Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು

Kannada News Today: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
ಕೆ. ಸುಧಾಕರ್​
Follow us
sandhya thejappa
|

Updated on:Mar 26, 2021 | 5:20 PM

ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್​ಸೈಟ್​​ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

1) ಎಲ್ಲರನ್ನು ತನಿಖೆ ಮಾಡಿದಾಗ ಬಂಡವಾಳ ಗೊತ್ತಾಗುತ್ತದೆ: ಸಚಿವ ಸುಧಾಕರ್ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಮೇಶ್‌ಕುಮಾರ್ ಸತ್ಯಹರಿಶ್ಚಂದ್ರರಾ? ಇವರೆಲ್ಲರೂ ಏಕಪತ್ನಿ ವ್ರತ ಮಾಡುತ್ತಿದ್ದಾರಾ? ನಾನೂ ಸೇರಿದಂತೆ 224 ಶಾಸಕ ಮೇಲೆಯೂ ತನಿಖೆಯಾಗಲಿ ಎಂದು ಸಚಿವ ಡಾ.ಕೆ.ಸುಧಾಕರ ಪಂಥಾಹ್ವಾನ ನೀಡಿದ್ದಾರೆ. Link: ಸಿದ್ದರಾಮಯ್ಯ, ಡಿಕೆಶಿ, ರಮೇಶ್‌ಕುಮಾರ್ ಸತ್ಯಹರಿಶ್ಚಂದ್ರರಾ?

2) ದೇಶಪ್ರೇಮ ಮೆರೆದಿದ್ದ ಅಜಿಂಕ್ಯ ರಹಾನೆ ನಮ್ಮ ದೇಶದಲ್ಲಿ ಕ್ರಿಕೆಟ್​ ಆಟಗಾರರ ಮೇಲೆ ಕ್ರೀಡಾಪ್ರೇಮಿಗಳ ಒಂದು ಕಣ್ಣು ಇದ್ದೇ ಇರುತ್ತೆ. ಅದರಲ್ಲೂ ಅವರೊಂದಿಷ್ಟು ಖ್ಯಾತನಾಮರಾದರೆ ಜನ ಅವರ ಮೇಲೆ ಮುಗಿಬೀಳ್ತಾರೆ. ಅವರಿಂದ ಆಟೋಗ್ರಾಫ್ ಪಡೆಯುವುದು ಅಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. Link: ರಾಷ್ಟ್ರಧ್ವಜದ ಮೇಲೆ ಆಟೋಗ್ರಾಫ್​ ಕೊಡೋಲ್ಲ ಎಂದು ದೇಶಪ್ರೇಮ, ಸಮಯಪ್ರಜ್ಞೆ ಮೆರೆದಿದ್ದ ಅಜಿಂಕ್ಯ ರಹಾನೆ! ವೈರಲ್ ವಿಡಿಯೋ

3) ಕೊರೊನಾ ತಡೆಗಟ್ಟಲು ಹೊಸ ನಿಯಮಾವಳಿ ಹೊರಡಿಸಿದ ರಾಜ್ಯ ಸರ್ಕಾರ ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆ ನಿಯಂತ್ರಿಸಲು ರಾಜ್ಯ ಸರ್ಕಾರ ಹೊಸ ನಿಯಮಾವಳಿಗಳನ್ನು ಹೊರಡಿಸಿದೆ. ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ ಸಹಿತ ಚಂಡೀಗಡ, ರಾಜಸ್ಥಾನಗಳಲ್ಲಿ ಕೊವಿಡ್-19 ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. Link: ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಹೊಸ ನಿಯಮಾವಳಿ: ಮಾಸ್ಕ್ ಹಾಕದಿದ್ದರೆ ₹ 250 ದಂಡ!

4) ಪ್ರಶಾಂತ್​ ನೀಲ್ ಕನ್ನಡ ಸಿನಿಮಾ ಮಾಡೋದು ಅನುಮಾನ ಕೆಜಿಎಫ್​ ಚಾಪ್ಟರ್​ 2 ನಂತರ ಪ್ರಶಾಂತ್​ ನೀಲ್​ ಮುಂದೇನು ಮಾಡುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಿತ್ತು. ಹೀಗಿರುವಾಗಲೇ ಪ್ರಭಾಸ್​ ಜತೆ ಸಿನಿಮಾ ಮಾಡುವ ಘೋಷಣೆಯನ್ನು ಮಾಡಿದ್ದರು ಪ್ರಶಾಂತ್​ ನೀಲ್​. Link:  ಸಲಾರ್​ ನಂತರವೂ ಪ್ರಶಾಂತ್​ ನೀಲ್​ ಕನ್ನಡ ಸಿನಿಮಾ ಮಾಡೋದು ಡೌಟ್​; ಇಲ್ಲಿದೆ ಹೊಸ ನ್ಯೂಸ್​

5) ಸುಧಾಕರ್ ಹೇಳಿಕೆಯನ್ನು ಖಂಡಿಸಿದ ವಿಪಕ್ಷ ನಾಯಕ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನೀಡಿರುವ ಏಕಪತ್ನೀವ್ರತಸ್ಥ ಹೇಳಿಕೆ ವಿವಾದದ ಧೂಳೆಬ್ಬಿಸಿದೆ. ವಿಪಕ್ಷಗಳ ನಾಯಕರು ಸುಧಾಕರ್ ಹೇಳಿಕೆಯನ್ನು ಖಂಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಂದು (ಮಾರ್ಚ್ 24) ಸಂಜೆ ನಡೆದ ಸುದ್ದಗೋಷ್ಠಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. Link: ಸಿಡಿ ಇದೆ ಅದಕ್ಕೇ ವಿಲಿವಿಲಿ ಅಂತ ಒದ್ದಾಡ್ತಿದ್ದಾರೆ: ನಂಗೆ ಸಿಡಿಯೇ ಮುಖ್ಯ ಎಂದ ಸಿದ್ದರಾಮಯ್ಯ

6) ತೆರಿಗೆ ವಿನಾಯತಿ ಘೋಷಿಸಿದ ಕೇಂದ್ರ ಸರ್ಕಾರ ಉದ್ಯೋಗಿಗಳು ಜಮೆ ಮಾಡಿದ ಭವಿಷ್ಯ ನಿಧಿ (ಪ್ರಾವಿಡೆಂಟ್ ಫಂಡ್) ಮೊತ್ತದ ಮೇಲಿನ ವಾರ್ಷಿಕ ಬಡ್ಡಿ ಗಳಿಕೆಗೆ ಇರುವ ತೆರಿಗೆ ವಿನಾಯಿತಿ ಮೊತ್ತದ ಮಿತಿಯನ್ನು ನಿರ್ದಿಷ್ಟ ಪ್ರಕರಣಗಳಲ್ಲಿ 5 ಲಕ್ಷ ರೂಪಾಯಿ ತನಕ ಏರಿಕೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರದಂದು ಲೋಕಸಭೆಯಲ್ಲಿ ಹೇಳಿದ್ದಾರೆ. Link: Tax on EPF Interest: ಪಿಎಫ್ ಮೇಲಿನ ಬಡ್ಡಿಗೆ ವರ್ಷಕ್ಕೆ 5 ಲಕ್ಷ ರೂ. ತನಕ ತೆರಿಗೆ ವಿನಾಯಿತಿ ಘೋಷಿಸಿದ ಕೇಂದ್ರ

7) ಸಾಂಕ್ರಾಮಿಕ ರೋಗಕ್ಕೆ ತಡೆಯೊಡ್ಡುತ್ತಿರುವ ವೈರಸ್ ಹಂಟರ್ಸ್  ದೊಡ್ಡ ಬಲೆಗೆ ಸಿಲುಕಿದ ಬಾವಲಿಗಳನ್ನು ಅವುಗಳ ಬಾಗಿದ ಉಗುರುಗಳು ಮತ್ತು ರೆಕ್ಕೆಗಳಿಂದ ಬಿಡಿಸಿ, ನಾಜೂಕಾಗಿ ಮೇಲೆತ್ತಲು ಹಣೆಯ ಮೇಲೆ ದೀಪಗಳನ್ನು ಕಟ್ಟಿಕೊಂಡ ಸಂಶೋಧಕರು ಕತ್ತಲ ಗುಹೆಗಳಲ್ಲಿ ಹೆಜ್ಜೆ ಹಾಕುತ್ತಿದ್ದರು. ಬಟ್ಟೆ ಚೀಲಗಳಲ್ಲಿ ಬಾವಲಿಗಳನ್ನು ಸಂಚಾರಿ ಪ್ರಯೋಗಾಲಯಗಳಿಗೆ ಕೊಂಡೊಯ್ದು, ಅಲ್ಲಿಯೇ ಅವುಗಳನ್ನು ಅಳತೆ ಮಾಡಿ, ಜೊಲ್ಲು ಮತ್ತು ಹಿಕ್ಕೆಯ ಮಾದರಿಯನ್ನು ಇವರು ಸಂಗ್ರಹಿಸುತ್ತಾರೆ. Link: Virus Hunters: ಬಾವಲಿಗಳನ್ನು ಹಿಡಿದು ಮುಂದಿನ ಸಾಂಕ್ರಾಮಿಕ ರೋಗಕ್ಕೆ ತಡೆಯೊಡ್ಡುತ್ತಿರುವ ‘ವೈರಸ್ ಹಂಟರ್ಸ್’

8) ಎರಡನೇ ಏಕದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆ ಭಾರತ ಮತ್ತು ಇಂಗ್ಲೆಂಡ್ ನಡುವೆ ಏಕದಿನ ಸರಣಿ ಪ್ರಾರಂಭವಾಗಿದೆ. ಪುಣೆಯಲ್ಲಿ ಆಡಿದ ಮೊದಲ ಪಂದ್ಯವನ್ನು ಟೀಮ್ ಇಂಡಿಯಾ 66 ರನ್‌ಗಳ ಅಂತರದಿಂದ ಗೆದ್ದುಕೊಂಡಿತು. ಸರಣಿಯ ಉಳಿದ ಎರಡೂ ಪಂದ್ಯಗಳು ಮಾರ್ಚ್ 26 ಮತ್ತು 28 ರಂದು ಪುಣೆಯಲ್ಲಿ ನಡೆಯಲಿದೆ. ಆದರೆ, ಮೊದಲ ಏಕದಿನ ಪಂದ್ಯವು ಎರಡೂ ತಂಡಗಳ ಬಗ್ಗೆ ಕಳವಳವನ್ನು ತಂದಿದೆ.  Link: India vs England: ಇಂಗ್ಲೆಂಡ್​ಗೆ ಇಂಜುರಿ ಸಮಸ್ಯೆ! 2ನೇ ಪಂದ್ಯದಲ್ಲಿ ಮೋರ್ಗಾನ್​, ಬಿಲ್ಲಿಂಗ್ಸ್​ ಆಡೋದು ಡೌಟ್?

9) ಪರಮ್​ವೀರ್​ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್ ಮುಂಬೈನ ಹಿಂದಿನ ಪೊಲೀಸ್ ಕಮೀಷನರ್ ಪರಮ್​ವೀರ್​ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ತಿರಸ್ಕರಿಸಿದೆ. ಬಾಂಬೆ ಹೈಕೋರ್ಟ್​ನಲ್ಲಿಯೇ ಅರ್ಜಿ ಹಾಕಿಕೊಳ್ಳಿ ಎಂದು ಸೂಚಿಸಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪರಮ್​ವೀರ್​ಸಿಂಗ್​ ಬಾಂಬೆ ಹೈಕೋರ್ಟ್​ಗೆ ಅರ್ಜಿ ಹಾಕಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. Link: ಪರಮ್​ವೀರ್​ ಸಿಂಗ್​ ಅರ್ಜಿ ಸುಪ್ರೀಂನಲ್ಲಿ ತಿರಸ್ಕಾರ; ಬಾಂಬೆ ಹೈಕೋರ್ಟ್​ಗೆ ಹೋಗಲು ಆದೇಶ

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.

Published On - 6:32 pm, Wed, 24 March 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ