ಆರನೇ ವಾರ ಬಿಗ್ ಬಾಸ್ ಮನೆಯಿಂದ ಇಬ್ಬರು ಎಲಿಮಿನೇಟ್!
ಈ ವಾರ ಶಮಂತ್ ಬ್ರೋ ಗೌಡ, ಅರವಿಂದ್ ಕೆ.ಪಿ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ರಾಜೀವ್ ಎಲಿಮಿನೇಷನ್ಗೆ ನಾಮಿನೇಟ್ ಆಗಿದ್ದರು. ಈ ಪೈಕಿ ನಿಧಿ ಸುಬ್ಬಯ್ಯ ಹಾಗೂ ಅರವಿಂದ್ ಸೇಫ್ ಆಗಿದ್ದಾರೆ ಎಂದು ಸುದೀಪ್ ಘೋಷಣೆ ಮಾಡಿದರು.
ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಐದು ವಾರ ಪೂರ್ಣಗೊಳಿಸಿ ಆರನೇ ವಾರಕ್ಕೆ ಕಾಲಿಟ್ಟಿದ್ದಾರೆ. ಪ್ರತಿ ವಾರ ಒಂದೊಂದೇ ಸ್ಪರ್ಧಿಗಳು ಮನೆಯಿಂದ ಹೊರ ಹೋಗುತ್ತಿದ್ದಾರೆ. ಆದರೆ, ಈ ವಾರ ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಲಿದ್ದಾರಂತೆ. ಇದನ್ನು ನಾವು ಹೇಳುತ್ತಿಲ್ಲ. ಸ್ವತಃ ಕಿಚ್ಚು ಸುದೀಪ್ ಹೇಳಿದ್ದಾರೆ. ಈ ವಾರ ಬಿಗ್ ಬಾಸ್ ಮನೆಗೆ ಇಬ್ಬರ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಒಂದೇ ವಾರ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಆಗಿರೋದು ಸಾಕಷ್ಟು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಶುಭಾ ಕೂಡ ಮಾತನಾಡಿದ್ದರು. ಇಬ್ಬರು ಮನೆ ಒಳಗೆ ಬಂದಿದ್ದಾರೆ ಎಂದರೆ ಇಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಇದನ್ನು ಕೇಳಿ ದಿವ್ಯಾ ಹಾಗೂ ನಿಧಿ ಭಯಗೊಂಡಿದ್ದರು. ಈ ವಿಚಾರ ವೀಕೆಂಡ್ನಲ್ಲಿ ಚರ್ಚೆಗೆ ಬಂದಿದೆ. ಅಷ್ಟೇ ಅಲ್ಲ, ಶನಿವಾರದ ( ಮಾರ್ಚ್ 10) ಎಪಿಸೋಡ್ ಕೊನೆಯಲ್ಲಿ ಸುದೀಪ್ ಇದಕ್ಕೆ ಟ್ವಿಸ್ಟ್ ನೀಡಿದ್ದಾರೆ.
ಈ ವಾರ ಶಮಂತ್ ಬ್ರೋ ಗೌಡ, ಅರವಿಂದ್ ಕೆ.ಪಿ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ರಾಜೀವ್ ಎಲಿಮಿನೇಷನ್ಗೆ ನಾಮಿನೇಟ್ ಆಗಿದ್ದರು. ಈ ಪೈಕಿ ನಿಧಿ ಸುಬ್ಬಯ್ಯ ಹಾಗೂ ಅರವಿಂದ್ ಸೇಫ್ ಆಗಿದ್ದಾರೆ ಎಂದು ಸುದೀಪ್ ಘೋಷಣೆ ಮಾಡಿದರು.
ಈಗ ಉಳಿದುಕೊಂಡಿರೋರು ಶಮಂತ್ ಬ್ರೋ ಗೌಡ, ರಾಜೀವ್, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ಶುಭಾ ಪೂಂಜಾ ಇವರಲ್ಲಿ ಒಬ್ಬರು ಮನೆಯಿಂದ ಹೊರ ಹೋಗಬೇಕು. ಆದರೆ, ಈ ವಾರ ಮನೆಯಿಂದ ಒಬ್ಬರು ಹೋಗ್ತಾರೋ ಅಥವಾ ಇಬ್ಬರು ಹೋಗ್ತಾರೋ ಎಂದು ಹೇಳೋಕೆ ಆಗಲ್ಲ. ಇದಕ್ಕೆ ನಾಳೆ ಉತ್ತರ ಸಿಗಲಿದೆ ಎಂದಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಇಬ್ಬರು ಎಲಿಮಿನೇಟ್ ಆಗುವ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಇಷ್ಟು ಸುಂದರವಾಗಿರುವ ನಾನು ನಿನ್ನ ಹಿಂದೆ ಯಾಕೆ ಬಿದ್ದೆ? ಮಂಜು ಬಗ್ಗೆ ದಿವ್ಯಾ ಮನದಲ್ಲಿ ಹೊಸ ಪ್ರಶ್ನೆ!
ಅನ್ನಕ್ಕೆ ವಿಷ ಹಾಕಿ ತಂದೆಯೇ ನನ್ನನ್ನು ಮುಗಿಸಲು ಹೊರಟಿದ್ದರು; ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ದಿವ್ಯಾ