ತಪ್ಪಾಗಿದೆ ಕ್ಷಮಿಸಿ; ಸುದೀಪ್​ ನೇರ ಪ್ರಶ್ನೆಗೆ ಹಣ್ಣುಗಾಯಿ ನೀರುಗಾಯಿ ಆದ ಸಂಬರಗಿ

ಆರನೇ ವಾರ ಪ್ರಶಾಂತ್​ ಸಂಬರಗಿ ಅವರನ್ನು ಕೆಲವರು ಮಾವ ಎಂದು ಕರೆದಿದ್ದರು. ಇದಕ್ಕೆ ಪ್ರಶಾಂತ್​ ಸಿಟ್ಟಾಗಿದ್ದರು. ಈ ವಿಚಾರ ವೀಕೆಂಡ್​ನಲ್ಲಿ ಚರ್ಚೆ ಆಗಿದೆ.

ತಪ್ಪಾಗಿದೆ ಕ್ಷಮಿಸಿ; ಸುದೀಪ್​ ನೇರ ಪ್ರಶ್ನೆಗೆ ಹಣ್ಣುಗಾಯಿ ನೀರುಗಾಯಿ ಆದ ಸಂಬರಗಿ
ಪ್ರಶಾಂತ್​ ಸಂಬರಗಿ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Apr 11, 2021 | 7:25 AM

ಬಿಗ್​ ಬಾಸ್​ ಆರನೇ ವಾರ ಸಾಕಷ್ಟು ರಾಜಕೀಯಗಳಿಗೆ ಸಾಕ್ಷಿ ಆಯಿತು. ಮನೆಯಲ್ಲಿ ಗುಂಪಿದೆ ಎಂದು ಹೇಳಿಕೊಂಡು ಅದನ್ನು ಒಡೆಯುತ್ತೇನೆ ಎಂದು ಪ್ರಶಾಂತ್ ಸಂಬರಗಿ ಹೇಳಿದರು. ಈ ಸಂದರ್ಭದಲ್ಲಿ ಮನೆಯವರಿಗೂ ಹಾಗೂ ಪ್ರಶಾಂತ್​ಗೂ ಜಟಾಪಟಿ ಏರ್ಪಟ್ಟಿತ್ತು. ಈ ವಿಚಾರ ವೀಕೆಂಡ್​ನಲ್ಲಿ ಚರ್ಚೆಗೆ ಬಂದಿತ್ತು. ಸುದೀಪ್​ ಕೇಳಿದ ನೇರ ಪ್ರಶ್ನೆಗಳಿಗೆ ಪ್ರಶಾಂತ್​ ಸಂಬರಗಿ ತಬ್ಬಿಬ್ಬಾದರು. ದೊಡ್ಮನೆಯಲ್ಲಿರುವ ಕೆಲವರು ಮೊದಲಿನಿಂದಲೂ ಪ್ರಶಾಂತ್​ ಸಂಬರಗಿ ಅವರನ್ನು ಮಾವ ಎಂದು ಕರೆಯುತ್ತಿದ್ದಾರೆ. ಆದರೆ ಆರನೇ ವಾರ ಇದೇ ವಿಚಾರಕ್ಕೆ ಪ್ರಶಾಂತ್​ ಸಿಟ್ಟಾಗಿದ್ದರು. ನನ್ನನ್ನು ಹಾಗೆ ಕರೆಯಬೇಡಿ ಎಂದು ಮನೆಯವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಈ ವಿಚಾರ ವೀಕೆಂಡ್​ನಲ್ಲಿ ಚರ್ಚೆ ಆಗಿದೆ. ಮಾವ ಅನ್ನೋದು ಕೆಟ್ಟ ಶಬ್ದವೇ ಎಂದು ಸುದೀಪ್​ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿದ ಪ್ರಶಾಂತ್​, ಖಂಡಿತವಾಗಿಯೂ ಅಲ್ಲ. ಆದರೆ, ಎದುರು ಮಾವ ಎಂದು ಹೇಳಿ ಅವರು ಹಿಂಬದಿಯಿಂದ ಬೇರೆ ರೀತಿಯಲ್ಲಿ ಮಾತನಾಡುತ್ತಾರೆ. ಈ ಶಬ್ದಕ್ಕೆ ಡಬಲ್​ ಮೀನಿಂಗ್​ ಇದೆ ಎಂದು ಮನೆಯಲ್ಲಿ ಕೆಲವರು ಹೇಳಿದರು. ಹಾಗೆ ಕರೆಯಬೇಡಿ ಎಂದು ನಾನು ಮನೆಯ ಎಲ್ಲರಿಗೂ ಮನವಿ ಮಾಡಿಕೊಂಡೆ. ಆವತ್ತಿನಿಂದ ನನ್ನದೇ ಹೆಸರಲ್ಲಿ ಕರೆಸಿಕೊಳ್ಳೋ ನಿರ್ಧಾರಕ್ಕೆ ಬಂದೆ​ ಎಂದರು.

ಪ್ರಶಾಂತ್​ ನಿನ್ನ ಬಗ್ಗೆ ಹೊರಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದು ಚಕ್ರವರ್ತಿ ಚಂದ್ರಚೂಡ. ಇದನ್ನು ಬಾಯಿ ಬಿಡಿಸೋಕೆ ಸುದೀಪ್​ ತುಂಬಾನೇ ಪ್ರಯತ್ನಿಸಿದರು. ಆದರೆ, ಪ್ರಶಾಂತ್​ ಎಲ್ಲಿಯೂ ಅದನ್ನು ಹೇಳಿಕೊಂಡಿಲ್ಲ.

ಇನ್ನು, ಬಿಗ್​ ಬಾಸ್​ ಮನೆಯ ಸ್ವಿಮ್ಮಿಂಗ್​ ಫೂಲ್​ನಲ್ಲಿ ಆದ ಜಗಳದ ವಿಚಾರವನ್ನು ಸುದೀಪ್​ ಪ್ರಸ್ತಾಪ ಮಾಡಿದರು. ಹೀಗೆ ಜಗಳವಾಡಿದ್ದು ಉದ್ದೇಶಪೂರ್ವಕವಲ್ಲ ಎಂದು ಪ್ರಶಾಂತ್​ ಹೇಳಿದರು. ಆದರೆ, ಪ್ರಶಾಂತ್​ ಸಿಡಿದೇಳೋಕೆ ಅವರು ಮೊದಲೇ ಸಿದ್ಧತೆ ಮಾಡಿಕೊಂಡಿದ್ದರು ಎಂದು ದಿವ್ಯಾ ಉರುಡುಗ, ಅರವಿಂದ್ ಹೇಳಿದ್ದಾರೆ. ನಂತರ ಪ್ರಶಾಂತ್​ ಎದುರು ಸುದೀಪ್​ ಸಾಲು ಸಾಲು ಪ್ರಶ್ನೆ ಇಟ್ಟಿದ್ದಾರೆ. ಇದಕ್ಕೆ ಪ್ರಶಾಂತ್​ ಸಂಬರಗಿ ತಬ್ಬಿಬ್ಬಾಗಿ ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ: ಪ್ರಶಾಂತ್​ ಸಂಬರಗಿ ವೀಕ್​ನೆಸ್​ ಮನೆಯವರಿಗೆ ಗೊತ್ತಾಗಿಹೋಯ್ತು; ಇನ್ನು ಎಲ್ಲವೂ ಸುಲಭ

ಬಿಗ್​ ಬಾಸ್​ ಮನೆಯ ದೊಡ್ಡ ಹಗರಣವನ್ನು ಭೇದಿಸಿದ ಪ್ರಶಾಂತ್​ ಸಂಬರಗಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್