AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ಯಾಜ್ಯಾ ವಸ್ತುಗಳಿಗೆ ಸಿಕ್ತು ಮರುಜೀವ: ಚಿತ್ರಕಲಾ ಶಿಕ್ಷಕಿಯ ಮಾರ್ಗದರ್ಶನದಲ್ಲಿ ನೂರಾರು ಕಲಾಕೃತಿಗಳನ್ನ ತಯಾರಿಸಿದ ಶಾಲಾ ಮಕ್ಕಳು‌..!

ವೇಸ್ಟ್ ಆಗಿ ಕಸದ ತೊಟ್ಟಿ ಸೇರಿದ ಪ್ಲ್ಯಾಸ್ಟಿಕ್, ತೆಂಗಿನ ಚಿಪ್ಪು, ಪೇಪರ್, ತಂತಿ, ಬಟ್ಟೆಗಳ ಕವರ್, ಸೀಸು ಪೆನ್ಸಿಲ್ ತ್ಯಾಜ್ಯ ಸೇರಿದಂತೆ ಇತರೆ ವಸ್ತುಗಳನ್ನು ಸಂಗ್ರಹಿಸಿ ಅವುಗಳಿಗೆ ಹೊಸ ವಿನ್ಯಾಸ ನೀಡುವ ಮೂಲಕ ಕಲಾ ಜಗತ್ತನ್ನೇ ಅನಾವರಣಗೊಳಿಸಿದ್ದಾರೆ.

ತ್ಯಾಜ್ಯಾ ವಸ್ತುಗಳಿಗೆ ಸಿಕ್ತು ಮರುಜೀವ: ಚಿತ್ರಕಲಾ ಶಿಕ್ಷಕಿಯ ಮಾರ್ಗದರ್ಶನದಲ್ಲಿ ನೂರಾರು ಕಲಾಕೃತಿಗಳನ್ನ ತಯಾರಿಸಿದ ಶಾಲಾ ಮಕ್ಕಳು‌..!
ಮಕ್ಕಳೊಂದಿಗೆ ಶಿಕ್ಷಕಿ ಸುಜಾತಾ
ಪೃಥ್ವಿಶಂಕರ
|

Updated on:Mar 07, 2021 | 11:51 AM

Share

ಬಾಗಲಕೋಟೆ: ಅದೊಂದು ಸರ್ಕಾರಿ ಪ್ರೌಢಶಾಲೆ, ಆ ಶಾಲೆಯಲ್ಲಿ ಯಾವುದೂ ವೇಸ್ಟ್ ಅಲ್ಲ. ನಾವು, ನೀವು ಬಿಸಾಡೋ ಬಳಕೆಗೆ ಯೋಗ್ಯವಲ್ಲದ ವಸ್ತುಗಳೇ ಅವರಿಗೆ ಆಧಾರ. ಅವುಗಳನ್ನೇ ಬಳಸಿಕೊಂಡು ವಿದ್ಯಾರ್ಥಿಗಳು ಅಂದ ಚೆಂದದ ಆಕೃತಿಗಳನ್ನು ರೆಡಿ ಮಾಡ್ತಾರೆ. ಬಿಸಾಡಿದ ವಸ್ತುಗಳಿಂದಲೇ ರೆಡಿ ಮಾಡಿದ ಆ ಆಕೃತಿಗಳನ್ನು ನೋಡಿದ್ರೆ ಒಂದ್ ಕ್ಷಣ ಆಶ್ಚರ್ಯ ಪಡೋದು ಗ್ಯಾರಂಟಿ. ಆ ಶಾಲಾ ಮಕ್ಕಳ ವೇಸ್ಟೇಜ್ ವಸ್ತುಗಳಿಂದ ಸೃಷ್ಠಿಸಿರುವ ಕಲಾಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತವೆ.

ಚಿತ್ರಕಲಾ ಶಿಕ್ಷಕಿಯ ಮಾರ್ಗದರ್ಶನದಲ್ಲಿ ರಂಗುರಂಗಾಗಿ ಹೊರಹೊಮ್ಮಿದ ಕೊಠಡಿ.. ಶಾಲಾ ಕೊಠಡಿಯಲ್ಲಿ ಸುಂದರ ಕಲಾ ಚಿತ್ರಗಳ ನಿರ್ಮಾಣ. ವೇಸ್ಟ್ ಆಗಿ ಬಿಸಾಡಿದ ವಸ್ತುಗಳನ್ನ ತಂದು ಆಕರ್ಷಿಸುವಂತೆ ಕಲಾಕೃತಿ ರೂಪ ನೀಡಿದ ಶಾಲಾ ಮಕ್ಕಳು. ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಸೂಳಿಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ. ಹೌದು ಶಾಲಾ ಮಕ್ಕಳ ಕೈಚಳಕದಲ್ಲಿ ಅರಳಿದ ಬಗೆ ಬಗೆಯ ಚಿತ್ರಗಳು ನೋಡುಗರ ಮನ ಸೆಳೆಯುತ್ತಿವೆ.

ಕಲಾ ಜಗತ್ತನ್ನೇ ಅನಾವರಣಗೊಳಿಸಿದ್ದಾರೆ.. ಅದರಲ್ಲೂ ವೇಸ್ಟ್ ಆಗಿ ಕಸದ ತೊಟ್ಟಿ ಸೇರಿದ ಪ್ಲ್ಯಾಸ್ಟಿಕ್, ತೆಂಗಿನ ಚಿಪ್ಪು, ಪೇಪರ್, ತಂತಿ, ಬಟ್ಟೆಗಳ ಕವರ್, ಸೀಸು ಪೆನ್ಸಿಲ್ ತ್ಯಾಜ್ಯ ಸೇರಿದಂತೆ ಇತರೆ ವಸ್ತುಗಳನ್ನು ಸಂಗ್ರಹಿಸಿ ಅವುಗಳಿಗೆ ಹೊಸ ವಿನ್ಯಾಸ ನೀಡುವ ಮೂಲಕ ಕಲಾ ಜಗತ್ತನ್ನೇ ಅನಾವರಣಗೊಳಿಸಿದ್ದಾರೆ. ಪ್ರಮುಖವಾಗಿ ಫ್ಲಾಸ್ಟಿಕ್ ಕ್ಯಾರಿಬ್ಯಾಗ್​ಗಳಿಂದ ಹೂವುಗಳ ನಿರ್ಮಾಣ. ಹಾಲಿನ ಪ್ಯಾಕೇಟ್ ಗಳನ್ನು ಕತ್ತರಿಸಿ ಚೆಂದದ ಹೂವಿನ ಮಾಲೆ ಮಾಡಿರುವುದು.

ಪುಂಗಿ ಕಾಯಿಯಿಂದ ಚನ್ನಪಟ್ಟಣದ ಗೊಂಬೆಗಳ ಚಿತ್ರ. ಪ್ಲಾಸ್ಟಿಕ್ ಬಾಟಲ್​ಗಳಿಂದ ತಯಾರಾದ ಜುಮ್ಮರ್, ಮನೆಗಳ ನಿರ್ಮಾಣ ಹೀಗೆ ಹಲವು ಕಲಾಕೃತಿಗಳನ್ನು ಇಲ್ಲಿನ ವಿದ್ಯಾರ್ಥಿಗಳು ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದಕ್ಕೆಲ್ಲ ಮಾರ್ಗದರ್ಶನ ನೀಡಿದ ಚಿತ್ರಕಲಾ ಶಿಕ್ಷಕಿ ಅವರೆ ಕಾರಣ ಅವರಿಂದಲೇ ನಾವು ಇಂತಹ ಕಲೆ ಕಲಿತಿದ್ದೇವೆ ಅಂತಾರೆ.

ವಿದ್ಯಾರ್ಥಿಗಳು ಕೈಗೆ ಸಿಗುವ ವೇಸ್ಟ್ ವಸ್ತುಗಳನ್ನು ತರ್ತಾಯಿದ್ರು.. ಶಾಲೆಗೆ ಬರುವಾಗ ವಿದ್ಯಾರ್ಥಿಗಳು ಕೈಗೆ ಸಿಗುವ ವೇಸ್ಟ್ ವಸ್ತುಗಳನ್ನು ತರ್ತಾಯಿದ್ರು. ಚಿತ್ರಕಲಾ ಶಿಕ್ಷಕಿ ಸುಜಾತಾ ಮ್ಯಾಗಿನಮನಿ ಮಾರ್ಗ ದರ್ಶನದಲ್ಲಿ ವೆಸ್ಟ್ ವಸ್ತುಗಳಿಗೆ ಸುಂದರ ಕಲಾಕೃತಿಗಳನ್ನು ತಯಾರು ಮಾಡಿದ್ದಾರೆ. ಹಾಲಿನ ಪ್ಯಾಕೇಟ್, ಹಿಟ್ಟಿನ ಪ್ಯಾಕೇಜ್​ನಲ್ಲಿ ಹೂ ಹಾರ, ಸೊರೆಕಾಯಿಯಲ್ಲಿ ಬೊಂಬೆ, ವೆಸ್ಟ್ ವಾಟರ್ ಬಾಟಲ್, ಬೆಂಕಿಪಟ್ಟಣದ ಕಡ್ಡಿ,ದಾನ್ಯಗಳಿಂದ ಆಭರಣ, ವೆಸ್ಟ್ ಕವರ್ ಗಳಿಂದ ಮನೆ, ಪೇಂಟಿಂಗ್ ಚಿತ್ರ ಹೇಗೆ ಕಲಾಕೃತಿಗಳನ್ನ ಬಿಡಿಸುವ ಮೂಲಕ ಹೊಸ ಚಿತ್ರ ಲೋಕವನ್ನೆ ಸೃಷ್ಠಿಸಿದ್ದಾರೆ ಶಾಲಾ ಮಕ್ಕಳು.

ಇದಕ್ಕೆಲ್ಲ ಕಾರಣ ಶಿಕ್ಷಕಿ ಸುಜಾತಾ ಅವರ ಕಲಾ ಆಸಕ್ತಿ.. ವೆಸ್ಟ್ ವಸ್ತುಗಳಿಂದ ಕಲಾಕೃತಿ ನಿರ್ಮಾಣ ಮಾಡೋದು ಇವರಿಗೆ ಹವ್ಯಾಸವಾಗಿ ಬಿಟ್ಟಿದೆ. ಇದಕ್ಕೆಲ್ಲ ಕಾರಣ ಶಿಕ್ಷಕಿ ಸುಜಾತಾ ಅವರ ಕಲಾ ಆಸಕ್ತಿ, ವಿದ್ಯಾರ್ಥಿಗಳಿಗೆ ಹಳೆಯ ,ನಿರುಪಯುಕ್ತ ವಸ್ತುಗಳನ್ನು ಬಳಸಿ ಹೊಸತನದ ಕಲೆ ಹೇಳಿಕೊಡುವ ಇವರಿಂದ ವಿದ್ಯಾರ್ಥಿಗಳು ಇಂತ ಕಸದಲ್ಲಿ ರಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಚಿತ್ರಕಲೆ ಬಗ್ಗೆ ಹೇಳೋದಷ್ಟೇ ಅಲ್ಲದೆ ಚಿತ್ರಕಲಾ ಶಿಕ್ಷಕಿ ಸುಜಾತಾ ಅವರು ತಾವು ಸೇವೆ ಸಲ್ಲಿಸುತ್ತಿರುವ ಸೂಳಿಕೇರಿ ಗ್ರಾಮವನ್ನು ಕಲಾಗ್ರಾಮ ಮಾಡುವ ಸಂಕಲ್ಪ ಹೊಂದಿದ್ದಾರೆ. ಗ್ರಾಮದಲ್ಲಿ ಪ್ರತಿ ಮನೆ ಮೇಲೆ, ಗೋಡೆ ಮೇಲೆ ಸಾಮಾಜಿಕ ಸಂದೇಶ ಸಾರುವ ಕಲೆ ಅರಳಿಸಿ ಕಲಾ ಇಡೀ ಗ್ರಾಮವನ್ನು ಕಲಾಹಂದರ ಮಾಡಲು ಬಯಸಿದ್ದಾರೆ.

ಒಟ್ಟಿನಲ್ಲಿ ಕಸದ ತೊಟ್ಟಿ ಸೇರಿದ್ದ ವಸ್ತುಗಳಿಗೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹೊಸ ರೂಪ ನೀಡಿದ್ದು. ಅವರು ಹೊಸ ರೂಪ ಕೊಟ್ಟ ವೆಸ್ಟ್ ವಸ್ತುಗಳಿಗೆ ಮರು ಜೀವ ತುಂಬಿ ಶಾಲಾ ಕೊಠಡಿಯಲ್ಲಿ ಪ್ರದರ್ಶನಕ್ಕೆ ಇಟ್ಟು ಸೈ ಅನಿಸಿಕೊಂಡಿದ್ದಾರೆ. ಕಲಿಕೆಯ ಜೊತೆಗೆ ವಿದ್ಯಾರ್ಥಿಗಳ ಚಿತ್ರಕಲಾ ಆಸಕ್ತಿ ಮೆಚ್ಚುವಂತದ್ದು. ವಿದ್ಯಾರ್ಥಿಗಳ ಗ್ರಾಮವನ್ನು ಕಲಾಗ್ರಾಮವಾಗಿ ಮಾರ್ಪಡಿಸುವ ಕನಸು ನನಸಾಗಲಿ ಅನ್ನೋದೆ ಎಲ್ಲರ ಆಶಯ.

Published On - 11:48 am, Sun, 7 March 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!