AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಸೆಮಣೆ ಏರಬೇಕಿದ್ದ ದಿನವೇ ಇಬ್ಬರು ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ

Jodhpur sisters commit suicide on their wedding day: ರಾಜಸ್ಥಾನದ ಜೋಧಪುರ್ ಜಿಲ್ಲೆಯ ಮನಾಯ್ ಎನ್ನುವ ಗ್ರಾಮದ ಇಬ್ಬರು ಯುವತಿಯರು ಮದುವೆ ದಿನವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೋಭಾ ಮತ್ತು ವಿಮಲಾ ಮೃತರಾಗಿದ್ದು, ಇಬ್ಬರೂ ಕೂಡ ಸಹೋದರಿಯರು. ಶನಿವಾರ ಬೆಳಗ್ಗೆ ಅವರಿಬ್ಬರ ಮದುವೆ ಇತ್ತು. ಶುಕ್ರವಾರ ಮಧ್ಯರಾತ್ರಿ ಅವರು ವಿಷ ಸೇವಿಸಿ ಸಾವನ್ನಪ್ಪಿರುವ ಸಾಧ್ಯತೆ ಇದೆ. ಆದರೆ, ಕಾರಣ ಏನೆಂದು ಗೊತ್ತಾಗಿಲ್ಲ.

ಹಸೆಮಣೆ ಏರಬೇಕಿದ್ದ ದಿನವೇ ಇಬ್ಬರು ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 22, 2026 | 5:27 PM

Share

ನವದೆಹಲಿ, ಫೆಬ್ರುವರಿ 22: ಇಬ್ಬರು ಹೆಣ್ಮಕ್ಕಳ ಮದುವೆ ಸಂಭ್ರಮದಲ್ಲಿದ್ದ ಮನೆಗೆ ದಿಢೀರನೇ ಸೂತಕದ ಛಾಯೆ ಒತ್ತರಿಸಿಬಂತು. ರಾಜಸ್ಥಾನದ ಗ್ರಾಮವೊಂದರಲ್ಲಿ ಒಂದೇ ದಿನದಂದು ಮದುವೆಯಾಗಬೇಕಿದ್ದ ಇಬ್ಬರು ಸಹೋದರಿಯರು ಮಸಣಕ್ಕೆ ಸೇರಬೇಕಾದ ಘಟನೆ ನಡೆದಿದೆ. ಜೋಧಪುರದ ಮನಾಯ್ ಎನ್ನುವ ಗ್ರಾಮದಲ್ಲಿ ಸಹೋದರಿಯರಾದ ಶೋಭಾ (25) ಮತ್ತು ವಿಮಲಾ (23) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್​ಡಿಟಿವಿ ವಾಹಿನಿಯಲ್ಲಿ ವರದಿಯಾಗಿದೆ.

ಈ ಇಬ್ಬರು ಅಕ್ಕ ತಂಗಿಯರು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಶನಿವಾರ (ಫೆ. 21) ಇಬ್ಬರದ್ದೂ ಮದುವೆ ಕಾರ್ಯಕ್ರಮ ಇತ್ತು. ಶುಕ್ರವಾರ ರಾತ್ರಿ ವಿವಾಹ ಕಾರ್ಯಕ್ರಮಗಳು ಸಂಭ್ರಮದಿಂದಲೇ ನಡೆದಿದ್ದವು. ಈ ಇಬ್ಬರೂ ಸಹೋದರಿಯರು ಮಧ್ಯರಾತ್ರಿ ಮಲಗಿಕೊಂಡಿದ್ದಾರೆ. ಬೆಳಗಿನ ಜಾಗ 4 ಗಂಟೆಗೆ ಇವರ ಆರೋಗ್ಯದಲ್ಲಿ ಏರುಪೇರಾಗುವುದನ್ನು ಇತರರು ಗಮನಿಸಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ಸೇರಿಸಿದ್ದಾರೆ. ಅಷ್ಟರಲ್ಲಿ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿದೆ.

ಮದುವೆಗೆ ಸಾಕ್ಷಿಯಾಗಬೇಕಿದ್ದ ಅವರ ಕುಟುಂಬ ಅಂತ್ಯಕ್ರಿಯೆಗೆ ಅಣಿಗೊಳ್ಳಬೇಕಾಯಿತು. ಆಸ್ಪತ್ರೆಯಿಂದ ಈ ಹೆಣ್ಮಕ್ಕಳ ಶವವನ್ನು ಮನೆಗೆ ವಾಪಸ್ ತೆಗೆದುಕೊಂಡು, ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗಿತ್ತು. ಪೊಲೀಸರಿಗೆ ಇದು ಆತ್ಮಹತ್ಯೆ ಎನ್ನುವ ಮಾಹಿತಿ ತಿಳಿದು ಸ್ಥಳಕ್ಕೆ ಹೋಗಿ, ಅಂತ್ಯಕ್ರಿಯೆ ನಿಲ್ಲಿಸಿ, ದೇಹಗಳನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಿಕೊಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ಮರಳಿಸಲಾಗಿದೆ.

ಇದನ್ನೂ ಓದಿ: Love Tragedy: ಕ್ಷುಲ್ಲಕ ಕಾರಣಕ್ಕೆ ಜಗಳ; ಪ್ರೇಯಸಿ ಸಾವನ್ನಪ್ಪಿದ ಬೆನ್ನಲ್ಲೇ ವಿಷ ಕುಡಿದು ನೇಣಿಗೆ ಶರಣಾದ ಟೆಕ್ಕಿ

ಈ ಇಬ್ಬರು ಅಕ್ಕ ತಂಗಿಯರ ಸಾವಿಗೆ ವಿಷ ಪದಾರ್ಥಗಳ ಸೇವನೆ ಕಾರಣ ಎನ್ನಲಾಗಿದೆ. ಆದರೆ, ಅವರು ಆತ್ಮಹತ್ಯೆ ಮಾಡಿಕೊಳ್ಳಲು ಏನು ಕಾರಣ ಎಂಬುದು ಗೊತ್ತಾಗಿಲ್ಲ. ಇಬ್ಬರೂ ಕೂಡ ಯಾವುದೇ ಸೂಸೈಡ್ ನೋಟ್ ಬರೆದಿಟ್ಟಿರುವುದು ಗೊತ್ತಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ