ಇಷ್ಟು ಸುಂದರವಾಗಿರುವ ನಾನು ನಿನ್ನ ಹಿಂದೆ ಯಾಕೆ ಬಿದ್ದೆ? ಮಂಜು ಬಗ್ಗೆ ದಿವ್ಯಾ ಮನದಲ್ಲಿ ಹೊಸ ಪ್ರಶ್ನೆ!

Bigg Boss Kannada: ನೋಡೋಕೆ ಇಷ್ಟು ಚೆನ್ನಾಗಿರುವ ಹುಡುಗಿಯ ಹಿಂದೆ ಹುಡುಗ ಬರಬೇಕು. ಆದರೆ ನಾನು ಯಾಕೆ ಹೀಗೆ ಆಗಿದ್ದೇನೆ ಎಂದು ದಿವ್ಯಾ ಸುರೇಶ್​ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ.

ಇಷ್ಟು ಸುಂದರವಾಗಿರುವ ನಾನು ನಿನ್ನ ಹಿಂದೆ ಯಾಕೆ ಬಿದ್ದೆ? ಮಂಜು ಬಗ್ಗೆ ದಿವ್ಯಾ ಮನದಲ್ಲಿ ಹೊಸ ಪ್ರಶ್ನೆ!
ದಿವ್ಯಾ ಸುರೇಶ್​ - ಮಂಜು ಪಾವಗಡ
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Apr 10, 2021 | 6:39 PM

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಸುರೇಶ್​ ಮತ್ತು ಮಂಜು ಪಾವಗಡ ಅವರ ಲವ್​ ಟ್ರ್ಯಾಕ್​ ಎಲ್ಲೆಲ್ಲಿಗೋ ಹೋಗುತ್ತಿದೆ. ಸದಾ ಕಾಲ ಮಂಜ ಮಂಜ ಎಂದು ದಿವ್ಯಾ ಜಪ ಮಾಡುತ್ತಾರೆ. ಇಬ್ಬರೂ ಜೊತೆಯಾಗಿಯೇ ಹೆಚ್ಚು ಕಾಲ ಕಳೆಯುತ್ತಾರೆ. ನೋಡುವವರ ಕಣ್ಣು ಕುಕ್ಕುವ ರೀತಿಯಲ್ಲಿ ಈ ಜೋಡಿ ನಡೆದುಕೊಳ್ಳುತ್ತದೆ. ಒಟ್ಟಾರೆ ಇವರಿಬ್ಬರ ಕುರಿತು ಸದಾ ಒಂದಿಲ್ಲೊಂದು ಚರ್ಚೆ ನಡೆಯುವಂತಾಗಿದೆ. ವೀಕೆಂಡ್​ನಲ್ಲಿ ಸುದೀಪ್​ ಕೂಡ ಈ ವಿಚಾರ ಮಾತನಾಡಿದ್ದರು. ಈಗ ವೈಲ್ಡ್​ ಕಾರ್ಡ್​ ಎಂಟ್ರಿ ಪಡೆದ ಪ್ರಿಯಾಂಕಾ ತಿಮ್ಮೇಶ್​ ಕೂಡ ಮಂಜು-ದಿವ್ಯಾ ಲವ್​ಸ್ಟೋರಿಯನ್ನೇ ಒತ್ತಿ ಹೇಳಿದ್ದಾರೆ.

ನೀವು ಯಾವಾಗಲೂ ಮಂಜು ಪಾವಗಡ ಜೊತೆಗೆ ಕಾಲ ಕಳೆಯುತ್ತೀರಿ ಎಂದು ದಿವ್ಯಾಗೆ ನೇರವಾಗಿ ಹೇಳಿದ್ದಾರೆ ಪ್ರಿಯಾಂಕಾ. ಅದರಲ್ಲಿ ತಪ್ಪೇನಿದೆ? ಬೇರೆ ಸ್ಪರ್ಧಿಗಳೂ ಜೊತೆಯಾಗಿ ಇರುತ್ತಾರಲ್ಲ? ನಮ್ಮಿಬ್ಬರದ್ದು ಮಾತ್ರ ಯಾಕೆ ಹೈಲೈಟ್​ ಆಗುತ್ತಿದೆ ಎಂದು ದಿವ್ಯಾ ಮರುಪ್ರಶ್ನೆ ಹಾಕಿದ್ದಾರೆ. ಆಗ ದಿವ್ಯಾಗೆ ಅರ್ಥ ಮಾಡಿಸುವ ಸಲುವಾಗಿ ಪ್ರಿಯಾಂಕಾ ಎಲ್ಲವನ್ನೂ ಬಿಡಿಸಿ ಹೇಳಿದ್ದಾರೆ.

‘ಬೇರೆ ಸ್ಪರ್ಧಿಗಳು ಜೊತೆಗಿರುತ್ತಾರೆ ನಿಜ. ಆದರೆ ನೀವಿಬ್ಬರು ಮೂಲೆಗೆ ಹೋಗಿ ಪ್ರತ್ಯೇಕವಾಗಿ ಮಾತನಾಡುತ್ತಾ ಇರುತ್ತೀರಿ. ಇಷ್ಟು ದಿನ ದಿವ್ಯಾ ಮಂಜನ ಬಾಲ ಎಂಬ ಮಾತು ಬಂದಿದೆಯೇ ಹೊರತು, ಮಂಜು ದಿವ್ಯಾಳ ಬಾಲ ಅಂತ ಯಾರೂ ಹೇಳಿಲ್ಲ. ಇಷ್ಟು ಸುಂದರವಾಗಿರುವ ನಿಮ್ಮ ಹಿಂದೆ ಅವರು ಬರಬೇಕಿತ್ತು. ಆದರೆ ಇಲ್ಲಿ ಬೇರೆ ರೀತಿ ಆಗಿದೆ’ ಎಂದು ದಿವ್ಯಾ ಸುರೇಶ್​ ತಲೆಗೆ ಪ್ರಿಯಾಂಕಾ ಹುಳ ಬಿಟ್ಟಿದ್ದಾರೆ. ಇದರ ಬಗ್ಗೆ ದಿವ್ಯಾ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಾರೆ.

ಪ್ರಿಯಾಂಕಾ ತಿಮ್ಮೇಶ್​ ಹೇಳಿದ ಈ ಮಾತನ್ನು ತಮ್ಮಲ್ಲಿಯೇ ಇಟ್ಟುಕೊಂಡು ಸುಮ್ಮನಾಗುವ ಬದಲು ಮಂಜು ಬಳಿ ಹೋಗಿ ದಿವ್ಯಾ ಚರ್ಚೆ ಮಾಡಿದ್ದಾರೆ. ತಮಗೆ ಯಾಕೆ ಹೀಗೆ ಆಗುತ್ತಿದೆ ಅಂತ ಮಂಜು ಬಳಿ ಗೋಳು ತೋಡಿಕೊಂಡಿದ್ದಾರೆ. ‘ಪ್ರಿಯಾಂಕಾ ಹೇಳಿದ್ದು ನನಗೆ ಸರಿ ಎನಿಸಿತು. ಅವರ ಮಾತಿನಿಂದ ಖುಷಿ ಆಯಿತು. ಎಲ್ಲ ಸಾಮರ್ಥ್ಯ ಇದ್ದರೂ ಕೂಡ ನಾನು ಕೆಳಗೆ ಹೋಗುತ್ತಿದ್ದೇನೆ. ನೋಡೋಕೆ ಇಷ್ಟು ಚೆನ್ನಾಗಿರುವ ಹುಡುಗಿಯ ಹಿಂದೆ ಹುಡುಗ ಬರಬೇಕು. ಆದರೆ ನಾನು ಯಾಕೆ ಹೀಗೆ ಆಗಿದ್ದೇನೆ ಅಂತ ನನಗೆ ಆಲೋಚನೆ ಮೂಡಿತು’ ಎಂದು ದಿವ್ಯಾ ಹೇಳಿದ್ದಾರೆ.

ಇದನ್ನೆಲ್ಲ ಕೇಳಿಸಿಕೊಂಡು ಮಂಜು ಸುಮ್ಮನಾಗಿದ್ದಾರೆ. ಬೇರೆ ಎಲ್ಲ ವಿಚಾರದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರೇ ಹೊರತು, ‘ಇಷ್ಟು ಚೆನ್ನಾಗಿರುವ ನಾನು ನಿನ್ನ ಹಿಂದೆ ಯಾಕೆ ಬಿದ್ದೆ’ ಎಂದು ದಿವ್ಯಾ ಹೇಳಿದ ಮಾತಿಗೆ ಮಂಜು ಉತ್ತರ ನೀಡಿಲ್ಲ. ದಿವ್ಯಾ ನೇರವಾಗಿ ಇಂಥ ಮಾತು ಹೇಳಿದ ಮೇಲೆ ಮಂಜು ಭಾವನೆಗಳು ಬದಲಾಗುವ ಸಾಧ್ಯತೆ ಹೆಚ್ಚಿದೆ. ಪ್ರೀತಿ-ಪ್ರೇಮವನ್ನೆಲ್ಲ ಬದಿಗಿಟ್ಟು ಅವರು ಇನ್ಮುಂದೆ ಬರೀ ಆಟದ ಕಡೆಗೆ ಗಮನ ಹರಿಸಿದರೆ ಅಚ್ಚರಿ ಏನಿಲ್ಲ.

ಇದನ್ನೂ ಓದಿ: ಬಿಗ್​ ಬಾಸ್​ ಸ್ಪರ್ಧಿಯ ಲಿಪ್​ಲಾಕ್​ ವಿಡಿಯೋ ವೈರಲ್! ಪೂರ್ತಿ ಎಪಿಸೋಡ್​ ಪ್ರಸಾರ ಯಾವಾಗ?

ಲೈಟ್​ ಆಫ್​ ಆದಾಗ ಅರವಿಂದ್​-ದಿವ್ಯಾ ಕಣ್​ ಕಣ್ಣ ಸಲಿಗೆ! ಕದ್ದು ನೋಡಿದ ಶಮಂತ್​-ರಘು

(Bigg Boss Kannada 8: Divya Suresh becomes introspective about her relationship with Manju Pavagada in BBK8)

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ