20 ವಿದೇಶಿ ತಳಿಯ ಶ್ವಾನಗಳ ಪಾಲನೆ: ಬೀದರ್ ರಾಜಕಾರಣಿಯ ಶ್ವಾನ ಪ್ರೀತಿ ಇತರರಿಗೆ ಮಾದರಿ
ಸಂಜಯ್ ಖೇಣಿ ನಾಯಿಗಳಿಗೆ ಆಹಾರ ನೀರು ಮತ್ತು ಅವುಗಳ ಆರೈಕೆ ಮಾಡಲು ದಿನದಲ್ಲಿ ಕೆಲವು ಗಂಟೆ ಮೀಸಲಿಟ್ಟಿದ್ದಾರತೆ. ಜೊತೆಗೆ ಬೇರೇ ಬೇರೆ ಜಿಲ್ಲೆಗಳಲ್ಲಿ ನಡೆಯುವ ಶ್ವಾನ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಯನ್ನ ಬಾಚಿಕೊಂಡಿದ್ದಾರೆ.
ಬೀದರ್: ಮಾನವನಿಗೆ ಅತ್ಯಂತ ಪ್ರೀತಿ ಪಾತ್ರವಾಗಿರುವ ಪ್ರಾಣಿ ಎಂದರೆ ಅದು ಶ್ವಾನಗಳು. ನಾಯಿಗಳು ಅತ್ಯಂತ ಪ್ರಾಮಾಣಿಕ ಪ್ರಾಣಿಗಳು ಎಂತಲೇ ಕರೆಸಿಕೊಳ್ಳುತ್ತವೆ. ಇದೀಗ ರಾಜಕಾರಣಿಯೊಬ್ಬರು ವಿದೇಶಿಯ ವಿವಿಧ ಜಾತಿಯ ನಾಯಿಗಳನ್ನು ತಮ್ಮ ಮನೆ ಮಕ್ಕಳಂತೆ ಸಾಕಿ ಸಲಹುತ್ತಿದ್ದು ಈ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ.
ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಸೀತಾಳಗೇರಾ ಗ್ರಾಮದ ಸಂಜಯ್ ಖೇಣಿ ವೃತ್ತಿಯಲ್ಲಿ ರಾಜಕಾರಣಿಯಾಗಿದ್ದು, ತಮ್ಮ ಮನೆಯಲ್ಲಿಯೇ ಲಕ್ಷ ಲಕ್ಷ ರೂಪಾಯಿ ಬೆಲೆ ಬಾಳುವ ವಿದೇಶದ ನಾಯಿಗಳನ್ನು ಸಾಕಿದ್ದಾರೆ. ಪ್ರತಿ ತಿಂಗಳು ಈ ನಾಯಿಗಳ ಆಹಾರಕ್ಕೆ ಒಂದು ಲಕ್ಷ ರೂಪಾಯಿ ಖರ್ಚಾಗುತ್ತದೆ. ಕೃಷಿಕರಾಗಿರುವ ಸಂಜಯ್ ಖೇಣಿ ವಿವಿಧ ತಳಿಯ 20ಕ್ಕೂ ಅಧಿಕ ನಾಯಿ ಮರಿಗಳನ್ನು ತಮ್ಮ ಫಾರ್ಮ್ ಹೌಸ್ನಲ್ಲಿ ಸಾಕುತ್ತಿದ್ದಾರೆ.
ಮಾರಾಟದ ಉದ್ದೇಶ ಹೊಂದಿರದ ಸಂಜಯ್ ನಾಯಿ ಮರಿಗಳೊಂದಿಗೆ ಕಾಲ ಕಳೆಯುತ್ತಿದ್ದು, ಸದಾ ಒತ್ತಡದ ಬದುಕಿನಲ್ಲಿ ಕಾಲ ಕಳೆಯುವುದರಿಂದ ನೆಮ್ಮದಿಯ ಸುಂದರ ಬದುಕಿಗೆ ಶ್ವಾನ ಸಾಕಾಣಿಕೆ ನೆರವಾಗಿದೆ ಎಂದು ಹೇಳಿದ್ದಾರೆ. ಇವರ ಬಳಿ ಕೆನೆಕ್ವಾರ್ಸ್, ರಾಟ್ ವ್ಹೀಲರ್, ನಿಯೋ ಪಾಲಿಟನ್ ಮಾಸ್ಟ್ರಿಫ್, ಅಮೆರಿಕನ್ ಬುಲ್, ಡೋಗೊ ಅರ್ಜೆಂಟೀನಾ, ಬೊರ್ ವೆಲ್, ಟರ್ಕಿಸ್ ಕಂಗಾಲ್, ಫಿಲಾ ಬೇರ್ಜಿಲೋ, ಜರ್ಮನ್ ಶೆಫರ್ಡ್, ಗೋಲ್ಡನ್ ರೀಟ್ಟೀಮ್ ಹೀಗೆ ವಿದೇಶಿ ತಳಿಯ 20 ಕ್ಕೂ ಹೆಚ್ಚು ಶ್ವಾನ ತಳಿ ಇವೆ.
ಮುದ್ದಿನ ನಾಯಿಗಳು ಸೆಕ್ಯುರಿಟಿ ಗಾರ್ಡ್ಗಳಾಗಿದ್ದು, ತಮ್ಮ ಜಮೀನಿನ ರಕ್ಷಣೆಗೂ ಸಹ ನಾಯಿಗಳನ್ನು ಬಳಸುತ್ತಿದ್ದಾರೆ. ಬೆಂಗಳೂರು, ಗೋವಾ, ಪುದುಚೇರಿ, ಚೆನ್ನೈ ಕೊಯಮತ್ತೂರುಗಳಿಂದ ನಾಯಿ ಮರಿಗಳನ್ನು ತರಿಸಿದ್ದು, ಶ್ವಾನಗಳ ಪಾಲನೆಗಾಗಿ ಕೆಲಸಗಾರರನ್ನು ನೇಮಕ ಮಾಡಲಾಗಿದೆ. ಒಂದೂವರೆ ತಿಂಗಳ ಮರಿಯಿಂದ, 2 ವರ್ಷದವರೆಗಿನ ನಾಯಿಯನ್ನು ಅವರು ಸಾಕುತ್ತಿದ್ದು, ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ.
ಇನ್ನು ಸಂಜಯ್ ಖೇಣಿ ನಾಯಿಗಳಿಗೆ ಆಹಾರ ನೀರು ಮತ್ತು ಅವುಗಳ ಆರೈಕೆ ಮಾಡಲು ದಿನದಲ್ಲಿ ಕೆಲವು ಗಂಟೆ ಮೀಸಲಿಟ್ಟಿದ್ದಾರತೆ. ಜೊತೆಗೆ ಬೇರೇ ಬೇರೆ ಜಿಲ್ಲೆಗಳಲ್ಲಿ ನಡೆಯುವ ಶ್ವಾನ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಯನ್ನ ಬಾಚಿಕೊಂಡಿದ್ದಾರೆ. ಇನ್ನೂ ಇವರ ಶ್ವಾನ ಸಾಕುವುದರ ಹಿಂದಿನ ಕಾರಣ ಬಹಳ ಕುತೂಹಲಕಾರಿಯಾಗಿದೆ.
ಇವರ ಬಳಿಯಿರುವ ನಾಯಿಗಳ ಅಂತಿಥಾ ಶ್ವಾನಗಳಲ್ಲ ನೋಡಲು ಆಕರ್ಷಕವಾಗಿದ್ದು, ದೈತ್ಯದೇಹವನ್ನ ಹೊಂದಿವೆ. ಸಂಜಯ್ ಖೇಣಿ ಬಳಿ ಇರುವ ನಾಯಿಗಳು ವಿದೇಶದಲ್ಲಿ ಕುರಿಗಳನ್ನು ಕಾಯಲು ಬಳಕೆ ಮಾಡುತ್ತಾರೆ. ಎರಡು ನಾಯಿಗಳು ಸೇರಿದರೆ ಕಾಡು ಪ್ರಾಣಿಯನ್ನಾದರು ಕೊಲ್ಲದೇ ಬಿಡುವುದಿಲ್ಲ. ಅಷ್ಟು ಶಕ್ತಿಯ ಬುದ್ಧಿವಂತ ನಾಯಿಗಳು ಇವಾಗಿದ್ದು, ಒಂದು ನಾಯಿ ಮರಿ ಕನಿಷ್ಟವೆಂದರೂ ಎರಡರಿಂದ ಮೂರು ಲಕ್ಷ ರೂಪಾಯಿ ಬೆಲೆ ಬಾಳುತ್ತವೆ. ಇನ್ನೂ ಇವುಗಳ ಆಹಾರ ಪದ್ಧತಿಯನ್ನು ಗಮನಿಸುವುದಾದರೆ ಒಂದು ನಾಯಿ ಮೂರರಿಂದ ನಾಲ್ಕು ಕೇಜಿಯಷ್ಟಾದರೂ ಮಾಂಸ ತಿನ್ನುತ್ತದೆ.
ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ತಮ್ಮ ಮನೆಯ ಮಕ್ಕಳಂತೆ ಸಾಕಿ ಸಲುಹುತ್ತಿದ್ದಾರೆ ಸಂಜಯ್ ಖೇಣಿ . ಇವರ ಬಳಿ ನೂರಾರು ಎಕರೆಯಷ್ಟೂ ಜಮೀನಿದ್ದು, ಅದರಿಂದ ಬರುವ ಆದಾಯದಲ್ಲಿಯೇ ನಾಯಿಗಳನ್ನ ಸಾಕುತ್ತಿದ್ದಾರೆ. ಇನ್ನೂ ಈ ನಾಯಿಗಳ ಆರೋಗ್ಯದ ಬಗ್ಗೆ ತಪಾಸಣೆ ಮಾಡಲು ಓರ್ವ ವೈದ್ಯರನ್ನೂ ಸಹ ನೇಮಕ ಮಾಡಿದ್ದು, ಅವರು ಆಗಾಗ ಬಂದು ನಾಯಿಗಳ ಆರೋಗ್ಯ ತಪಾಸಣೆ ಮಾಡಿ ಹೋಗುತ್ತಾರೆ.
ಇದನ್ನೂ ಓದಿ: ಉಡುಪಿಯಲ್ಲೊಂದು ಚಿಕ್ಕ ಪ್ರಾಣಿ ಸಂಗ್ರಹಾಲಯ: ಮಾಜಿ ಸೈನಿಕನ ಮನೆಯಲ್ಲಿದೆ ಅಪರೂಪ ತಳಿಯ ಶ್ವಾನಗಳು