ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಹೊಸ ನಿಯಮಾವಳಿ: ಮಾಸ್ಕ್ ಹಾಕದಿದ್ದರೆ ₹ 250 ದಂಡ!

Corona Guidelines: ರಾಜ್ಯದ ಕೊರೊನಾ ಪರಿಸ್ಥಿತಿ ನಿಯಂತ್ರಿಸಲು ರಾಜ್ಯ ಸರ್ಕಾರ ಇಂದು (ಮಾರ್ಚ್ 24) ಹೊಸ ನಿಯಮಾವಳಿಗಳ ಅಧಿಸೂಚನೆ ಹೊರಡಿಸಿದೆ.

ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಹೊಸ ನಿಯಮಾವಳಿ: ಮಾಸ್ಕ್ ಹಾಕದಿದ್ದರೆ ₹ 250 ದಂಡ!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 05, 2022 | 1:16 PM

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆ ನಿಯಂತ್ರಿಸಲು ರಾಜ್ಯ ಸರ್ಕಾರ ಹೊಸ ನಿಯಮಾವಳಿಗಳನ್ನು ಹೊರಡಿಸಿದೆ. ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ ಸಹಿತ ಚಂಡೀಗಡ, ರಾಜಸ್ಥಾನಗಳಲ್ಲಿ ಕೊವಿಡ್-19 ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ರಾಜ್ಯದ ಪರಿಸ್ಥಿತಿ ನಿಯಂತ್ರಿಸಲು ರಾಜ್ಯ ಸರ್ಕಾರ ಇಂದು (ಮಾರ್ಚ್ 24) ಹೊಸ ನಿಯಮಾವಳಿಗಳ ಅಧಿಸೂಚನೆ ಹೊರಡಿಸಿದೆ.

ನಿಯಮಾವಳಿಗಳು ಏನೇನು? ಶಿಕ್ಷೆ ಏನು? – ರಾಜ್ಯದಲ್ಲಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಪಾಲಿಸುವುದು ಅವಶ್ಯವಾಗಿದೆ. ತಪ್ಪಿದಲ್ಲಿ ಬಿಬಿಎಂಪಿ ಪ್ರದೇಶದಲ್ಲಿ ₹ 250, ಉಳಿದ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶಗಳಲ್ಲಿ ₹ 250 ಮತ್ತು ಇತರ ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ₹ 100 ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ. – ಜನರೆಲ್ಲರೂ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಪಾಲಿಸುವಂತೆ ನೋಡಿಕೊಳ್ಳುವುದು ಆಯಾ ಸ್ಥಳಗಳ ಮಾಲೀಕರ ಕರ್ತವ್ಯವಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಜನರಿಗೆ ಅನುಮತಿ? – ಮದುವೆ ಕಾರ್ಯಕ್ರಮಕ್ಕೆ ತೆರೆದ ಪ್ರದೇಶವಾದರೆ 500 ಜನ ಸೇರಬಹುದು. ಕ್ಲೋಸ್​ಡ್ ಹಾಲ್ ಅಂತಾದರೆ ಕೇವಲ 200 ಜನ ಸೇರಲು ಅನುಮತಿ ನೀಡಲಾಗಿದೆ. – ಬರ್ತ್​ಡೇ ಹಾಗೂ ಇತರ ಸಮಾರಂಭಗಳಿಗೆ ತೆರೆದ ಸಭಾಂಗಣದಲ್ಲಿ 100 ಜನ ಸೇರಬಹುದು. ಕ್ಲೋಸ್​ಡ್ ಹಾಲ್ ಅಂತಾದರೆ ಕೇವಲ 50 ಜನರು ಸೇರಬಹುದು. – ಮರಣೋತ್ತರ ಕಾರ್ಯಕ್ರಮಗಳಿಗೆ ತೆರೆದ ಪ್ರದೇಶದಲ್ಲಿ 100 ಹಾಗೂ ಮುಚ್ಚಿದ ಸಭಾಂಗಣದಲ್ಲಿ 50 ಜನ ಸೇರಬಹುದಾಗಿದೆ. – ಶವ ಸಂಸ್ಕಾರ ನಡೆಯುವಲ್ಲಿ 50 ಜನ ಭಾಗವಹಿಸಲು ಅವಕಾಶವಿದೆ. – ಉಳಿದ ಸಮಾರಂಭಗಳಲ್ಲಿ ಕೇವಲ 100 ಜನ ಸೇರಬಹುದಾಗಿದೆ. – ತೆರೆದ ಪ್ರದೇಶದಲ್ಲಿ ನಡೆಯುವ ಧಾರ್ಮಿಕ ಸಮಾರಂಭಗಳಲ್ಲಿ 500 ಜನ ಭಾಗವಹಿಸಬಹುದು. – ರಾಜಕೀಯ ಸಮಾರಂಭ, ಸಮಾವೇಶಗಳಲ್ಲಿ ಕೂಡ ತೆರೆದ ಪ್ರದೇಶದಲ್ಲಾದರೆ 500 ಜನ ಸೇರಬಹುದಾಗಿದೆ. – ಈ ನಿಯಮಾವಳಿಗಳ ಅನುಷ್ಠಾನಕ್ಕೆ ಆಯೋಜಕರು ಅಥವಾ ಸಂಬಂಧಪಟ್ಟ ಸ್ಥಳದ ಮಾಲೀಕರು ಹೊಣೆಗಾರರಾಗಿರುತ್ತಾರೆ. – ತಪ್ಪಿದರೆ 5,000 ಅಥವಾ 10,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Bangalore Covid-19 Case Updates: ಜುಲೈವರೆಗೂ ಕೊರೊನಾ ಸೋಂಕು ಕಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ ತಜ್ಞರು

ಇದನ್ನೂ ಓದಿ: COVID-19 MHA Guidelines: ಕೊರೊನಾ ಎರಡನೇ ಅಲೆ ತಡೆಯಲು ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

Published On - 4:26 pm, Wed, 24 March 21