AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rate Today: ಯುಗಾದಿ ಹಬ್ಬದ ಶುಭ ದಿನದಂದು ಚಿನ್ನ ಕೊಳ್ಳುವುದಾದರೆ ದರ ಹೀಗಿದೆ!

ಹಬ್ಬದ ದಿನ ಚಿನ್ನ ಕೊಳ್ಳಲು ಯೋಚಿಸುತ್ತಿದ್ದರೆ ಚಿನ್ನದ ದರ ಮಾರುಕಟ್ಟೆಯಲ್ಲಿ ಎಷ್ಟಿದೆ ಎಂಬುದರ ವಿವರ ಇಲ್ಲಿದೆ.

Gold Rate Today: ಯುಗಾದಿ ಹಬ್ಬದ ಶುಭ ದಿನದಂದು ಚಿನ್ನ ಕೊಳ್ಳುವುದಾದರೆ ದರ ಹೀಗಿದೆ!
ಸಾಂದರ್ಭಿಕ ಚಿತ್ರ
shruti hegde
|

Updated on: Apr 13, 2021 | 8:30 AM

Share

ಬೆಂಗಳೂರು: ಇಂದು ಎಲ್ಲೆಲ್ಲೂ ಯುಗಾದಿ ಹಬ್ಬದ ಸಂಭ್ರಮ. ಮನೆ ಮುಂದೆ ರಂಗಿನ ರಂಗೋಲಿ. ಮನೆಯಲ್ಲಿ ಸಡರಗರ ಸಂಭ್ರಮ. ಯುಗಾದಿ ಅಂದರೆ ಹೊಸ ವರ್ಷದ ಆರಂಭ. ಈ ದಿನ ನಾವು ಹೇಗೆ ಕಳೆಯುತ್ತೇವೆಯೋ ಅಷ್ಟೇ ಖುಷಿಯಿಂದ ಇಡೀ ವರ್ಷವನ್ನು ಕಳೆಯುತ್ತೇವೆ. ಅದರಲ್ಲೂ ಭಾರತೀಯರು ಹಬ್ಬದ ದಿನ ಚಿನ್ನ ಕೊಳ್ಳುವುದು ಹೆಚ್ಚು. ಹಾಗಿದ್ದಾಗ ಚಿನ್ನದ ದರ ಮಾರುಕಟ್ಟೆಯಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

ಚಿನ್ನದ ಹೂಡಿಕೆಗೆ ಇದು ಉತ್ತಮ ಸಮಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಸ್ತುತದಲ್ಲಿ ಚಿನ್ನದ ದರ ಸರಿಸುಮಾರು 46 ಸಾವಿರದ ಆಸುಪಾಸಿನಲ್ಲಿದೆ. ಕಳೆದೆರಡು ವಾರದಿಂದ ದರ ಗಮಿಸಿದಾಗ ಚಿನ್ನದ ದರ ಏರುತ್ತಲೇ ಇದೆ. ಹಾಗಾಗಿ ಏಪ್ರಿಲ್​ ತಿಂಗಳ ಅಂತ್ಯದೊಳಗೆ ಚಿನ್ನದ ದರ ಇನ್ನೂ ಏರಬಹುದು. ಅದರಲ್ಲೂ ಮುಂಬರುವ ಮೇ ತಿಂಗಳಿನಲ್ಲಿ ಅಕ್ಷಯ ತೃತೀಯ ಕೂಡಾ ಇರುವುದರಿಂದ ಚಿನ್ನದ ಬೇಡಿಕೆ ಹೆಚ್ಚಾಗಿರುತ್ತದೆ. ಆದ್ದರಿಂದ ಚಿನ್ನದ ದರ ಏರಿಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಸಮಯದಲ್ಲೇ ಚಿನ್ನ ಖರೀದಿಸಿದರೆ ಉತ್ತಮ ಎಂಬುದು ಹಲವರ ಅಭಿಪ್ರಾಯ. ಇಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ 43,550 ರೂಪಾಯಿ ಇದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನ ದರ 47,510 ರೂಪಾಯಿ ಇದೆ. 1ಕೆಜಿ ಬೆಳ್ಳಿ ದರ 67,200 ರೂಪಾಯಿ ಇದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ 1 ಗ್ರಾಂ ಚಿನ್ನದ ದರ 4,355 ರೂಪಾಯಿ ಇದೆ. 8 ಗ್ರಾಂ ಚಿನ್ನದ ದರ 34,840 ರೂಪಾಯಿ ಇದೆ. 10 ಗ್ರಾಂ ಚಿನ್ನದ ದರ 43,550 ರೂಪಾಯಿ ಇದೆ. ಹಾಗೂ 100 ಗ್ರಾಂ ಚಿನ್ನದ ದರ 4,34,100 ರೂಪಾಯಿ ಇದೆ.

24 ಕ್ಯಾರೆಟ್ ಚಿನ್ನದ ದರ ಮಾಹಿತಿ 1 ಗ್ರಾಂ ಚಿನ್ನದ ದರ 4,751 ರೂಪಾಯಿ ಇದೆ. 8 ಗ್ರಾಂ ಚಿನ್ನ 37,888 ರೂಪಾಯಿ ಇದೆ. 10 ಗ್ರಾಂ ಚಿನ್ನ 47,510 ರೂಪಾಯಿ ಇದ್ದು, 100 ಗ್ರಾಂ ಚಿನ್ನದ ದರ 4,75,100 ರೂಪಾಯಿಗೆ ಮಾರಾಟವಾಗುತ್ತಿದೆ.

ಬೆಂಗಳೂರಿನಲ್ಲಿ ಬೆಳ್ಳಿ ದರ 1 ಗ್ರಾಂ ಬೆಳ್ಳಿ ದರ ಇಂದು 67.20 ರೂಪಾಯಿ ಇದೆ. 8 ಗ್ರಾಂ ಬೆಳ್ಳಿ ದರ 537.60 ರೂಪಾಯಿ ಇದೆ. 10 ಗ್ರಾಂ ಬೆಳ್ಳಿ ದರ 672 ರೂಪಾಯಿ ಇದ್ದು, 100 ಗ್ರಾಂ ಬೆಳ್ಳಿ ದರ 6,720 ರೂಪಾಯಿ ಇದೆ. ಹಾಗೆಯೇ 1ಕೆಜಿ ಬೆಳ್ಳಿ ದರ 67,200 ರೂಪಾಯಿಗೆ ಮಾರಾಟವಾಗುತ್ತಿದೆ.

ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 45,700 ರೂಪಾಯಿ ಇದೆ. ಹಾಗೆಯೇ ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,800 ರೂಪಾಯಿಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ದರ 44,750 ರೂಪಾಯಿ ಇದೆ. ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 47,780 ರೂಪಾಯಿ ಕೊಟ್ಟು ಜನರು ಚಿನ್ನ ಖರೀದಿಸುತ್ತಿದ್ದಾರೆ.

ಇದನ್ನೂ ಓದಿ: Gold Rate Today: ಯುಗಾದಿ ಹಬ್ಬಕ್ಕೆ ಚಿನ್ನದ ಉಡುಗೊರೆ; ಖರೀದಿಸುವ ಆಸೆ ಇದ್ದರೆ ದರ ವಿವರ ಇಲ್ಲಿದೆ!

Gold Price Today: ಕೂಡಿಟ್ಟ ಹಣಕ್ಕೆ ಚಿನ್ನ ಕೊಳ್ಳಬಹುದೇ ಎಂದು ಯೋಚಿಸಿ.. ಚಿನ್ನಾಭರಣದ ದರ ಹೀಗಿದೆ!

(Gold Rate Today in Bengaluru Mumbai Hyderabad Chennai and Delhi silver price on April 13th 2021 )

Follow Us
shruti hegde
shruti hegde
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ