Shreya Ghoshal: ಕೊವಿಡ್ 2ನೇ ಅಲೆ ನಡುವೆಯೂ ಶ್ರೇಯಾ ಘೋಷಾಲ್ಗೆ ಬೇಬಿ ಶವರ್ ಸಂಭ್ರಮ! ಆದರೆ ಇದು ಫುಲ್ ಸೇಫ್
Shreya Ghoshal Baby Shower: ಕೊರೊನಾ ವೈರಸ್ ಬಂದ ಬಳಿಕ ಎಲ್ಲವೂ ಬದಲಾಗಿದೆ. ಜನರ ಜೀವನಕ್ರಮದಲ್ಲಿ ಅನೇಕ ಬದಲಾವಣೆಗಳಾಗಿವೆ. ಶ್ರೇಯಾ ಘೋಷಾಲ್ ಅವರ ಬೇಬಿ ಶವರ್ ಕಾರ್ಯಕ್ರಮದಲ್ಲೂ ಅವರ ಸ್ನೇಹಿತರು ಅದೇ ಹಾದಿಯನ್ನು ಅನುಸರಿಸಿದ್ದಾರೆ.
ಸುಮಧುರ ಕಂಠದಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಗಾಯಕಿ ಶ್ರೇಯಾ ಘೋಷಾಲ್ ಬದುಕಿನಲ್ಲೀಗ ವಿಶೇಷ ಕಾಲಘಟ್ಟ. ಸದ್ಯ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿ ಆಗಿರುವ ಶ್ರೇಯಾಗೆ ಸ್ನೇಹಿತರೆಲ್ಲ ಸೇರಿ ಬೇಬಿ ಶವರ್ ಕಾರ್ಯಕ್ರಮ ಮಾಡಿದ್ದಾರೆ. ಇದರಿಂದ ಖುಷಿ ಆಗಿರುವ ಅವರು ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಸದ್ಯಕ್ಕಂತೂ ಎಲ್ಲೆಲ್ಲೂ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದೆ. ಕೊವಿಡ್-19 ಎರಡನೇ ಅಲೆ ಕಾರಣದಿಂದ ಎಲ್ಲರೂ ಭಯಭೀತರಾಗಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಸಮಾರಂಭಗಳನ್ನು ಮಾಡಲು ಹಿಂದೇಟು ಹಾಕಲಾಗುತ್ತಿದೆ. ಅದರಲ್ಲೂ ಮಕ್ಕಳು ಮತ್ತು ಗರ್ಭಿಣಿಯರ ವಿಚಾರದಲ್ಲಿ ಹೆಚ್ಚು ಜಾಗರೂಕತೆ ವಹಿಸಬೇಕಾಗುತ್ತದೆ. ಆದರೆ ಸ್ನೇಹಿತರೆಲ್ಲ ಸೇರಿಕೊಂಡು ಶ್ರೇಯಾ ಘೋಷಾಲ್ ಅವರ ಬೇಬಿ ಶವರ್ ಕಾರ್ಯಕ್ರಮವನ್ನು ಹೇಗೆ ನೆರವೇರಿಸಿದರು? ಇಲ್ಲಿದೆ ಹೊಸ ವಿಷಯ.
ಕೊರೊನಾ ವೈರಸ್ ಬಂದ ಬಳಿಕ ಎಲ್ಲವೂ ಬದಲಾಗಿದೆ. ಜನರ ಜೀವನಕ್ರಮದಲ್ಲಿ ಅನೇಕ ಬದಲಾವಣೆಗಳಾಗಿವೆ. ಎಲ್ಲದಕ್ಕೂ ಆನ್ಲೈನ್ ಮೊರೆಹೋಗಲಾಗುತ್ತಿದೆ. ಶ್ರೇಯಾ ಘೋಷಾಲ್ ಅವರ ಬೇಬಿ ಶವರ್ ಕಾರ್ಯಕ್ರಮದಲ್ಲೂ ಅವರ ಸ್ನೇಹಿತರು ಅದೇ ಹಾದಿಯನ್ನು ಅನುಸರಿಸಿದ್ದಾರೆ. ಬಗೆಬಗೆಯ ಅಡುಗೆಗಳನ್ನು ಮಾಡಿ ಶ್ರೇಯಾಗೆ ಕಳಿಸಲಾಗಿದೆ. ಆನ್ಲೈನ್ ಮೂಲಕ ವರ್ಚುವಲ್ ಆಗಿಯೇ ಬೇಬಿ ಶವರ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಶ್ರೇಯಾ ಘೋಷಾಲ್ ಈ ವಿಚಾರವನ್ನು ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ವಿಡಿಯೋ ಕಾಲ್ ಮೂಲಕ ಎಲ್ಲರೂ ಸೇರಿಕೊಂಡು ಈ ಸಮಾರಂಭ ನಡೆಸಿಕೊಟ್ಟಿದ್ದಾರೆ. ಕೊವಿಡ್ ಭೀತಿ ಇರುವುದರಿಂದ ಶ್ರೇಯಾ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗಿದೆ. ಸದ್ಯ ಶ್ರೇಯಾ ಹಂಚಿಕೊಂಡಿರುವ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ನಿಮ್ಮ ಸ್ನೇಹಿತರು ದೂರದಿಂದಲೇ ನಿಮ್ಮನ್ನು ಮುದ್ದಿಸಲು ನಿರ್ಧರಿಸಿದಾಗ…’ ಎಂದು ಈ ಪೋಸ್ಟ್ಗೆ ಶ್ರೇಯಾ ಕ್ಯಾಪ್ಷನ್ ನೀಡಿದ್ದಾರೆ.
View this post on Instagram
ಬಹುಭಾಷೆಯಲ್ಲಿ ಫೇಮಸ್ ಆಗಿರುವ ಶ್ರೇಯಾ ಘೋಷಾಲ್ ಅವರಿಗೆ ಸಂಗೀತಲೋಕದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. 2015ರಲ್ಲಿ ಅವರು ಬಾಲ್ಯದ ಗೆಳಯ ಶಿಲಾದಿತ್ಯ ಮುಖ್ಯೋಪಧ್ಯಾಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಗೂ ಮುನ್ನ ಶಿಲಾದಿತ್ಯ ಜೊತೆ ಶ್ರೇಯಾ 10 ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಈಗ ಈ ದಂಪತಿ ಮೊದಲ ಮಗುವಿನ ಆಗಮನವನ್ನು ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ: ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕ ಶೈಲಿಯಲ್ಲಿ ಹಾಡನ್ನು ಹಾಡಿದ್ದೇನೆ : ಗಾಯಕಿ ಶ್ರೇಯಾ ಘೋಷಾಲ್
Published On - 10:47 am, Mon, 12 April 21