತ ಲಚ್ಚರಾಮ್ ಮನೆಯೆದುರು 1 ಲಕ್ಷ ರೂ. ಇಟ್ಟು ಹೋಗಿದ್ದ. ಮಾರ್ಚ್​ 22ರಂದು ಉಳಿದ 70,000 ರೂ.ನ್ನೂ ಇಟ್ಟ. ಹಣವನ್ನು ರೈತ ವಾಪಸ್​ ಪಡೆದರೂ, ನಾವು ತನಿಖೆ ಮುಂದುವರಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಕಳ್ಳ ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: 20 ವಿದೇಶಿ ತಳಿಯ ಶ್ವಾನಗಳ ಪಾಲನೆ: ಬೀದರ್ ರಾಜಕಾರಣಿಯ ಶ್ವಾನ ಪ್ರೀತಿ ಇತರರಿಗೆ ಮಾದರಿ

‘ಮಹಿಳೆಯರು 8ರ ಶೇಪ್​ ಕಳೆದುಕೊಳ್ಳುತ್ತಿದ್ದಾರೆ.. ಸೊಂಟವೆಲ್ಲ ದೊಡ್ಡದಾಗುತ್ತಿದೆ’-ಅಸಭ್ಯ ಕೈಸನ್ನೆಯೊಂದಿಗೆ, ವಿವಾದಾತ್ಮಕ ಹೇಳಿಕೆ ನೀಡಿದ ರಾಜಕಾರಣಿ

Published On - 7:15 pm, Wed, 24 March 21

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ