Gold Price Today: ಚಿನ್ನ ಕೊಳ್ಳುವವರಿಗೆ ಸುವರ್ಣಾವಕಾಶ.. ಹಾಗಿದ್ದರೆ ಎಷ್ಟಿದೆ ದರ?

Gold Silver Price in Bangalore Today: ದೈನಂದಿನ ದರ ಬದಲಾವಣೆಯನ್ನು ಗಮನಿಸಿದರೆ ಚಿನ್ನ ದರ ಕೊಂಚ ಏರಿಕೆ ಕಂಡಿದೆ. ಆದರೆ ಸಾರ್ವಕಾಲಿ ಗರಿಷ್ಠ ಮಟ್ಟ ತಲುಪಿದ್ದ ಚಿನ್ನ ಇದೀಗ ಇಳಿಕೆ ಕಂಡಿರುವುದು ಗ್ರಾಹಕರಿಗೆ ನಿರಾಳದ ಸಂಗತಿ. ಹಾಗಿದ್ದಾಗ ಚಿನ್ನ, ಬೆಳ್ಳಿ ದರ ಹೇಗಿದೆ ಎಂಬುದರ ವಿವರ ಇಲ್ಲಿದೆ.

Gold Price Today: ಚಿನ್ನ ಕೊಳ್ಳುವವರಿಗೆ ಸುವರ್ಣಾವಕಾಶ.. ಹಾಗಿದ್ದರೆ ಎಷ್ಟಿದೆ ದರ?
ಚಿನ್ನದ ಕಿವಿಯೋಲೆ (ಸಾಂದರ್ಭಿಕ ಚಿತ್ರ)
Follow us
shruti hegde
|

Updated on: Mar 26, 2021 | 9:28 AM

ಬೆಂಗಳೂರು: ಚಿನ್ನಕೊಳ್ಳಲು ಉತ್ತಮ ಸಮಯ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ ಚಿನ್ನ ಇದೀಗ ಕುಸಿತ ಕಂಡಿದೆ. ದೈನಂದಿನ ದರ ಬದಲಾವಣೆಯಲ್ಲಿ ಚಿನ್ನ ದರ ಕೊಂಚ ಏರಿದಂತೆ ಅನಿಸಿದರೂ 100 ರೂಪಾಯಿ ಅಂತರದಲ್ಲಿ ದರ ಏರಿಕೆ ಹಾಗೂ ಇಳಿಕೆ ಕಾಣುವುದು ಸಾಮಾನ್ಯ. ಕಳೆದ ವರ್ಷ ಚಿನ್ನ 52 ಸಾವಿರದ ಗಡಿ ದಾಟಿತ್ತು. ಹಾಗಿದ್ದಾಗ ಈ ವರ್ಷದಲ್ಲಿ ಚಿನ್ನ ದರ ಗಮನಿಸಿದಾಗ ಇಳಿಕೆ ಕಂಡಿರುವುದಂತೂ ನಿಜ. ಹಾಗಿದ್ದರೆ ಚಿನ್ನ ದರ ಎಷ್ಟಿದೆ? ಎಂಬುದರ ಮಾಹಿತಿ ಇಲ್ಲಿದೆ.

ಇಂದಿನ ದರವನ್ನು ಪರಿಶೀಲಿಸಿದಾಗ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ ದರ 10ಗ್ರಾಂಗೆ 42,000 ರೂಪಾಯಿ ನಿಗದಿಯಾಗಿದೆ. 24 ಕ್ಯಾರೆಟ್ ಚಿನ್ನ ದರ ಇಂದು 10 ಗ್ರಾಂಗೆ 45,820 ರೂಪಾಯಿ ಆಗಿದೆ. ಇನ್ನು, ಬೆಳ್ಳಿ ದರವನ್ನು ಗಮನಿಸಿದಾಗ ದೈನಂದಿನ ದರ ಬದಲಾವಣೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು, 1 ಕೆಜಿ ಬೆಳ್ಳಿ ದರ 65,700 ರೂಪಾಯಿ ಇದೆ.

22 ಕ್ಯಾರೆಟ್ ಚಿನ್ನ 1 ಗ್ರಾಂ ಚಿನ್ನ ದರ ಇಂದು 4,200 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯನ್ನು ಪರಿಶೀಲಿಸಿದಾಗ ಚಿನ್ನ ದರ ಕೊಂಚ ರಿಕೆ ಕಂಡಿದೆ. ನಿನ್ನೆ 1 ಗ್ರಾಂ ಚಿನ್ನ 4,190 ರೂಪಾಯಿಗೆ ಮಾರಾಟವಾಗಿತ್ತು. ಹಾಗೆಯೇ 8 ಗ್ರಾಂ ಚಿನ್ನ ನಿನ್ನೆ 33,520 ರೂಪಾಯಿಗೆ ಮಾರಾಟವಾಗಿತ್ತು. ಇಂದು ದರ 333,600 ರೂಪಾಯಿಗೆ ನಿಗದಿಯಾಗಿದೆ. 10 ಗ್ರಾಂ ಚಿನ್ನ ನಿನ್ನೆ 41,900 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 42,000 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿ ಏರಿಕೆ ಕಂಡಿದೆ. 100 ಗ್ರಾಂ ಚಿನ್ನ ದರ ನಿನ್ನೆ 4,19,000 ರೂಪಾಯಿ ಇದ್ದು, ದರ 4,20,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,000 ರೂಪಾಯಿ ಏರಿಕೆ ಕಂಡಿದೆ.

24 ಕ್ಯಾರೆಟ್ ಚಿನ್ನ ದರ ಮಾಹಿತಿ 1 ಗ್ರಾಂ ಚಿನ್ನ ನಿನ್ನೆ 4,570 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 4,582 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. 8 ಗ್ರಾಂ ಚಿನ್ನ ದರ ನಿನ್ನೆ 36,560 ರೂಪಾಯಿಗೆ ಮಾರಾಟವಾಗಿದೆ. ಇಂದು ದರ 36,656 ರೂಪಾಯಿ ನಿಗದಿಯಾಗಿದೆ. 10 ಗ್ರಾಂ ಚಿನ್ನ ನಿನ್ನೆ 45,700 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 45,820 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಪರಿಶೀಲಿಸಿದಾಗ 120 ರೂಪಾಯಿಯಷ್ಟು ದರ ಏರಿಕೆ ಕಂಡಿದೆ. ಹಾಗೆಯೇ 100 ಗ್ರಾಂ ಚಿನ್ನ ದರ ನಿನ್ನೆ 4,57,000 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 4,58,200 ರೂಪಾಯಿ ನಿಗದಿಯಾಗಿದೆ.

ಬೆಳ್ಳಿ ದರ ಮಾಹಿತಿ

ಬೆಳ್ಳಿ ದರವನ್ನು ಪರಿಶೀಲಿಸಿದಾಗ ಕೊಂಚ ಇಳಿಕೆ ಕಂಡು ಬಂದಿದೆ. 1 ಗ್ರಾಂ ಬೆಳ್ಳಿ ದರ ನಿನ್ನೆ 66.50 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 65.70 ರೂಪಾಯಿ ನಿಗದಿಯಾಗಿದೆ. 8 ಗ್ರಾಂ ಬೆಳ್ಳಿ ನಿನ್ನೆ 532 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 525.60 ರೂಪಾಯಿ ನಿಗದಿಯಾಗಿದೆ. ಹಾಗೆಯೇ 10 ಗ್ರಾಂ ಬೆಳ್ಳಿ ನಿನ್ನೆ 665 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 657 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 6,650 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 6,570 ರೂಪಾಯಿಗೆ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ದರ ನಿನ್ನೆ 66,500 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 65,700 ರೂಪಾಯಿಗೆ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 800 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.

ಇದನ್ನೂ ಓದಿ: Gold Price Today: ಪ್ರಿಯತಮನಿಗೆ ಪ್ರೀತಿಯ ಚಿನ್ನದ ಉಂಗುರ ಕೊಡಿಸಿ.. ಚಿನ್ನದ ದರ ಎಷ್ಟಿದೆ? ನಾವು ಹೇಳ್ತೀವಿ!

Gold Price | ಚಿನ್ನದ ದರ ಸತತ ಇಳಿಕೆ; ಖರೀದಿಗೆ ಮುಂದಾದ ಗ್ರಾಹಕರು

ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ