ಚಾಂದ್ರಮಾನ ಯುಗಾದಿಗೆ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಹಲವು ಗಣ್ಯರ ಶುಭ ಹಾರೈಕೆ

ಮಹಾಮಾರಿ ಕೊರೊನಾದಿಂದ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗದೆ ಇದ್ದರೂ ಸಂಭ್ರಮ ಸಡಗರ ಮನೆಮಾಡಿದೆ. ಬದುಕಿನಲ್ಲಿ ಕಷ್ಟ ಮತ್ತು ಸುಖವನ್ನು ಸಮಾನವಾಗಿ ಸ್ವೀಕರಿಸಿ..  ಜೀವನ ನಡೆಸಲು ವರ್ಷದ ಮೊದಲ ಹೆಜ್ಜೆ ಹಾಕುವುದೇ  ಈ ಹಬ್ಬದ ವಿಶೇಷತೆ.

  • TV9 Web Team
  • Published On - 10:04 AM, 13 Apr 2021
ಚಾಂದ್ರಮಾನ ಯುಗಾದಿಗೆ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಹಲವು ಗಣ್ಯರ ಶುಭ ಹಾರೈಕೆ
ಸುಖ-ದುಃಖದ ಸಂಕೇತ ಬೇವು-ಬೆಲ್ಲ

ಬೆಂಗಳೂರು: ಎಲ್ಲೆಡೆ ಯುಗಾದಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಮಹಾಮಾರಿ ಕೊರೊನಾದಿಂದ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗದೆ ಇದ್ದರೂ ಸಂಭ್ರಮ ಸಡಗರ ಮನೆಮಾಡಿದೆ. ಬದುಕಿನಲ್ಲಿ ಕಷ್ಟ ಮತ್ತು ಸುಖವನ್ನು ಸಮಾನವಾಗಿ ಸ್ವೀಕರಿಸಿ..  ಜೀವನ ನಡೆಸಲು ವರ್ಷದ ಮೊದಲ ಹೆಜ್ಜೆ ಹಾಕುವುದೇ  ಈ ಹಬ್ಬದ ವಿಶೇಷತೆ. ಈ ಹಬ್ಬದಂದು ಬೇವು ಬೆಲ್ಲವನ್ನು ಕಷ್ಟ ಮತ್ತು ಸುಖಕ್ಕೆ ಹೋಲಿಸಲಾಗುತ್ತದೆ. ಇನ್ನೂ ಈ ಹಬ್ಬಕ್ಕೆ ಹಲವು ಗಣ್ಯರು ಶುಭಕೋರಿದ್ದಾರೆ.

ರಾಜ್ಯದ ಜನತೆಗೆ ಕನ್ನಡದಲ್ಲಿ ಶುಭಾಶಯ ತಿಳಿಸಿದ ಪ್ರಧಾನೆ ನರೇಂದ್ರ ಮೋದಿ, ನಿಮ್ಮೆಲ್ಲರಿಗೂ ಯುಗಾದಿಯ ಶುಭಕಾಮನೆಗಳು. ಮುಂಬರುವ ವರ್ಷ ಅದ್ಭುತವಾಗಲಿ. ನೀವೆಲ್ಲರೂ ಆರೋಗ್ಯ ಹಾಗೂ ಸಂತಸದಿಂದಿರಿ. ಎಲ್ಲೆಡೆ ಸಮೃದ್ಧಿ ಹಾಗೂ ಸಂತೋಷ ಪಸರಿಸಲಿ ಎಂದು ಟ್ವೀಟ್ ಮಾಡಿದ್ದಾರೆ.

 

ನಾಡಿನ ಸಮಸ್ತ ಜನತೆಗೆ ಯುಗಾದಿಯ ಹಾರ್ದಿಕ ಶುಭಾಶಯಗಳು ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್​ ಮಾಡಿದ್ದಾರೆ. ನೂತನ ಪ್ಲವ ಸಂವತ್ಸರವು ಎಲ್ಲರ ಬಾಳಿನಲ್ಲಿ ಆರೋಗ್ಯ, ಸುಖ, ಸಮೃದ್ಧಿ, ಯಶಸ್ಸನ್ನು ಹೊತ್ತು ತರಲಿ ಎಂದು ಟ್ವೀಟ್​ ಮಾಡಿದ ಮುಖ್ಯಮಂತ್ರಿ ಸಾಂಕ್ರಾಮಿಕ ರೋಗದ ಪಿಡುಗು ನಾಡಿನಿಂದ ತೊಲಗಲಿ. ನಾವೂ ಸುರಕ್ಷಿತರಾಗಿದ್ದು, ಇತರರೂ ಸುರಕ್ಷಿತರಾಗಿರುವಂತೆ ಎಲ್ಲ ಮುನ್ನೆಚ್ಚರಿಕೆಯನ್ನು ವಹಿಸಿ ಹಬ್ಬ ಆಚರಿಸೋಣ ಎಂದು ಶುಭ ಹಾರೈಸಿದ್ದಾರೆ.

ಓ ಯುಗಾದಿಯೇ, ಹೊಸ ಕಾಲದ ಆದಿಯೇ, ಲೋಕದ ಜನರ ಕಷ್ಟಗಳ ನೀಗುತ್ತಾ ಬಾ. ಆರೋಗ್ಯದ ಭಾಗ್ಯವನ್ನು ಕರುಣಿಸು ಬಾ. ಎಲ್ಲರ ಬಾಳಲ್ಲಿ ಹೊಸ ವರ್ಷದ ಉತ್ಸಾಹ ತುಂಬುತ್ತಾ ಬಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಶುಭ ಕೋರಿದ್ದಾರೆ.

ಯುಗಾದಿ ಹಬ್ಬದ ಈ ಸಮಯದಲ್ಲಿ ಕರ್ನಾಟಕದ ನಮ್ಮ ಸಹೋದರ, ಸಹೋದರಿಯರಿಗೆ ಹಾಗೂ ವಿಶ್ವದೆಲ್ಲೆಡೆ ಇರುವ ಕನ್ನಡಿಗರಿಗೆ ಶುಭಾಶಯಗಳು ಮತ್ತು ಶುಭಹಾರೈಕೆಗಳು. ಈ ಶುಭ ಸಂದರ್ಭವು ಎಲ್ಲರಿಗೂ ಒಳ್ಳೆಯ ಆರೋಗ್ಯ, ನೆಮ್ಮದಿ ಹಾಗು ಸಮೃದ್ಧತೆ ತರಲಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್​ ಮಾಡಿದ್ದಾರೆ.

Happy Ugadi 2021: ಯುಗಾದಿ ಹಬ್ಬದ ದಿನ ಚಂದ್ರನನ್ನು ಪ್ರಾರ್ಥಿಸಿದರೆ ಸಕಲ ಸಂಕಷ್ಟವೂ ಪರಿಹಾರ

Gold Rate Today: ಯುಗಾದಿ ಹಬ್ಬದ ಶುಭ ದಿನದಂದು ಚಿನ್ನ ಕೊಳ್ಳುವುದಾದರೆ ದರ ಹೀಗಿದೆ!

(Ugadi 2021 president kovind Pm modi and many others wishes on gudi padwa and baisaki)