ಜನೌಷಧ ದಿನಾಚರಣೆ: ಮಂಗಳೂರು ವೈದ್ಯ ಡಾ. ಪದ್ಮನಾಭ್ ಕಾಮತ್ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತು

ಜನೌಷಧಿ ಕೇಂದ್ರದಲ್ಲಿ ಇಸಿಜಿ ಆರಂಭಿಸಿದ್ದಕ್ಕೆ ಮೋದಿ‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನಮ್ಮ ಕಲ್ಪನೆಯ ಮೂರ್ತ ರೂಪ ನೀವು ಮಾಡಿತೋರಿಸಿದ್ದೀರಿ ಎಂದು ಮೋದಿ ಮಾತನಾಡಿದ್ದಾರೆ.

ಜನೌಷಧ ದಿನಾಚರಣೆ: ಮಂಗಳೂರು ವೈದ್ಯ ಡಾ. ಪದ್ಮನಾಭ್ ಕಾಮತ್ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತು
ಪ್ರಧಾನಿ ನರೇಂದ್ರ ಮೋದಿ (ಎಡ), ಡಾ. ಪದ್ಮನಾಭ ಕಾಮತ್ (ಬಲ)
Follow us
ganapathi bhat
|

Updated on:Mar 07, 2021 | 11:56 AM

ಉಡುಪಿ: ಜನೌಷಧ ದಿನಾಚರಣೆ ಪ್ರಯುಕ್ತ ಇಂದು (ಮಾರ್ಚ್ 7) ದೇಶದ ನಾಲ್ಕು ಭಾಗಗಳ ಜನೌಷಧ ಕೇಂದ್ರದ ಮಾಲೀಕರು ಮತ್ತು ಫಲಾನುಭವಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಸಂವಾದದಲ್ಲಿ, ಮಂಗಳೂರಿನ ಖ್ಯಾತ ವೈದ್ಯ ಡಾ. ಪದ್ಮನಾಭ ಕಾಮತ್ ಭಾಗವಹಿಸಿದರು. ಜನೌಷಧಿ ಕೇಂದ್ರಗಳನ್ನು ಪ್ರೋತ್ಸಾಹಿಸುತ್ತಿರುವ ವೈದ್ಯ ಡಾಕ್ಟರ್ ಪದ್ಮನಾಭ ಕಾಮತ್ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಸಂವಾದದಲ್ಲಿ ಮಾತನಾಡಿದ ಮಂಗಳೂರಿನ ಖ್ಯಾತ ಹೃದಯ ವೈದ್ಯ ಡಾ. ಪದ್ಮನಾಭ ಕಾಮತ್, ಮೂರು ವರ್ಷದಿಂದ ಜನೌಷಧಿ ಅಭಿಯಾನದಲ್ಲಿ ಭಾಗಿಯಾಗಿದ್ದೇನೆ. ಗ್ರಾಮೀಣ ಭಾಗದ ಬಡಜನರಿಗೆ ಹೃದಯಾಘಾತ ಆಗುತ್ತಿತ್ತು. ಅವರಿಗೆ ತಕ್ಷಣದ ಚಿಕಿತ್ಸೆ ನೀಡುವುದು ಕಷ್ಟ ಆಗುತ್ತಿತ್ತು. ಹಾಗಾಗಿ ಜನೌಷಧಿ ಕೇಂದ್ರದಲ್ಲಿ ಇಸಿಜಿ ಯಂತ್ರ ಹಾಕಿದೆ ಎಂದು ಮಾತನಾಡಿದ್ದಾರೆ.

DR PADMANABH KAMAT MODI TALK

ಜನಔಷಧ ದಿನದಂದು ಪ್ರಧಾನಿ ಮೋದಿ ಜೊತೆ ಡಾ. ಪದ್ಮನಾಭ ಕಾಮತ್ ಮಾತು

ಆರಂಭದಲ್ಲಿ ಜನರು ನನಗೆ ಹುಚ್ಚು ಅಂದರು. ಆದರೆ ನನಗೆ ಜನರ ಕಷ್ಟಗಳಿಗೆ ಸ್ಪಂದಿಸುವುದು ಮುಖ್ಯವಾಗಿತ್ತು. ಆರು ಕಡೆ ಜನೌಷಧಿ‌ ಕೇಂದ್ರದಲ್ಲಿ ಇಸಿಜಿ ಯಂತ್ರ ಅಳವಡಿಸಿದೆ. ಇದರ ಫಲಾನುಭವಿಗಳ ಸಂತೋಷ ಕಂಡರೆ ಸಾರ್ಥಕ ಅನುಭವ ಆಗುತ್ತದೆ. ಈ ಮೂಲಕ ನೂರು ಹೃದಯಾಘಾತವಾಗುವ ಪ್ರಕರಣ ಪತ್ತೆ ಮಾಡಿದ್ದೇವೆ. ರೋಗಿಗಳ ಜೀವ ಉಳಿಸಿದ್ದೇವೆ. ಜನೌಷಧಿ, ಸೇವೆ ಮತ್ತು ಉದ್ಯೋಗದ ಉತ್ತಮ ಸಂದೇಶ ನೀಡಿದೆ. ಓರ್ವ ನಿರುದ್ಯೋಗಿ ಯುವಕನಿಗೆ ಹಣ ಕೊಟ್ಟು ಜನೌಷಧ ಆರಂಭಿಸಲು ಪ್ರೇರಣೆ ನೀಡಿದೆ. ಈಗ ಆ ಕೇಂದ್ರ ಅಗ್ರಪಂಕ್ತಿಯಲ್ಲಿದೆ ಎಂದು ಮಾತನಾಡಿದ್ದಾರೆ. ಜನೌಷಧಿ ಕೇಂದ್ರದಲ್ಲಿ ಇಸಿಜಿ ಆರಂಭಿಸಿದ್ದಕ್ಕೆ ಮೋದಿ‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನಮ್ಮ ಕಲ್ಪನೆಯ ಮೂರ್ತ ರೂಪ ನೀವು ಮಾಡಿತೋರಿಸಿದ್ದೀರಿ ಎಂದು ಮೋದಿ ಮಾತನಾಡಿದ್ದಾರೆ.

ಇದನ್ನೂ ಓದಿ:

Assembly Election 2021: ಕೊವಿಡ್​ ಲಸಿಕೆ ಸರ್ಟಿಫಿಕೇಟ್​ನಿಂದ ಪ್ರಧಾನಿ ಮೋದಿ ಫೋಟೋ ತೆಗೆಯಲು ಚುನಾವಣಾ ಆಯೋಗ ಸೂಚನೆ

Covid 19 Vaccination: ಕೊರೊನಾ ಲಸಿಕೆಗೆ ‘ತೋಳು ಮಡಚಿದ’ ಆರೋಗ್ಯ ಸಚಿವ ಡಾ.ಹರ್ಷವರ್ಧನ್​, ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ

Published On - 11:47 am, Sun, 7 March 21

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?