AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಾವಳಿಯ ಲವ್ ಜಿಹಾದ್ ಕೇಸ್‌ಗೆ ಟ್ವಿಸ್ಟ್.. 23 ವರ್ಷದ ಯುವತಿ ಜೊತೆ ಮದುವೆಯಾಗಿದ್ದ 62 ವರ್ಷದ ಹೆಣ್ಣುಬಾಕ ವೃದ್ಧ ಅರೆಸ್ಟ್

ಆಕೆಗೆ 22 ವರ್ಷ ವಯಸ್ಸು. ಸುಂದರ ಮಹಿಳೆ. ಅವನಿಗೆ 62 ವರ್ಷ. ಅವರಿಬ್ಬರ ಮದುವೆ ಇಡೀ ಕರಾವಳಿಯಲ್ಲಿ ಬಾರೀ ಚರ್ಚೆ ಹುಟ್ಟಾಕಿತ್ತು. ಯುವತಿಯಿಂದ ಲವ್ ಜಿಹಾದ್ ಆಗಿದೆ ಅಂತಾ ಹಿಂದೂ ಸಂಘಟನೆಗಳು ರಸ್ತೆಗಿಳಿಯಲು ಸಿದ್ಧರಾಗಿದ್ರು. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈಗ ಕೇಸ್​ಗೆ ಟ್ವಿಸ್ಟ್ ಸಿಕ್ಕಿದೆ.

ಕರಾವಳಿಯ ಲವ್ ಜಿಹಾದ್ ಕೇಸ್‌ಗೆ ಟ್ವಿಸ್ಟ್.. 23 ವರ್ಷದ ಯುವತಿ ಜೊತೆ ಮದುವೆಯಾಗಿದ್ದ 62 ವರ್ಷದ ಹೆಣ್ಣುಬಾಕ ವೃದ್ಧ ಅರೆಸ್ಟ್
ಆರೋಪಿ ಗಂಗಾಧರ್
ಆಯೇಷಾ ಬಾನು
ಆಯೇಷಾ ಬಾನು|

Updated on: Mar 26, 2021 | 7:37 AM

Share

ಮಂಗಳೂರಿನ ಉದ್ಯಮಿ, 62 ವರ್ಷದ ಗಂಗಾಧರ್​ನನ್ನ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ 22 ವರ್ಷದ ವಿಧವೆ ಮುಸ್ಲಿಂ ಯುವತಿ ಜೊತೆ ಮದುವೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದು ಹಿಂದು ಸಂಘಟನೆಯ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಗಂಗಾಧರ್ ಪತ್ನಿ ಯಶೋಧಾ ಎಂಬುವವರು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನ್ನ ಪತಿಯನ್ನು ಕಿಡ್ನ್ಯಾಪ್ ಮಾಡಿ ಮತಾಂತರ ಮಾಡಿ 22 ವರ್ಷದ ಯುವತಿ ಜೊತೆ ಮದುವೆ ಮಾಡಿಸಿದ್ದಾರೆ ಅಂತಾ ದೂರು ನೀಡಿದ್ರು. ಇದು ಕರಾವಳಿಯಾದ್ಯಂತ ಲವ್ ಜಿಹಾದ್ ಅಂತಾ ಸುದ್ದಿಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಈ ಗಂಗಾಧರ್‌ನನ್ನೇ ಅರೆಸ್ಟ್ ಮಾಡಿದ್ದಾರೆ. ಈ ಮೂಲಕ ಲವ್ ಜಿಹಾದ್ ಕೇಸ್​ಗೆ ಟ್ವಸ್ಟ್ ಸಿಕ್ಕಿದೆ.

ಅಸಲಿಗೆ ಈ ಗಂಗಾಧರ್ ಒಬ್ಬ ಹೆಣ್ಣುಬಾಕನಂತೆ. ಮೊದಲ ಪತ್ನಿ ಸೇರಿದಂತೆ 3-4 ಜನ ಹೆಂಡತಿಯರು ಇದ್ದಾರಂತೆ. ಇದ್ರ ಬೆನ್ನಟ್ಟಿದ್ದ ಪೊಲೀಸರಿಗೆ ಎರಡನೇ ಪತ್ನಿಯ ಬಗ್ಗೆ ಗೊತ್ತಾಗಿದೆ. ಹಾಗೇ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದ ಅಂತ ಇತ್ತೀಚೆಗೆ ಮದುವೆಯಾದ 22 ವರ್ಷದ ಮುಸ್ಲಿಂ ಯುವತಿ ದೂರು ನೀಡಿದ್ದಾಳೆ. ಇದನ್ನು ಪರಿಶೀಲನೆ ಮಾಡಿದಾಗ ಈತ ಮೂರು ಮದುವೆಯಾಗಿರುವ ಬಗ್ಗೆ ಗೊತ್ತಾಗಿದೆ. ಇನ್ನು ಈತ ಕಿಡ್ನ್ಯಾಪ್ ಆಗಿರಲಿಲ್ಲ. ಮಹಮ್ಮದ್ ಅನೀಸ್ ಅಂತಾ ಪರಿಚಯ ಮಾಡಿಕೊಂಡು, ಬಳಿಕ 22 ವರ್ಷದ ಯುವತಿ ಜೊತೆ ಲೈಂಗಿಕ ಸಂಪರ್ಕ ಬೆಳಸಿ, ಆಕೆ ಗರ್ಭಿಣಿಯಾದಾಗ ಮಗುವನ್ನ ತೆಗೆಸಿರುವುದು ಗೊತ್ತಾಗಿದೆ.

ಇನ್ನು ಇಂಟರೆಸ್ಟಿಂಗ್ ಅಂದ್ರೆ ಈತನಿಗೆ ಮೂರು ಮದುವೆಯಾಗಿರೋ ಬಗ್ಗೆ ಕನ್ಫರ್ಮ್ ಆಗಿದೆ. ಆದ್ರೆ ಪೊಲೀಸರ ಪ್ರಕಾರ ಈತ ನಾಲ್ಕೈದು ಮದುವೆಯಾಗಿದ್ದಾನಂತೆ. ಇನ್ನು ಮೊದಲ ಪತ್ನಿ ಸೇರಿದಂತೆ ಇಬ್ಬರು ಪತ್ನಿಯರಿಗೆ ಐದಾರು ಮಕ್ಕಳು ಇರೋದು ಕೂಡ ಗೊತ್ತಾಗಿದೆ. ಪೊಲೀಸರು ಈತನ ವಂಶವೃಕ್ಷ ತಯಾರಿಸಿ ತನಿಖೆ ಮಾಡುತ್ತಿದ್ದಾರೆ.

ಒಟ್ನಲ್ಲಿ ಲವ್ ಜಿಹಾದ್ ಅಂತ ಕರಾವಳಿಯನ್ನ ಬೆಚ್ಚಿ ಬೀಳಿಸಿದ್ದ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದ್ದು, ನಾಲ್ಕೈದು ಮದುವೆ ಆಗಿ ನವರಂಗಿ ಆಟ ಆಡುತ್ತಿದ್ದ ವೃದ್ಧ ಅಂದರ್ ಆಗಿದ್ದಾನೆ.

ಇದನ್ನೂ ಓದಿ:ಉದ್ಯಮಿಯ ಅಪಹರಿಸಿ ಮುಸ್ಲಿಂ ಯುವತಿ ಜೊತೆ ಮದುವೆ; ಮಂಗಳೂರಿನ ಬಿಲ್ಡರ್ ಪತ್ನಿಯಿಂದ ಪೊಲೀಸರಿಗೆ ದೂರು 

Follow Us
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು