ಯುಗಾದಿಗೆ ದರ್ಶನ್​ ಹೊಸ ಸಿನಿಮಾ ಘೋಷಣೆ; ಡೈರೆಕ್ಟರ್​ ಯಾರು?

ಶಿವರಾತ್ರಿ ಪ್ರಯುಕ್ತ ಮಾರ್ಷ್​ 11ರಂದು ರಾಬರ್ಟ್​ ತೆರೆಗೆ ಬಂದಿತ್ತು. ಸಿನಿ ಪ್ರಿಯರಿಂದ ಚಿತ್ರ ಅದ್ಭುತ ಪ್ರತಿಕ್ರಿಯೆ ಕೂಡ ಗಳಿಸಿತ್ತು. ಹೀಗಾಗಿ, ದರ್ಶನ್​ ಮುಂದಿನ ಚಿತ್ರದ ಬಗ್ಗೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಯುಗಾದಿಗೆ ದರ್ಶನ್​ ಹೊಸ ಸಿನಿಮಾ ಘೋಷಣೆ; ಡೈರೆಕ್ಟರ್​ ಯಾರು?
ನಟ ದರ್ಶನ್
Follow us
ರಾಜೇಶ್ ದುಗ್ಗುಮನೆ
|

Updated on:Apr 10, 2021 | 6:53 PM

ನಟ ದರ್ಶನ್​ ರಾಬರ್ಟ್​ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇತ್ತಿಚೆಗಷ್ಟೇ ಸಿನಿಮಾ 100 ಕೋಟಿ ಕ್ಲಬ್ ಸೇರಿದ್ದು ಚಿತ್ರತಂಡದ ಖುಷಿಯನ್ನು ದುಪ್ಪಟ್ಟು ಮಾಡಿದೆ. ದರ್ಶನ್​ ಮುಂದಿನ ಸಿನಿಮಾ ಯಾವುದು ಎಂಬುದು ಸದ್ಯದ ಕುತೂಹಲ. ಈ ಬಗ್ಗೆ ಟ್ವಿಟರ್​ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಷ್ಟೇ ಅಲ್ಲ, ಈ ಬಗ್ಗೆ ಹೊಸ ಅಪ್​ಡೇಟ್​ ಸಿಗೋಕೆ ದಿನಾಂಕ ನಿಗದಿ ಆಗಿದೆ. ಶಿವರಾತ್ರಿ ಪ್ರಯುಕ್ತ ಮಾರ್ಷ್​ 11ರಂದು ರಾಬರ್ಟ್​ ತೆರೆಗೆ ಬಂದಿತ್ತು. ಸಿನಿ ಪ್ರಿಯರಿಂದ ಚಿತ್ರ ಅದ್ಭುತ ಪ್ರತಿಕ್ರಿಯೆ ಕೂಡ ಗಳಿಸಿತ್ತು. ಹೀಗಾಗಿ, ದರ್ಶನ್​ ಮುಂದಿನ ಚಿತ್ರದ ಬಗ್ಗೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಎಲ್ಲಾ ಪ್ರಶ್ನೆಗಳಿಗೆ ಯುಗಾದಿಯಂದು ಉತ್ತರ ಸಿಗಲಿದೆ.

ರಾಬರ್ಟ್ ಯಶಸ್ಸಿನ ನಂತರದಲ್ಲಿ ದರ್ಶನ್​ಗೆ ಬೇಡಿಕೆ ಹೆಚ್ಚಿದೆ. ಖ್ಯಾತ ನಿರ್ಮಾಪಕರು ಹಾಗೂ ನಿರ್ದೇಶಕರು ದರ್ಶನ್ ಕಾಲ್​ಶೀಟ್​​ಗಾಗಿ ಸಾಲುಗಟ್ಟಿ ನಿಂತಿದ್ದಾರೆ. ರಾಕ್​ಲೈನ್​ ವೆಂಕಟೇಶ್​ ನಿರ್ಮಾಣದ ರಾಜವೀರ ಮದಕರಿ ನಾಯಕ ಸಿನಿಮಾದಲ್ಲಿ ದರ್ಶನ್​ ಈಗಾಗಲೇ ನಟಿಸುತ್ತಿದ್ದಾರೆ. ಆದರೆ, ಕೊರೊನಾ ಕಾರಣದಿಂದ ಸಿನಿಮಾ ಮುಂದೂಡಲ್ಪಟ್ಟಿದೆ ಎನ್ನಲಾಗುತ್ತಿದೆ. ಹೀಗಾಗಿ ದರ್ಶನ್​ ಬೇರೆ ಸಿನಿಮಾ ಘೋಷಣೆ ಮಾಡುತ್ತಿದ್ದಾರಂತೆ.

ನಿರ್ಮಾಪಕರಾದ ಮಿಲನ ಪ್ರಕಾಶ್​, ಶೈಲಜಾ ನಾಗ್​ ಬಳಿ ದರ್ಶನ್​ ಕಾಲ್​ಶೀಟ್​ ಇದೆ. ಇದರಲ್ಲಿ ಯಾವ ಸಿನಿಮಾ ಘೋಷಣೆ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಅವರ ಮುಂದಿನ ಸಿನಿಮಾದ ಅಪ್​ಡೇಟ್​ ತಿಳಿದುಕೊಳ್ಳೋಕೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ರಾಬರ್ಟ್​ ಸಿನಿಮಾ ಕೇವಲ 20 ದಿನಕ್ಕೆ 100 ಕೋಟಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ ಮೂಲಕ ತರುಣ್​ ಸುಧೀರ್​ ಮತ್ತೊಮ್ಮೆ ಗೆದ್ದು ಬೀಗಿದ್ದರು. ದರ್ಶನ್​ ವೃತ್ತಿ ಜೀವನದಲ್ಲಿ ಇದು ಅದ್ಭುತ ಹಿಟ್​ ಆಗಿದೆ. ರಾಬರ್ಟ್​ ಸಿನಿಮಾ ಮೂಲಕ ನಟಿ ಆಶಾ ಭಟ್​ ಗೆಲುವಿನ ನಗೆ ಬೀರಿದ್ದಾರೆ. ಹೀಗಾಗಿ ಅವರ ಮುಂದಿನ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ.

ಇದನ್ನೂ ಓದಿ: Darshan: ಆರ್​ಸಿಬಿ ಮ್ಯಾಚ್​ಗೂ ಮುನ್ನ ದರ್ಶನ್​ ವಿಡಿಯೋ ವೈರಲ್​; ನೀವು ಇದನ್ನು ನೋಡಲೇಬೇಕು

Published On - 6:49 pm, Sat, 10 April 21