ನಿನ್ನ ಗರ್ಲ್​ಫ್ರೆಂಡ್​ಮೇಲೆ ಕೈ ಹಾಕಿದ್ದಕ್ಕೆ ಸಿಟ್ಟು ಬಂತಾ?; ಉರಿಯುವ ಬೆಂಕಿಗೆ ತುಪ್ಪ ಸುರಿದ ಪ್ರಶಾಂತ್ ಸಂಬರಗಿ ​

ದಿವ್ಯಾ ಉರುಡುಗ-ಅರವಿಂದ್ ಕೆ.ಪಿ. ನಡುವೆ ಆಪ್ತತೆ ಬೆಳೆದ ನಂತರದಲ್ಲಿ ಪ್ರಶಾಂತ್​ ಸಂಬರಗಿ ಅಷ್ಟಾಗಿ ದಿವ್ಯಾ ಜತೆ ಬೆರೆಯುತ್ತಿಲ್ಲ. ಅವರಿಬ್ಬರ ನಡುವೆ ಪ್ರೀತಿ-ಪ್ರೇಮವಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.

ನಿನ್ನ ಗರ್ಲ್​ಫ್ರೆಂಡ್​ಮೇಲೆ ಕೈ ಹಾಕಿದ್ದಕ್ಕೆ ಸಿಟ್ಟು ಬಂತಾ?; ಉರಿಯುವ ಬೆಂಕಿಗೆ ತುಪ್ಪ ಸುರಿದ ಪ್ರಶಾಂತ್ ಸಂಬರಗಿ ​
Follow us
ರಾಜೇಶ್ ದುಗ್ಗುಮನೆ
| Updated By: Lakshmi Hegde

Updated on: Apr 01, 2021 | 6:05 PM

ಪ್ರಶಾಂತ್​ ಸಂಬರಗಿ ಬಿಗ್​ ಬಾಸ್​ ಮನೆಯಲ್ಲಿ ಒಬ್ಬರಾದ ಮೇಲೆ ಒಬ್ಬರ ಬಳಿ ದ್ವೇಷ ಕಟ್ಟಿಕೊಳ್ಳುತ್ತಿದ್ದಾರೆ. ಬಹುತೇಕ ಸ್ಪರ್ಧಿಗಳು ಪ್ರಶಾಂತ್​ ಎದುರು ನಗು ನಗುತ್ತಾ ಮಾತನಾಡಿದರೂ ಹಿಂದಿನಿಂದ ಅವರ ವಿರುದ್ಧ ಗಾಸಿಪ್​ ಮಾಡುತ್ತಿದ್ದಾರೆ. ಇದು ಪ್ರಶಾಂತ್​ ಸಂಬರಗಿಗೆ ಗೊತ್ತಿಲ್ಲ ಏಂದೇನೂ ಅಲ್ಲ. ಗೊತ್ತಿದ್ದರೂ, ಅವರು ಏನೂ ತಿಳಿದೇ ಇಲ್ಲ ಎನ್ನುವಂತೆ ಇದ್ದಾರೆ. ಈ ಮಧ್ಯೆ, ಕೆಲವರು ಪ್ರಶಾಂತ್​ ವಿರುದ್ಧ ನೇರವಾಗಿಯೇ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಈಗ ಅಂತಹುದೇ ಘಟನೆ ಬಿಗ್​ ಬಾಸ್​ ಮನೆಯಲ್ಲಿ ನಡೆದಿದೆ. ಆರಂಭದಲ್ಲಿ ಪ್ರಶಾಂತ್ ಸಂಬರಗಿ ಆಪ್ತೆ ಎನಿಸಿಕೊಂಡಿದ್ದ ದಿವ್ಯಾ ಉರುಡುಗು ತಿರುಗಿ ಬಿದ್ದಿದ್ದಾರೆ. ಪ್ರಶಾಂತ್​ ಸಂಬರಗಿ ಆರಂಭದ ದಿನಗಳಲ್ಲಿ ದಿವ್ಯಾ ಉರುಡುಗ ಜತೆ ಹೆಚ್ಚು ಆಪ್ತವಾಗಿರುತ್ತಿದ್ದರು. ಇದನ್ನು ನೋಡಿದ ಪ್ರೇಕ್ಷಕರು ಗಾಸಿಪ್​ ಆರಂಭಿಸಿದ್ದರು. ಅವರ ಸಂಬಂಧ ಎಂತಹುದು ಎಂದು ಅನೇಕರು ಕೇಳಿಕೊಂಡಿದ್ದರು. ಆದರೆ, ಅಚ್ಚರಿ ಎಂಬಂತೆ ದಿವ್ಯಾ ಉರುಡುಗ ನನ್ನ ತಂಗಿ ಇದ್ದಂತೆ ಎಂದು ಘೋಷಿಸಿದ್ದರು ಪ್ರಶಾಂತ್​.

ದಿವ್ಯಾ ಉರುಡುಗ-ಅರವಿಂದ್ ಕೆ.ಪಿ. ನಡುವೆ ಆಪ್ತತೆ ಬೆಳೆದ ನಂತರದಲ್ಲಿ ಪ್ರಶಾಂತ್​ ಸಂಬರಗಿ ಅಷ್ಟಾಗಿ ದಿವ್ಯಾ ಜತೆ ಬೆರೆಯುತ್ತಿಲ್ಲ. ಅವರಿಬ್ಬರ ನಡುವೆ ಪ್ರೀತಿ-ಪ್ರೇಮವಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಈಗ ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ನೇರವಾಗಿ ಪ್ರಶಾಂತ್​ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಈ ಬಗ್ಗೆ ಕಲರ್ಸ್​ ಕನ್ನಡ ವಾಹಿನಿ ಪ್ರೋಮೋ ಒಂದನ್ನು ಬಿಟ್ಟಿದೆ. ಈ ಪ್ರೋಮೋದಲ್ಲಿ ಅರವಿಂದ್​, ಪ್ರಶಾಂತ್​ ಮೇಲೆ ಕೂಗಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಪ್ರಶಾಂತ್​, ನಿನ್ನ ಗರ್ಲ್​ಫ್ರೆಂಡ್​ ಮೇಲೆ ಕೈ ಹಾಕಿದ್ದಕ್ಕೆ ಬೇಜಾರು ಆಗಿರೋದಾ ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ದಿವ್ಯಾ ಸಿಟ್ಟಾಗಿದ್ದಾರೆ. ಏಯ್​ ನೆಟ್ಟಗೆ ಮಾತನಾಡಿದ್ರೆ ಮಾತನಾಡುತ್ತೇನೆ. ನೀವು ಅರವಿಂದ್​ ಬಳಿ ನನ್ನ ಹೆಸರನ್ನು ಹೇಗೆ ಹೇಳಿದ್ರಿ? ನಾನು ಅರವಿಂದ್​ ಗರ್ಲ್​ಫ್ರೆಂಡ್​ ಆಗಿರಬಹುದು, ತಂಗಿ ಆಗಿರಬಹುದು ಅಥವಾ ಹೆಂಡತೀನೂ ಆಗಿರಬಹುದು. ನೀವು ನನ್ನ ಹೆಸರನ್ನು ಮಧ್ಯೆ ತರುವ ಹಾಗೇ ಇಲ್ಲ ಎಂದು ಪ್ರಶಾಂತ್​ಗೆ ಹೇಳಿದರು. ನಾನು ಹೇಳಿದ್ದರಲ್ಲಿ ತಪ್ಪೇನು ಇಲ್ಲ ಎನ್ನುವಂತೆ ಪ್ರಶಾಂತ್​ ಮಾತನಾಡಿದ್ದಾರೆ. ಆಗ ದಿವ್ಯಾ ಸುದೀಪ್​ ಕೊಡುವ ವಿಶೇಷ ಚಪ್ಪಾಳೆ ರೀತಿಯಲ್ಲೇ ಪ್ರಶಾಂತ್​ ಸಂಬರಗಿಗೆ ವಿಶೇಷವಾಗಿ ಚಪ್ಪಾಳೆ ಹೊಡೆದಿದ್ದಾರೆ.

ಇದನ್ನೂ ಓದಿ:Bigg Boss Kannada: ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ; ಯಾರದು? 

(BBK8 Divya Uruduga and Prashanth Sambargi Talk Fight goes viral In Social Media )

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್