ರಾಷ್ಟ್ರಧ್ವಜದ ಮೇಲೆ ಆಟೋಗ್ರಾಫ್​ ಕೊಡೋಲ್ಲ ಎಂದು ದೇಶಪ್ರೇಮ, ಸಮಯಪ್ರಜ್ಞೆ ಮೆರೆದಿದ್ದ ಅಜಿಂಕ್ಯ ರಹಾನೆ! ವೈರಲ್ ವಿಡಿಯೋ

National Flag | ಅಷ್ಟೇ ಅಲ್ಲ... ಈ ಸಂದರ್ಭದಲ್ಲಿಯೇ ಅಜಿಂಕ್ಯ ರಹಾನೆ ತಮ್ಮ ಮೆಚ್ಯುರಿಟಿ ತೋರಿದ್ದಾರೆ. ಗಮನಿಸಿ.. ಈ ಕಡೆಯಿಂದ ಅಭಿಮಾನಿಯೊಬ್ಬ ಭಾರತದ ಬಾವುಟವನ್ನು ಉಂಡೆ ಮಾಡಿ ಹಾಕಿದ್ದ. ಆದರೆ ಅದರ ಮೇಲೆ ಸಹಿ ಹಾಕುವುದನ್ನು ನಿರಾಕರಿಸುತ್ತಾ.. ಅಜಿಂಕ್ಯ ರಹಾನೆ ಏನು ಮಾಡಿದರು ಗೊತ್ತಾ..

ರಾಷ್ಟ್ರಧ್ವಜದ ಮೇಲೆ ಆಟೋಗ್ರಾಫ್​ ಕೊಡೋಲ್ಲ ಎಂದು ದೇಶಪ್ರೇಮ, ಸಮಯಪ್ರಜ್ಞೆ ಮೆರೆದಿದ್ದ ಅಜಿಂಕ್ಯ ರಹಾನೆ! ವೈರಲ್ ವಿಡಿಯೋ
ರಾಷ್ಟ್ರಧ್ವಜದ ಮೇಲೆ ಆಟೋಗ್ರಾಫ್​ ಕೊಡೋಲ್ಲ ಎಂದು ದೇಶಪ್ರೇಮ, ಸಮಯಪ್ರಜ್ಞೆ ಮೆರೆದ ಅಜಿಂಕ್ಯಾ ರಜಾನೆ!
Follow us
ಸಾಧು ಶ್ರೀನಾಥ್​
|

Updated on:Mar 24, 2021 | 4:59 PM

ನಮ್ಮ ದೇಶದಲ್ಲಿ ಕ್ರಿಕೆಟ್​ ಆಟಗಾರರ ಮೇಲೆ ಕ್ರೀಡಾಪ್ರೇಮಿಗಳ ಒಂದು ಕಣ್ಣು ಇದ್ದೇ ಇರುತ್ತೆ. ಅದರಲ್ಲೂ ಅವರೊಂದಿಷ್ಟು ಖ್ಯಾತನಾಮರಾದರೆ ಜನ ಅವರ ಮೇಲೆ ಮುಗಿಬೀಳ್ತಾರೆ. ಅವರಿಂದ ಆಟೋಗ್ರಾಫ್ ಪಡೆಯುವುದು ಅಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಆದರೆ ಎಕ್ಸಾಕ್ಟ್​​ಲಿ ಇಂತಹ ಸಂದರ್ಭಗಳಲ್ಲಿ ಯಡವಟ್ಟುಗಳು ಆಗೋದು. ಅದರಲ್ಲೂ ಆಟಗಾರರು ಸ್ವಲ್ಪವೇ ಎಚ್ಚರ ತಪ್ಪಿದರೂ ಅಚಾತುರ್ಯಗಳು ನಡೆದುಹೋಗುತ್ತವೆ. ಅಥವಾ ಇಂತಹ ಸಂದರ್ಭಗಳಲ್ಲಿ ಆಟಗಾರರು ಎಚ್ಚರವಹಿಸಿದರೆ, ಜವಾಬ್ದಾರಿವಹಿಸಿದರೆ, ಸಮಯಪ್ರಜ್ಞೆ ತೋರಿದರೆ ಖಂಡಿತಾ ಮುಜುಗರ ಸನ್ನಿವೇಶದಿಂದ ಪಾರಾಗಬಹುದು. ಭಾರತ ತಂಡದ ಬ್ಯಾಟ್ಸ್​ಮನ್​ ಅಜಿಂಕ್ಯ ರಹಾನೆ ಹೀಗೆ ಸಮಯಪ್ರಜ್ಞೆ ತೋರಿರುವ ಹಳೆಯ ಘಟನೆಯೊಂದನ್ನು ಮೆಲುಕು ಹಾಕುವುದಾದರೆ…

ಈ ಹಿಂದೆ.. ಅಭಿಮಾನಿಯೊಬ್ಬ ಏಕಾಏಕಿ ಭಾರತದ ರಾಷ್ಟ್ರಧ್ವಜವನ್ನು ಅಜಿಂಕ್ಯ ರಹಾನೆ ಅವರತ್ತ ಉಂಡೆಮಾಡಿ ಎಸೆದಿದ್ದಾನೆ. ಇಂಡಿಯಾ ಫ್ಲಾಗ್​ ಮೇಲೆ ಆಟೋಗ್ರಾಫ್​ ಪ್ಲೀಸ್​ ಎಂದಿದ್ದಾನೆ. ಆದರೆ ಫೆನ್ಸ್​ನ ಆ ಕಡೆಯಿದ್ದ ಭಾರತ ತಂಡದ ಬ್ಯಾಟ್ಸ್​ಮನ್​ ಅಜಿಂಕ್ಯ ರಹಾನೆ ಅವರು ಅವೆಲ್ಲಾ ಆಗಾಕಿಲ್ಲ; ಹಂಗೆಲ್ಲ ನಮ್ಮ ಬಾವುಟದ ಮೇಲೆ ಸಹಿ ಮಾಡುವುದಿಲ್ಲ; ಅದು ಪವಿತ್ರವಾದದ್ದು. ನಾ ಸಹಿ ಹಾಕೋಲ್ಲ ಎಂದು ತಲೆಯಲ್ಲಾಡಿಸುತ್ತಾ ಖಂಡತುಂಡವಾಗಿ ಹೇಳಿಬಿಟ್ಟಿದ್ದಾರೆ.

ಅಷ್ಟೇ ಅಲ್ಲ… ಈ ಸಂದರ್ಭದಲ್ಲಿಯೇ ಅಜಿಂಕ್ಯ ರಹಾನೆ ತಮ್ಮ ಮೆಚ್ಯುರಿಟಿ ತೋರಿದ್ದಾರೆ. ಗಮನಿಸಿ.. ಈ ಕಡೆಯಿಂದ ಅಭಿಮಾನಿಯೊಬ್ಬ ಭಾರತದ ಬಾವುಟವನ್ನು ಉಂಡೆ ಮಾಡಿ ಹಾಕಿದ್ದ. ಆದರೆ ಅದರ ಮೇಲೆ ಸಹಿ ಹಾಕುವುದನ್ನು ನಿರಾಕರಿಸುತ್ತಾ.. ಅಜಿಂಕ್ಯ ರಹಾನೆ ಏನು ಮಾಡಿದರು ಗೊತ್ತಾ.. ಅತ್ಯಂತ ಗೌರವ, ಆದರಣೆಯಿಂದ ಬಾವುಟವನ್ನು ನಾಜೂಕಾಗಿ ಸುತ್ತಿ.. ಅಭಿಮಾನಿ ಎಸೆದಂತೆ ಬಿಸಾಕದೆ ಅದನ್ನು ಆತನ ಕೈಗೆ ತಲುಪಿಸುತ್ತಾರೆ. ಜೊತೆಗೆ ಹಂಗೆಲ್ಲಾ ಬಾವುಟದ ವಿಷಯದಲ್ಲಿ ಅನಾದರಣೆ ಸಲ್ಲ ಎಂದೂ ಕಿವಿಮಾತು ಹೇಳುತ್ತಾರೆ. ಇದನ್ನು ವಿಡಿಯೋದಲ್ಲಿ ನೋಡಿದ ಮಂದಿ ಅಜಿಂಕ್ಯ ರಹಾನೆ ಮತ್ತು ರಾಷ್ಟ್ರಧ್ವಜಕ್ಕೆ ಸಲಾಂ ಸಲಾಂ ಅನ್ನುತ್ತಿದ್ದಾರೆ ಈಗ.

ಇದನ್ನೂ ಓದಿ: ICC Rankings: T20 ರ‍್ಯಾಂಕಿಂಗ್​ನಲ್ಲಿ 4ನೇ ಸ್ಥಾನಕ್ಕೇರಿದ ಕಿಂಗ್​ ಕೊಹ್ಲಿ.. ಮತ್ತೆ ಕುಸಿತ ಕಂಡ ಕನ್ನಡಿಗ ಕೆ. ಎಲ್​ ರಾಹುಲ್!

Published On - 3:40 pm, Wed, 24 March 21

ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ