Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಸರಿ, ತಪ್ಪು ಬಗ್ಗೆ ಕೋರ್ಟ್ ಹೇಳುತ್ತೆ.. ಆದ್ರೆ ಅಷ್ಟರೊಳಗೆ ಅವರ ತೇಜೋವಧೆ ಆಗಿಹೋಗುತ್ತೆ -ಜೆ.ಸಿ.ಮಾಧುಸ್ವಾಮಿ

ರಮೇಶ್ ಜಾರಕಿಹೊಳಿ ವಿಚಾರದಲ್ಲಿ ತಪ್ಪು ಸರಿ ಎಂಬುದನ್ನ ಕೋರ್ಟ್ ಹೇಳುತ್ತದೆ. ಆದ್ರೆ ಅಷ್ಟರಲ್ಲಿ ಅವರ ತೇಜೋವಧೆ ಆಗಿ ಹೋಗಿರುತ್ತದೆ. ಈ ಕಾರಣಕ್ಕಾಗಿಯೇ ಕೆಲ ಸಚಿವರು ಕೋರ್ಟ್ ಮೊರೆ ಹೋಗಿ ಮಾಧ್ಯಮಗಳಲ್ಲಿ ಪ್ರಸಾರ ಆಗದಂತೆ ತಡೆ ತರುತ್ತಿದ್ದಾರೆ. ತೇಜೋವಧೆ ತಡೆಯಲು ಇಂತಹ ಪ್ರಯತ್ನ ನಡೆಯುತ್ತಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ರು.

ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಸರಿ, ತಪ್ಪು ಬಗ್ಗೆ ಕೋರ್ಟ್ ಹೇಳುತ್ತೆ.. ಆದ್ರೆ ಅಷ್ಟರೊಳಗೆ ಅವರ ತೇಜೋವಧೆ ಆಗಿಹೋಗುತ್ತೆ -ಜೆ.ಸಿ.ಮಾಧುಸ್ವಾಮಿ
ಸಚಿವ ಜೆ.ಸಿ.ಮಾಧುಸ್ವಾಮಿ
Follow us
ಆಯೇಷಾ ಬಾನು
|

Updated on: Mar 07, 2021 | 11:40 AM

ದಾವಣಗೆರೆ: ರಮೇಶ್ ಜಾರಕಿಹೊಳಿ ಸೆಕ್ಸ್ CD ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ಈ ಪ್ರಕರಣದಲ್ಲಿ ಸರಿ, ತಪ್ಪು ಬಗ್ಗೆ ಕೋರ್ಟ್ ಹೇಳುತ್ತೆ. ಆದರೆ ಅಷ್ಟರೊಳಗೆ ಅವರ ತೇಜೋವಧೆ ಆಗಿಹೋಗುತ್ತೆ ಎಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ರು.

ಇನ್ನು ಮಾತು ಮುಂದುವರೆಸಿದ ಅವರು “ಜಾರಕಿಹೊಳಿ ಅವರ ವಿಚಾರದಲ್ಲಿ ಸಂತ್ರಸ್ಥೆ ಬಂದು ದೂರು ನೀಡಿಲ್ಲ ಎಂಬ ವಿಚಾರ ಚರ್ಚೆ ಆಗುತ್ತದೆ. ಈ ಹಿಂದೆ ಸುಪ್ರೀಂ ಕೋರ್ಟ್ ಒಂದು ತೀರ್ಪು ನೀಡಿತ್ತು. ಯಾವುದೇ ಆರೋಪ ಇದ್ರೆ ಅದರ ಬಗ್ಗೆ ಬೇಕಾದವರು ದೂರು ಸಲ್ಲಿಸಬಹುದು ಎಂದು. ಅದನ್ನ ಬಳಕೆ ಮಾಡಿಕೊಂಡು ಮೂರನೇ ವ್ಯಕ್ತಿಗಳು ದೂರು ನೀಡುತ್ತಿದ್ದಾರೆ. ಇಲ್ಲವಾದ್ರೆ ಕೇಸ್​ಗೆ ಸಂಬಂಧಿಸಿದವರು ಮಾತ್ರ ದೂರು ನೀಡಬೇಕು. ಇಂತಹ ವಿಚಾರಕ್ಕೆ ಸಂಬಂಧಿಸಿ 25 ಕ್ಕೂ ಹೆಚ್ಚು ಸಚಿವರು ಕೋರ್ಟ್ ಮೊರೆ ಹೋಗುತ್ತಿದ್ದಾರೆ ಎಂಬ ವಿಚಾರ ನನಗೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ನೈತಿಕತೆ ಬಗ್ಗೆ ಹೆಚ್ಚು ಆದ್ಯತೆ. ನಾನು ಈ ಪ್ರಕರಣಕ್ಕೆ ಉತ್ತರಿಸಿದರೂ ಒಂದು ಮಾತು ಬರುತ್ತದೆ. ಉತ್ತರಿಸುತ್ತಿದ್ದರೂ ಒಂದು ಮಾತು ಬರುತ್ತದೆ. ನನ್ನದು ಅಂತಹ ಯಾವುದೇ ಸಿಡಿಗಳು ಇಲ್ಲ ಎಂದು ಮಾಧುಸ್ವಾಮಿ ನಗೆ ಚಟಾಕಿ ಹಾರಿಸಿದ್ರು.

ರಮೇಶ್ ಜಾರಕಿಹೊಳಿ ವಿಚಾರದಲ್ಲಿ ತಪ್ಪು ಸರಿ ಎಂಬುದನ್ನ ಕೋರ್ಟ್ ಹೇಳುತ್ತದೆ. ಆದ್ರೆ ಅಷ್ಟರಲ್ಲಿ ಅವರ ತೇಜೋವಧೆ ಆಗಿ ಹೋಗಿರುತ್ತದೆ. ಈ ಕಾರಣಕ್ಕಾಗಿಯೇ ಕೆಲ ಸಚಿವರು ಕೋರ್ಟ್ ಮೊರೆ ಹೋಗಿ ಮಾಧ್ಯಮಗಳಲ್ಲಿ ಪ್ರಸಾರ ಆಗದಂತೆ ತಡೆ ತರುತ್ತಿದ್ದಾರೆ. ತೇಜೋವಧೆ ತಡೆಯಲು ಇಂತಹ ಪ್ರಯತ್ನ ನಡೆಯುತ್ತಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ರು.

ಇನ್ನು ಹರಿಹರದ ಬಳಿ ಇರುವ ಪಂಚಮಸಾಲಿ ಪೀಠಕ್ಕೆ ಆಗಮಿಸಿದ್ದ ಸಚಿವ ಮಾಧುಸ್ವಾಮಿ, ಶ್ರೀ ವಚನಾನಂದ ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾತುಕಥೆ ನಡೆಸಿದ್ದಾರೆ. ಸಚಿವ ಮಾದುಸ್ವಾಮಿಗೆ ಶಾಲು ಹಾರ ಹಾಕಿ ಶ್ರೀಗಳು ಗೌರವಿಸಿದ್ದು ಸ್ವಾಮೀಜಿಗಳ ಜೊತೆ ಮಾಜಿ ಸಚಿವ ಸೊಗಡು ಶಿವಣ್ಣ ಕೂಡ ಗೌಪ್ಯವಾಗಿ ಮಾತುಕಥೆ ನಡೆಸಿದ್ರು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಲೇಡಿಯ ಬೆನ್ನಟ್ಟಿದ ಪೊಲೀಸರಿಗೆ ಸಿಕ್ತಾ ಮಹತ್ತರ ಸುಳಿವು?

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ