Gold Price Today: ಕೂಡಿಟ್ಟ ಹಣಕ್ಕೆ ಚಿನ್ನ ಕೊಳ್ಳಬಹುದೇ ಎಂದು ಯೋಚಿಸಿ.. ಚಿನ್ನಾಭರಣದ ದರ ಹೀಗಿದೆ!

Gold Silver Price in Bangalore Today: ಚಿನ್ನ, ಬೆಳ್ಳಿ ದರವನ್ನು ದೈನಂದಿನ ದರ ಬದಲಾವಣೆಯಲ್ಲಿ ಪರಿಶೀಲಿಸಿದಾಗ ಕೊಂಚ ಏರಿಕೆ ಕಂಡಿದೆ. ನೀವು ಕೂಡಿಟ್ಟ ಹಣಕ್ಕೆ ಚಿನ್ನ ಕೊಳ್ಳಬಹುದಾದರೆ ಚಿನ್ನ ಕೊಳ್ಳುವತ್ತ ಯೋಚಿಸಿ. ದರ ಮಾಹಿತಿ ಇಲ್ಲಿದೆ.

Gold Price Today: ಕೂಡಿಟ್ಟ ಹಣಕ್ಕೆ ಚಿನ್ನ ಕೊಳ್ಳಬಹುದೇ ಎಂದು ಯೋಚಿಸಿ.. ಚಿನ್ನಾಭರಣದ ದರ ಹೀಗಿದೆ!
ಚಿನ್ನದ ಆಭರಣ (ಪ್ರಾತಿನಿಧಿಕ ಚಿತ್ರ)
Follow us
shruti hegde
|

Updated on:Mar 28, 2021 | 9:16 AM

ಬೆಂಗಳೂರು: ಚಿನ್ನ ಕೊಳ್ಳುವಾಗ ದರ ಎಷ್ಟಿರಬಹುದು ಎಂಬ ಪ್ರಶ್ನೆ ಮೂಡುವುದು ಸಾಮಾನ್ಯ. ಹಾಗೇ ಅದೆಷ್ಟೋ ವರ್ಷಗಳಿಂದ ಕೂಡಿಡುತ್ತಾ ಬಂದಿದ್ದ ಹಣವನ್ನು ಯಾವ ಸಮಯದಲ್ಲಿ ಚಿನ್ನಕ್ಕಾಗಿ ವ್ಯವಯಿಸುವುದು ಎಂದು ಕಾಯುತ್ತಿರುತ್ತೇವೆ. ಉತ್ತಮ ಸಮಯ ಬರಬೇಕೆಂದರೆ ಚಿನ್ನ ದರ ಇಳಿದಿರಬೇಕು. ಅಷ್ಟೊಂದು ದುಬಾರಿ ವಸ್ತುವನ್ನು ಕೊಂಡುಕೊಳ್ಳುತ್ತಿರುವಾಗ ಕಡಿಮೆ ಬೆಲೆಯಲ್ಲಿ ಉತ್ತಮ ಮೌಲ್ಯದ ಬಂಗಾರ ಸಿಗಲಿ ಎಂಬುದು ಎಲ್ಲರ ಆಸೆ. ಹಾಗಿದ್ದಾಗ ನೀವು ಕೂಡಿಟ್ಟ ಹಣಕ್ಕೆ ಚಿನ್ನ ಕೊಳ್ಳುವುದು ಸೂಕ್ತ ಸಮಯ ಅನಿಸಿದರೆ ಚಿನ್ನ ಕೊಳ್ಳಿರಿ. ಆಭರಣದ ಚಿನ್ನ ಮಾರುಕಟ್ಟೆಯಲ್ಲಿ ಯಾವ ದರದಲ್ಲಿ ವಹಿವಾಟು ನಡೆಸುತ್ತಿದೆ ಎಂಬುದರ ವಿವರ ಇಲ್ಲಿದೆ.

ಚಿನ್ನ ಕೊಳ್ಳಲು ಶುಭ ದಿನವನ್ನೂ ನೋಡುತ್ತೇವೆ. ಹಾಗೆಯೇ ಚಿನ್ನ ಕುಸಿತದತ್ತ ಕಾಣುವುದನ್ನೂ ಕಾಯುತ್ತಿರುತ್ತೇವೆ. ಮಹಿಳೆಯರಿಗಾದರೆ ಚಿನ್ನ ಬಹಳ ಪ್ರಿಯ ವಸ್ತು. ಚಂದದ ಉಡುಗೆ ತೊಟ್ಟು, ಚಿನ್ನಾಭರಣ ಧರಿಸಿ ಅಂದವಾಗಿ ಅಲಂಕಾರಗೊಳ್ಳುವುದೆಂದರೆ ಇಷ್ಟ. ಹಾಗೆಯೇ ಪುರುಷರಿಗೆ, ಕೈಗೊಂದು ಬಂಗಾರದ ಕಡಗ, ಕೈ ಬೆರಳುಗಳಿಗೆ ಉಂಗುರ ಧರಿಸಬೇಕೆಂಬ ಆಸೆ. ಇನ್ನು, ತನ್ನ ಪ್ರೇಯಸಿ ಅಥವಾ, ಪ್ರಿಯತಮೆಗೆ ಸರ್ಪ್ರೈಸ್​ ಗಿಫ್ಟ್​ ಕೊಟ್ಟು ಖುಷಿ ನೀಡಬೇಕು ಅದು ಚಿನ್ನ ಉಂಗುರವೋ, ಸರವೋ ಆಗಿರಬೇಕು ಎಂಬುದು ಹುಡುಗ ಹುಡುಗಿಯರ ಆಸೆ. ಆಸೆಗೆ ಕೊನೆಯಿದೆಯೇ? ಹಣವಿದ್ದಾಗ ಚಿನ್ನ ಕೊಳ್ಳಲು ಭಯವಿಲ್ಲ. ಚಿನ್ನ ಕೊಳ್ಳಲೇ ಬೇಕೆಂದಾಗ ಹಣ ಕೂಡಿಡುವತ್ತ ದಾರಿಯನ್ನು ಹುಡುಕುತ್ತೇವೆ. ಹೀಗಿದ್ದಾಗ ಚಿನ್ನ ಕೊಳ್ಳಲು ಇಂದು ಒಳ್ಳೆಯ ದಿನ ಎಂದೆನಿಸಿದರೆ ಇಂದೇ ಚಿನ್ನ ಕೊಳ್ಳುವುದರ ಕುರಿತು ಯೋಚಿಸಿ.

22 ಕ್ಯಾರೆಟ್ 10 ಗ್ರಾಂ ಚಿನ್ನ ದರ ನಿನ್ನೆ 41,700 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ41,900 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 200 ರೂಪಾಯಿ ಏರಿಕೆ ಕಂಡಿದೆ. ಹಾಗೆಯೇ 24 ಕ್ಯಾರೆಟ್ 10ಗ್ರಾಂ ಚಿನ್ನ ನಿನ್ನೆ 45,490 ರೂಪಾಯಿ ಆಗಿದ್ದು, ಇಂದು ದರ 45,710 ರೂಪಾಯಿ ಆಗಿದೆ. ಬೆಳ್ಳಿ ದರ ಪರಿಶೀಲಿಸಿದಾಗ ದರದಲ್ಲಿ ಕೊಂಚ ಏರಿಕೆಯಾಗಿದ್ದು, 1ಕೆಜಿ ಬೆಳ್ಳಿ ದರ ನಿನ್ನೆ 65,400 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 65,700 ರೂಪಾಯಿ ನಿಗದಿಯಾಗಿದೆ.

22 ಕ್ಯಾರೆಟ್ ಚಿನ್ನ ದೈನಂದಿನ ದರ ಬದಲಾವಣೆಯನ್ನು ಪರಿಶೀಲಿಸಿದಾಗ ಚಿನ್ನ ದರದಲ್ಲಿ ಕೊಂಚ ಏರಿಕೆಯಾಗಿದೆ. 1 ಗ್ರಾಂ ಚಿನ್ನ ನಿನ್ನೆ 4,170 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 4,190 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 160 ರೂಪಾಯಿ ಏರಿಕೆ ಕಂಡಿದೆ. 8 ಗ್ರಾಂಚಿನ್ನ ದರ ನಿನ್ನೆ 33,360 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 33,520 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 160 ರೂಪಾಯಿ ಏರಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 41,700 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 41,900 ರೂಪಾಯಿಗೆ ಜಿಗಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 200 ರೂಪಾಯಿ ಏರಿಕೆ ಕಂಡಿದೆ. ಹಾಗೆಯೇ 100 ಗ್ರಾಂ ಚಿನ್ನ ದರ ನಿನ್ನೆ 4,17,000 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 4,19,000 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2,000 ರೂಪಾಯಿ ಏರಿಕೆ ಕಂಡಿದೆ.

22 ಕ್ಯಾರೆಟ್ ಚಿನ್ನ ದರ ಮಾಹಿತಿ

1 ಗ್ರಾಂ ಚಿನ್ನ ದರ ನಿನ್ನೆ 4,549 ರೂಪಾಯಿ ಆಗಿದ್ದು, ಇಂದು ದರ 4,571ರೂಪಾಯಿ ನಿಗದಿಯಾಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 36,392 ರೂಪಾಯಿ ಆಗಿದ್ದು, ಇಂದು ದರ 36,568 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 176 ರೂಪಾಯಿ ಏರಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 45,490 ರೂಪಾಯಿ ಆಗಿದ್ದು, ಇಂದು ದರ 45,710 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 220 ರೂಪಾಯಿ ಏರಿಕೆ ಕಂಡಿದೆ. 100 ಗ್ರಾಂ ಚಿನ್ನ ದರ ನಿನ್ನೆ 4,54,900ರೂಪಾಯಿ ಆಗಿದ್ದು ಇಂದು ದರ 4,57,100 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2,200 ರೂಪಾಯಿ ಏರಿಕೆ ಕಂಡಿದೆ.

ಬೆಳ್ಳಿ ದರ ಮಾಹಿತಿ ದೈನಂದಿನ ದರ ಪರಿಶೀಲಿಸಿದಾಗ ಬೆಳ್ಳಿ ದರ ಕೂಡಾ ಏರಿಕೆ ಕಂಡಿದ್ದು, 1ಗ್ರಾಂ ಬೆಳ್ಳಿ ದರ ನಿನ್ನೆ 65.40 ರೂಪಾಯಿಗೆ ಮಾರಾಟವಾಗಿದದು ಇಂದು ದರ 65.70 ರೂಪಾಯಿ ಆಗಿದೆ. 8 ಗ್ರಾಂ ಬೆಳ್ಳಿ ದರನಿನ್ನೆ 523.20 ರೂಪಾಯಿ ಆಗಿದ್ದು, ಇಂದು ದರ 525.60 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2.40 ರೂಪಾಯಿ ಏರಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 654 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 657 ರೂಪಾಯಿ ಆಗಿದೆ. ಹಾಗೆಯೇ 100 ಗ್ರಾಂ ಬೆಳ್ಳಿ ದರ ನಿನ್ನೆ 6,540 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 6,570 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 300 ರೂಪಾಯಿಯಷ್ಟು ಏರಿಕೆ ಕಂಡಿದೆ.

ಇದನ್ನೂ ಓದಿ: Gold Price Today: ಚಿನ್ನ ಕೊಳ್ಳುವವರಿಗೆ ಸುವರ್ಣಾವಕಾಶ.. ಹಾಗಿದ್ದರೆ ಎಷ್ಟಿದೆ ದರ?

Gold Price Today: ಪ್ರಿಯತಮನಿಗೆ ಪ್ರೀತಿಯ ಚಿನ್ನದ ಉಂಗುರ ಕೊಡಿಸಿ.. ಚಿನ್ನದ ದರ ಎಷ್ಟಿದೆ? ನಾವು ಹೇಳ್ತೀವಿ!

Published On - 9:16 am, Sun, 28 March 21

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ