Allu Arjun: ಕೇವಲ 24 ಗಂಟೆಯಲ್ಲಿ ಬಾಹುಬಲಿ ದಾಖಲೆ ಮುರಿದ ಅಲ್ಲು ಅರ್ಜುನ್ ನಟನೆಯ ಪುಷ್ಪ!
Pushpa Teaser: ಟೀಸರ್ನಲ್ಲಿ ಅಲ್ಲು ಅರ್ಜುನ್ ಪಾತ್ರದ ಪರಿಚಯ ಮಾಡಿಸಲಾಗಿದೆ. ಇದು ಅಭಿಮಾನಿಗಳಿಗೆ ತುಂಬ ಇಷ್ಟವಾಗಿದ್ದು, ಎಲ್ಲರೂ ಮುಗಿಬಿದ್ದು ನೋಡುತ್ತಿದ್ದಾರೆ. ಆ ಮೂಲಕ ಯೂಟ್ಯೂಬ್ನಲ್ಲಿ ಪುಷ್ಪ ಟೀಸರ್ ದಾಖಲೆ ಬರೆದಿದೆ.
ನಟ ಅಲ್ಲು ಅರ್ಜುನ್ ಅಭಿಮಾನಿಗಳು ‘ಪುಷ್ಪ’ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ಸಂಪೂರ್ಣ ಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಪೋಸ್ಟರ್ ಮತ್ತು ಟೀಸರ್ನಿಂದ ಕೌತುಕ ಮೂಡಿದೆ. ‘ಪುಷ್ಪ’ ಮೇಲೆ ಅಲ್ಲು ಫ್ಯಾನ್ಸ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಈ ಹಿಂದೆ ಟಾಲಿವುಡ್ನಲ್ಲಿ ಸೂಪರ್ ಹಿಟ್ ಎನಿಸಿಕೊಂಡ ಬಾಹುಬಲಿ ಚಿತ್ರವನ್ನೂ ಪುಷ್ಪ ಮೀರಿಸಲಿದೆಯೇನೋ ಎಂಬ ಸೂಚನೆ ಸಿಗುತ್ತಿದೆ.
ಅಲ್ಲು ಅರ್ಜನ್ ಜನ್ಮದಿನದ ಸಲುವಾಗಿ ಇತ್ತೀಚೆಗೆ ಪುಷ್ಪ ಚಿತ್ರದ ಟೀಸರ್ ಬಿಡುಗಡೆ ಆಯಿತು. ಟ್ರಕ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಕಥಾನಾಯಕನ ಪಾತ್ರವನ್ನು ಪರಿಚಯಿಸುವ ಈ ಟೀಸರ್ನಲ್ಲಿ ಸಾಹಸ ದೃಶ್ಯಗಳ ಝಲಕ್ ಕೂಡ ಇದೆ. ಅದು ಫ್ಯಾನ್ಸ್ಗೆ ತುಂಬ ಇಷ್ಟವಾಗಿದೆ. ಹಾಗಾಗಿ ಎಲ್ಲರೂ ಇದನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಆ ಮೂಲಕ ಯೂಟ್ಯೂಬ್ನಲ್ಲಿ ಪುಷ್ಪ ಟೀಸರ್ ದಾಖಲೆ ಬರೆದಿದೆ.
ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 25 ಮಿಲಿಯನ್ (2.5 ಕೋಟಿ) ಬಾರಿ ವೀಕ್ಷಣೆ ಕಂಡಿದೆ. ಈ ಸಾಧನೆಯನ್ನು ತೆಲುಗು ಚಿತ್ರರಂಗದ ಬೇರೆ ಯಾವುದೇ ಸಿನಿಮಾಗಳೂ ಮಾಡಿಲ್ಲ. ಬಾಹುಬಲಿ, ರಾಧೆ ಶ್ಯಾಮ್, ಆರ್ಆರ್ಆರ್ ಟೀಸರ್ಗಳನ್ನೂ ಮೀರಿಸಿ ಪುಷ್ಪ ಟೀಸರ್ ಯಶಸ್ಸು ಕಂಡಿದೆ. 7 ಲಕ್ಷಕ್ಕೂ ಅಧಿಕ ಮಂದಿ ಇದನ್ನು ಲೈಕ್ ಮಾಡಿದ್ದಾರೆ. ಸದ್ಯ ಈ ಟೀಸರ್ 37 ಮಿಲಿಯನ್ ವೀವ್ಸ್ ದಾಟಿ ಮುನ್ನುಗ್ಗುತ್ತಿದೆ.
(ಪುಷ್ಪ ಚಿತ್ರದ ಟೀಸರ್)
ಚಿಕ್ಕದೊಂದು ಟೀಸರ್ಗೆ ಜನರು ಈ ಪರಿ ಪ್ರೀತಿ ತೋರಿಸಿರುವುದಕ್ಕೆ ಅಲ್ಲು ಅರ್ಜುನ್ ಖುಷಿ ಆಗಿದ್ದಾರೆ. ಈ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಅವರು ಟ್ವಿಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ.
Heart Congratulations to My Home Group on Turning 35 . Best wishes to my friend Ram garu and for his future endeavours . Wishing you many more mile stones to achieve . Warm Regard … AA @MyhomeConst #35YearsOfMyHome #MyHomeConstructions
— Allu Arjun (@alluarjun) April 9, 2021
ರಕ್ತ ಚಂದನದ ಕಳ್ಳಸಾಗಾಣಿಕೆಯ ಕಥೆಯನ್ನು ಹೊಂದಿರುವ ಈ ಸಿನಿಮಾಗೆ ಖ್ಯಾತ ನಿರ್ದೇಶಕ ಸುಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಅವರ ಸಿನಿಖಾತೆಗೆ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಸಿಗುವುದು ಖಚಿತ ಎನಿಸುತ್ತಿದೆ. ಆಗಸ್ಟ್ 13ರಂದು ಪುಷ್ಪ ಚಿತ್ರ ತೆರೆಕಾಣಲಿದೆ.
ಇದನ್ನೂ ಓದಿ: Pushpa Teaser: ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಪಾತ್ರ ನೋಡಿದ್ರೆ ನೀವೊಮ್ಮೆ ಬೆಚ್ಚಿ ಬೀಳ್ತೀರಾ!
( Allu Arjun starrer Pushpa teaser breaks the record of Baahubali and RRR on Youtube)
Published On - 9:19 am, Sun, 11 April 21