ಕಂಗನಾ ರಣಾವತ್​-ತಾಪ್ಸೀ ಪನ್ನು ಈಗ ಫ್ರೆಂಡ್ಸ್​! ಜಗಳ ಅಂತ್ಯ ಆಗಿದ್ದಕ್ಕೆ ಕಾರಣ ಏನು?

ರಾಜಕೀಯದಲ್ಲಿ ಯಾರಿಗೆ ಯಾರೂ ಮಿತ್ರರಲ್ಲ, ಶತ್ರುವೂ ಅಲ್ಲ ಎಂಬ ಮಾತಿದೆ. ಅದು ಸಿನಿಮಾ ಕ್ಷೇತ್ರದ ರಾಜಕೀಯಕ್ಕೂ ಅನ್ವಯ ಆಗಬಹುದೇನೋ. ಕಂಗನಾ ಮತ್ತು ತಾಪ್ಸೀ ನಡುವೆ ಸ್ನೇಹ ಚಿಗುರಿರುವುದು ಕಂಡು ಸಿನಿಪ್ರಿಯರು ಅಚ್ಚರಿಪಟ್ಟಿದ್ದಾರೆ.

ಕಂಗನಾ ರಣಾವತ್​-ತಾಪ್ಸೀ ಪನ್ನು ಈಗ ಫ್ರೆಂಡ್ಸ್​! ಜಗಳ ಅಂತ್ಯ ಆಗಿದ್ದಕ್ಕೆ ಕಾರಣ ಏನು?
ಕಂಗನಾ ರಣಾವತ್​-ತಾಪ್ಸೀ ಪನ್ನು

ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರು ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ತಮ್ಮ ಅನಿಸಿಕೆಯನ್ನು ನೇರವಾಗಿ ಹೇಳುವ ಭರದಲ್ಲಿ ಹಲವು ಸೆಲೆಬ್ರಿಟಿಗಳ ಜೊತೆ ಅವರು ಜಗಳ ಮಾಡಿಕೊಂಡಿದ್ದಾರೆ. ಸಿದ್ಧಾಂತದ ಕಾರಣದಿಂದಲೂ ಕಂಗನಾ ಆಗಾಗ ಕಿರಿಕ್​ ಮಾಡಿಕೊಳ್ಳುತ್ತ ಇರುತ್ತಾರೆ. ಅದರಲ್ಲೂ ನಟಿ ತಾಪ್ಸೀ ಪನ್ನು ಜೊತೆ ಕಂಗನಾ ಹಲವು ಬಾರಿ ಕಿತ್ತಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಇಬ್ಬರ ನಡುವೆ ಎಷ್ಟೋ ಸಲ ಜಗಳ ಆಗಿದೆ. ಆದರೆ ಈಗ ಏಕಾಏಕಿ ಇಬ್ಬರೂ ಫ್ರೆಂಡ್ಸ್​ ಆಗಿದ್ದಾರೆ!

ರಾಜಕೀಯದಲ್ಲಿ ಯಾರಿಗೆ ಯಾರೂ ಮಿತ್ರರಲ್ಲ, ಶತ್ರುವೂ ಅಲ್ಲ ಎಂಬ ಮಾತಿದೆ. ಅದು ಸಿನಿಮಾ ಕ್ಷೇತ್ರದ ರಾಜಕೀಯಕ್ಕೂ ಅನ್ವಯ ಆಗಬಹುದೇನೋ. ಕಂಗನಾ ರಣಾವತ್​ ಮತ್ತು ತಾಪ್ಸೀ ಪನ್ನು ನಡುವಿನ ಮಾತುತೆ ಗಮನಿಸಿದರೆ ಹಾಗೇ ಅನಿಸುತ್ತದೆ. ಇಷ್ಟು ದಿನಗಳ ಕಾಲ ಬಹಿರಂಗವಾಗಿ ಬೈಯ್ದುಕೊಂಡಿದ್ದ ಈ ನಟಿಯರು ಈಗ ಒಬ್ಬರನ್ನೊಬ್ಬರು ಹೊಗಳಿಕೊಂಡಿದ್ದಾರೆ.

ಇತ್ತೀಚೆಗೆ ತಾಪ್ಸೀ ಪನ್ನು ಅವರಿಗೆ ಫಿಲ್ಮ್​ ಫೇರ್​ ಪ್ರಶಸ್ತಿ ಸಿಕ್ಕಿತು. ತಪ್ಪಡ್​ ಸಿನಿಮಾದಲ್ಲಿನ ನಟನೆಗಾಗಿ ಅವರು ‘ಅತ್ಯುತ್ತಮ ನಟಿ’ ಎಂಬ ಮನ್ನಣೆಗೆ ಪಾತ್ರರಾದರು. ಈ ಪ್ರಶಸ್ತಿಯನ್ನು ಸ್ವೀಕರಿಸಲು ವೇದಿಕೆ ಏರಿದ ಸಂದರ್ಭದಲ್ಲಿ ಕಂಗನಾಗೆ ತಾಪ್ಸೀ ಧನ್ಯವಾದ ಹೇಳಿದ್ದಾರೆ! ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ‘ಗಡಿಗಳನ್ನು ಮೀರಿ ಬೆಳೆಯುವಂತೆ ಮಾಡಿದ್ದಕ್ಕಾಗಿ ಕಂಗನಾ ನಿಮಗೆ ಧನ್ಯವಾದಗಳು. ಪ್ರತಿ ವರ್ಷ ನಿಮ್ಮ ನಟನೆ ಅತ್ಯುತ್ತಮ ಆಗುತ್ತಲೇ ಇದೆ’ ಎಂದು ತಾಪ್ಸೀ ಹೇಳಿದ್ದಾರೆ.

ಈ ವಿಡಿಯೋ ಅನೇಕರಿಗೆ ಇಷ್ಟ ಆಗಿದೆ. ಹಾಗಾಗಿ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅದು ಕಂಗನಾ ರಣಾವತ್​ ಅವರ ಗಮನಕ್ಕೂ ಬಂದಿದೆ. ತಾಪ್ಸೀ ಮಾತಿಗೆ ಕಂಗನಾ ಅಷ್ಟೇ ಸ್ನೇಹಪೂರ್ವಕವಾಗಿ ಉತ್ತರಿಸಿದ್ದಾರೆ. ‘ಧನ್ಯವಾದಗಳು… ಫಿಲ್ಮ್​ ಫೇರ್​ ಪ್ರಶಸ್ತಿಗೆ ಬೇರೆ ಯಾರೂ ನಿಮಗಿಂತ ಹೆಚ್ಚು ಅರ್ಹರಿಲ್ಲ’ ಎಂದು ಕಂಗನಾ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಇಬ್ಬರ ನಡುವೆ ಸ್ನೇಹ ಚಿಗುರಿರುವುದು ಕಂಡು ಸಿನಿಪ್ರಿಯರು ಅಚ್ಚರಿಪಟ್ಟಿದ್ದಾರೆ.

ಬಾಲಿವುಡ್​ನಲ್ಲಿ ಬೇರೂರಿರುವ ನೆಪೋಟಿಸಂ, ಸುಶಾಂತ್​ ಆತ್ಮಹತ್ಯೆ ಪ್ರಕರಣ, ನಿರ್ದೇಶಕ ಅನುರಾಗ್​ ಕಶ್ಯಪ್​ ಮೇಲಿನ ಮೀಟೂ ಆರೋಪ, ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆ ಮುಂತಾದ ಎಲ್ಲ ವಿಚಾರಗಳಲ್ಲೂ ತಾಪ್ಸೀ ಪನ್ನು ಮತ್ತು ಕಂಗನಾ ರಣಾವತ್​ ಭಿನ್ನಾಭಿಪ್ರಾಯ ಹೊಂದಿದ್ದರು ಹಾಗೂ ಪರಸ್ಪರ ವಾಗ್ವಾದ ಮಾಡಿಕೊಂಡಿದ್ದರು.

ಇದನ್ನೂ ಓದಿ: ಜ್ಚರ ಇದ್ದರೂ ಲೆಕ್ಕಿಸದೆ ಶೂಟಿಂಗ್ ಮಾಡಿದ ನಟಿ ಕಂಗನಾ

ಜ್ಚರ ಇದ್ದರೂ ಲೆಕ್ಕಿಸದೆ ಶೂಟಿಂಗ್ ಮಾಡಿದ ನಟಿ ಕಂಗನಾ

Click on your DTH Provider to Add TV9 Kannada