ಮುಂಬೈ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಪ್ರಕರಣ: ಘಟನೆಯ ಸೂತ್ರಧಾರ ಸಚಿನ್ ವಾಜೆ ಎಂದು ಶಂಕೆ, ಸಿಸಿಟಿವಿ ಚಿತ್ರಣಗಳು ಏನು ಹೇಳುತ್ತಿವೆ?

ಕಾರ್​ನ್ನು ಆ್ಯಂಟೀಲಿಯಾ ಬಳಿ ಇಡುವ ಇಡೀ ಘಟನೆಯನ್ನು ಸ್ವತಃ ಸಚಿನ್ ವಾಜೆ ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಮುಲುಂದ್ ಟೋಲ್ ಕಲೆಕ್ಷನ್ ಪಾಯಿಂಟ್​ನಿಂದ ಸಂಗ್ರಹಿಸಿದ ಸಿಸಿಟಿವಿ ಫೂಟೇಜ್​ನ್ನು ರಾಷ್ಟ್ರೀಯ ತನಿಖಾ ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಮುಂಬೈ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಪ್ರಕರಣ: ಘಟನೆಯ ಸೂತ್ರಧಾರ ಸಚಿನ್ ವಾಜೆ ಎಂದು ಶಂಕೆ, ಸಿಸಿಟಿವಿ ಚಿತ್ರಣಗಳು ಏನು ಹೇಳುತ್ತಿವೆ?
ಸಚಿನ್ ವಾಜೆ
Follow us
TV9 Web
| Updated By: ganapathi bhat

Updated on:Apr 05, 2022 | 1:15 PM

ಮುಂಬೈ: ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮನೆ ಮುಂದೆ ಜಿಲೆಟಿನ್ ಪತ್ತೆ ಪ್ರಕರಣ ಹಾಗೂ ಸ್ಫೋಟಕ ಪತ್ತೆಯಾದ ಎಸ್​ಯುವಿ ಕಾರ್ ಮಾಲೀಕ/ ನಿರ್ವಹಣೆ ಹೊಣೆ ಹೊತ್ತಿದ್ದ ಉದ್ಯಮಿ ಮನ್​ಸುಖ್ ಹಿರೇನ್ ಸಾವಿಗೆ ಸಂಬಂಧಿಸಿ ಅಮಾನತು ಆಗಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಮೇಲೆ ರಾಷ್ಟ್ರೀಯ ತನಿಖಾ ದಳ ಮತ್ತೊಂದು ಅನುಮಾನ ವ್ಯಕ್ತಪಡಿಸಿದೆ. ಫೆಬ್ರವರಿ 25ರಂದು ಅಂಬಾನಿ ಮನೆ ಮುಂದೆ ಪತ್ತೆಯಾದ ಕಾರ್​ನಲ್ಲಿ ಸಿಕ್ಕಿದ್ದ ಬೆದರಿಕೆ ಪತ್ರವನ್ನು ಸಚಿನ್ ವಾಜೆ ಇಟ್ಟಿದ್ದಾರೆ ಎಂದು ಎನ್​ಐಎ ಶಂಕಿಸಿದೆ.

ಕಾರ್​ನ್ನು ಆ್ಯಂಟೀಲಿಯಾ ಬಳಿ ಇಡುವ ಇಡೀ ಘಟನೆಯನ್ನು ಸ್ವತಃ ಸಚಿನ್ ವಾಜೆ ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಮುಲುಂದ್ ಟೋಲ್ ಕಲೆಕ್ಷನ್ ಪಾಯಿಂಟ್​ನಿಂದ ಸಂಗ್ರಹಿಸಿದ ಸಿಸಿಟಿವಿ ಫೂಟೇಜ್​ನ್ನು ರಾಷ್ಟ್ರೀಯ ತನಿಖಾ ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಮುಂಬೈ ಕ್ರೈಂ ಇಂಟೆಲಿಜೆನ್ಸ್ ಯುನಿಟ್​ನಲ್ಲಿ ವಾಜೆ ಕೆಳಗೆ ಕೆಲಸ ಮಾಡುವ ಕಾನ್​ಸ್ಟೇಬಲ್ ಒಬ್ಬಾತ ಈ ಘಟನೆಯಲ್ಲಿ ಭಾಗಿಯಾಗಿದ್ದಾನೆ. ಸ್ಕಾರ್ಪಿಯೋ ಕಾರ್ ಡ್ರೈವರ್ ಕೆಲಸ ಮುಗಿಸಿ, ಇನ್ನೋವಾ ಕಾರ್​ನಲ್ಲಿ ತೆರಳಿದ್ದಾನೆ ಎಂದು ತಿಳಿದುಬಂದಿದೆ. ಸಚಿನ್ ವಾಜೆ ತನ್ನ ಥಾಣೆ ನಿವಾಸದಿಂದ ಈ ಕೆಲಸಗಳನ್ನು ಸಂಯೋಜಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

CCTV ಫೂಟೇಜ್​ನಲ್ಲಿ ಏನಿದೆ? ಸಿಸಿಟಿವಿ ಫೂಟೇಜ್ ಮೂಲಕ ತಿಳಿದುಬಂದಂತೆ, ಸುಮಾರು 3.27 AM ಹೊತ್ತಿಗೆ ಇನ್ನೋವಾ ಕಾರ್ ಮುಲುಂದ್ ಮೂಲಕವಾಗಿ ಥಾಣೆ ಪ್ರವೇಶಿಸಿದೆ. ಕಾರ್​ನ ಒಳಗೆ ಇಬ್ಬರು ಇರುವುದು ತಿಳಿದುಬಂದಿದೆ. ಅರ್ಧ ಘಂಟೆ ಬಳಿಕ, ಅಂದರೆ ಸುಮಾರು 4.03 AM ವೇಳೆಗೆ ಇನ್ನೋವಾ ಕಾರ್ ಮತ್ತೆ ಮುಂಬೈ ಪ್ರವೇಶಿಸಿರುವುದು ಕಂಡುಬಂದಿದೆ. ಆದರೆ ಈ ಬಾರಿ, ವಾಜೆ ಕಳೆದ ಒಂದು ತಿಂಗಳಿನಿಂದ ತನ್ನ ಕಚೇರಿಗೆ ತೆರಳಲು ಬಳಸುತ್ತಿದ್ದ ಕಾರ್​ನ ನಂಬರ್ ಪ್ಲೇಟ್​ನ್ನು ಈ ಕಾರ್ ಹೊಂದಿತ್ತು. ಹಾಗೂ ಮರಳುವ ವೇಳೆ ಇಬ್ಬರಿಗಿಂತ ಹೆಚ್ಚು ಪ್ರಯಾಣಿಕರು ಕಾರ್​ನಲ್ಲಿ ಇದ್ದರು. ಮೂರನೇ ವ್ಯಕ್ತಿಯನ್ನು ವಾಜೆ ಎಂದು ಶಂಕಿಸಲಾಗಿದೆ. ಎಲ್ಲರೂ ಫೇಸ್ ಶೀಲ್ಡ್ ಧರಿಸಿಕೊಂಡಿದ್ದರಿಂದ ಫೂಟೇಜ್​ನಲ್ಲಿ ಮುಖ ಸ್ಪಷ್ಟವಾಗಿ ಕಾಣಿಸಿಲ್ಲ.

ಅಂಬಾನಿ ಮನೆ ಮುಂದೆ ಪಾರ್ಕ್ ಮಾಡಲಾಗಿದ್ದ ಕಾರ್ ಕನಿಷ್ಠ 10 ನಿಮಿಷ ಅಲ್ಲೇ ನಿಂತಿತ್ತು. ಆ ವೇಳೆ ವಾಜೆ ಕೂಡ ಅಲ್ಲೇ ಇದ್ದರು ಎಂದು ತಿಳಿದುಬಂದಿದೆ. 5.18 AM ವೇಳೆಗೆ ಮುಲುಂದ್ ಟೋಲ್​ನಲ್ಲಿ ಇನ್ನೋವಾ ಕಾರ್ ಮತ್ತೆ ಥಾಣೆ ಪ್ರವೇಶಿಸುತ್ತಿರುವುದು ಕಂಡಿದ್ದು, ವಾಜೆಯನ್ನು ಮನೆಗೆ ಡ್ರಾಪ್ ಮಾಡಲು ತೆರಳಿರಬಹುದು ಎಂದು ಅಂದಾಜಿಸಲಾಗಿದೆ.

ಇನ್ನೋವಾ ಕಾರ್​ಗೆ ಬಳಸಿದ್ದ ನಕಲಿ ನಂಬರ್ ಪ್ಲೇಟನ್ನು ವಾಜೆಯ ಸಹಾಯಕ ಪೊಲೀಸ್ ಅಧಿಕಾರಿ ರಿಯಾಜುದ್ದೀನ್ ಕಾಜಿ ವಿಖ್ರೋಲಿ ಶಾಪ್​ನಲ್ಲಿ ಮಾಡಿಸಿದ್ದಾರೆ ಎಂದು ಅನುಮಾನವಿದೆ. ಆ ಸಿಸಿಟಿವಿ ಫೂಟೇಜ್​ನ್ನು ಕೂಡ ಪೊಲೀಸರು ಸಂಗ್ರಹಿಸಿದ್ದಾರೆ. ಮನ್​ಸುಖ್ ಹಿರೇನ್ ಪ್ರಕರಣದಲ್ಲಿ ಬಂಧಿತ ಪೇದೆ ವಿನಾಯಕ್ ಶಿಂಧೆ ಅವರನ್ನೂ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ಸುಳ್ಳು ಹೆಸರು, ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ಸಚಿನ್ ವಾಜೆ ಪಂಚತಾರಾ ಹೊಟೇಲ್​ನಲ್ಲಿ ಉಳಿದಿದ್ದರು; ಎನ್​ಐಎ ಆರೋಪ

ವ್ಯಕ್ತಿ ವ್ಯಕ್ತಿತ್ವ: ಹಿಂದೂ ಮುಸ್ಲಿಂ ಸಾಮರಸ್ಯ, ಸೈಬರ್ ಕ್ರೈಂ ಪತ್ತೆಹಚ್ಚುವಲ್ಲಿ ಏಷ್ಯಾಕ್ಕೇ ಪ್ರಥಮ; ಸಚಿನ್ ವಾಜೆಯ ವೈವಿಧ್ಯಮಯ ವ್ಯಕ್ತಿತ್ವ

Published On - 3:50 pm, Wed, 24 March 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ